Cash Limit at Home: ಮನೆಯಲ್ಲಿ ಎಷ್ಟು ಹಣವನ್ನು ಇಟ್ಟುಕೊಳ್ಳಬಹುದು ? ಆದಾಯ ತೆರಿಗೆ ನಿಯಮ ಹೇಳುವುದೇನು ?
Cash Limit at Home:ತುರ್ತು ಸಂದರ್ಭಗಳಿಗಾಗಿ ನಮ್ಮ ಮನೆಗಳಲ್ಲಿ ಎಲ್ಲಾ ಸಮಯದಲ್ಲೂ ನಿರ್ದಿಷ್ಟ ಪ್ರಮಾಣದ ಹಣವನ್ನು ಇರಿಸಿಕೊಳ್ಳುತ್ತೇವೆ.ಮನೆಯಲ್ಲಿ ನಗದು ಇಟ್ಟುಕೊಳ್ಳಲು ಕೆಲವು ನಿಯಮಗಳಿವೆ.
Cash Limit at Home : ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದಿಂದಾಗಿ ಜೀವನದ ಎಲ್ಲಾ ಅಂಶಗಳು ಅನೇಕ ಬದಲಾವಣೆಗಳಿಗೆ ಒಳಗಾಗಿವೆ. ಕೆಲವು ವರ್ಷಗಳ ಹಿಂದೆ ನಾವು ಇವುಗಳ ಬಗ್ಗೆ ಹೆಚ್ಚು ಯೋಚಿಸಿರಲಿಲ್ಲ. ಅಂತಹ ಬದಲಾವಣೆಯೆಂದರೆ ಡಿಜಿಟಲ್ ವಹಿವಾಟು. ನಗದು ರಹಿತ ಡಿಜಿಟಲ್ ವಹಿವಾಟಿಗೆ ಜನರಿಂದ ಒಮ್ಮತದ ಬೆಂಬಲ ಸಿಕ್ಕಿದೆ. ಅದೂ ಸಹ ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ಈ ರೀತಿಯ ವಹಿವಾಟುಗಳು ದೊಡ್ಡ ಮಟ್ಟದ ಬೆಳವಣಿಗೆಯನ್ನು ಕಂಡವು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಆನ್‌ಲೈನ್‌ನಲ್ಲಿಯೇ ಪಾವತಿಸುತ್ತಾರೆ. ಈ ಮೂಲಕ ನಾವು ಹೊರಗೆ ಹೋಗುವಾಗ ಹಣವನ್ನು ನಗದು ರೂಪದಲ್ಲಿ ಕೊಂಡೊಯ್ಯುವ ಅವಶ್ಯಕತೆ ಇರುವುದಿಲ್ಲ. ಹಣವನ್ನು ಸುರಕ್ಷಿತವಾಗಿಡಲು ಇದು ತುಂಬಾ ಸಹಾಯ ಮಾಡುತ್ತದೆ. ಆದರೆ, ಇವೆಲ್ಲವನ್ನೂ ಬದಿಗಿಟ್ಟು ಇಂದಿಗೂ ಅನೇಕರು ನಗದು ವ್ಯವಹಾರವನ್ನೇ ನಡೆಸುತ್ತಿದ್ದಾರೆ.ಇಂಟರ್ನೆಟ್ ಅಪ್ಲಿಕೇಶನ್‌ಗಳ ಬಗ್ಗೆ ಅಷ್ಟೊಂದು ಪರಿಚಯವಿಲ್ಲದ ಜನರು ನಗದು ವರ್ಗಾವಣೆಯನ್ನು ನೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ : Gold Rate: ಭಾರತದಲ್ಲಿ ಚಿನ್ನದ ದರ ಕುಸಿತ: ನಿಮ್ಮ ನಗರದ ಬೆಲೆಯನ್ನು ಪರಿಶೀಲಿಸಿ!
ತುರ್ತು ಸಂದರ್ಭಗಳಿಗಾಗಿ ನಮ್ಮ ಮನೆಗಳಲ್ಲಿ ಎಲ್ಲಾ ಸಮಯದಲ್ಲೂ ನಿರ್ದಿಷ್ಟ ಪ್ರಮಾಣದ ಹಣವನ್ನು ಇರಿಸಿಕೊಳ್ಳುತ್ತೇವೆ.ಮನೆಯಲ್ಲಿ ನಗದು ಇಟ್ಟುಕೊಳ್ಳಲು ಕೆಲವು ನಿಯಮಗಳಿವೆ. ತೆರಿಗೆ ವಂಚನೆ ಮತ್ತು ಕಪ್ಪುಹಣದಂತಹ ಅನೇಕ ಹಣ ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು ಸರ್ಕಾರ ಇದಕ್ಕೆ ಸಂಬಂಧಿಸಿದ ಹಲವಾರು ನಿಯಮಗಳನ್ನು ರೂಪಿಸಿದೆ.
ಮನೆಯಲ್ಲಿ ಹಣವನ್ನು ಇಡುವ ನಿಯಮಗಳೇನು? :
ಆದಾಯ ತೆರಿಗೆ ನಿಯಮಗಳ ಪ್ರಕಾರ, ಮನೆಯಲ್ಲಿ ಹಣವನ್ನು ಇಡಲು ಯಾವುದೇ ಮಿತಿಯಿಲ್ಲ. ಒಬ್ಬ ವ್ಯಕ್ತಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರೆ, ಅವನು ಎಷ್ಟು ಹಣವನ್ನು ಬೇಕಾದರೂ ಇಟ್ಟುಕೊಳ್ಳಬಹುದು. ಆದರೆ ಅವರ ಬಳಿ ಇರುವ ಮೊತ್ತದ ದಾಖಲೆ ಇರಬೇಕು ಅಷ್ಟೇ. ಈ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಕೇಳಿದರೆ ನಿಮ್ಮ ಬಳಿ ಇರುವ ಮೊತ್ತದ ದಾಖಲೆ ತೋರಿಸಬೇಕು. ಇದಲ್ಲದೆ, ಐಟಿಆರ್ ಡಿಕ್ಲರೇಶನ್ ಅನ್ನು ಸಹ ತೋರಿಸಬೇಕು. ನಿಮ್ಮ ಬಳಿ ಇರುವ ಹಣದ ದಾಖಲೆ ನಿಮ್ಮಲ್ಲಿ ಇದ್ದರೆ ಮನೆಯಲ್ಲಿ ಎಷ್ಟೇ ಹಣವಿದ್ದರೂ ಆತಂಕ ಪಡುವ ಅಗತ್ಯವಿಲ್ಲ.
ಇದನ್ನೂ ಓದಿ : Govt employees Leave Policy :ಸರ್ಕಾರಿ ನೌಕರರ ರಜಾ ನಿಯಮದಲ್ಲಿ ಬದಲಾವಣೆ ! ಇನ್ನು ನೀವು ತೆಗೆದುಕೊಳ್ಳಲು ಸಾಧ್ಯವಾಗುವುದು ಇಷ್ಟೇ ರಜೆ
ಮನೆಯಲ್ಲಿ ನಗದು ಇಟ್ಟುಕೊಳ್ಳಲು ಇರುವ ಇತರ ನಿಯಮಗಳು :
ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ ಪ್ರಕಾರ,
- ಒಂದೇ ಬಾರಿಗೆ 50,000 ರೂ.ಗಿಂತ ಹೆಚ್ಚು ಹಣ ವಿತ್ ಡ್ರಾ ಮಾಡಿದರೆ ಪ್ಯಾನ್ ಕಾರ್ಡ್ ತೋರಿಸಬೇಕು.
- ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 194N ಅಡಿಯಲ್ಲಿ, ಒಬ್ಬ ವ್ಯಕ್ತಿಯು ಆರ್ಥಿಕ ವರ್ಷದಲ್ಲಿ 20 ಲಕ್ಷಕ್ಕಿಂತ ಹೆಚ್ಚು ವಿತ್ ಡ್ರಾ ಮಾಡಿದರೆ, TDS ಅನ್ನು ಪಾವತಿಸಬೇಕಾಗುತ್ತದೆ.
- ಈ ನಿಯಮವು ಸತತ 3 ವರ್ಷಗಳಿಂದ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸದವರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದನ್ನು ಗಮನಿಸಬೇಕು.
ಯಾವ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗುವುದು? :
ಒಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ಹೆಚ್ಚುವರಿ ಹಣವನ್ನು ಇಟ್ಟುಕೊಂಡಿದ್ದು, ಆದಾಯ ತೆರಿಗೆ ಅಧಿಕಾರಿಗಳು ಅದನ್ನು ಪ್ರಶ್ನಿಸಿದರೆ, ಆಗ ಮನೆಯಲ್ಲಿರುವ ಹಣದ ಮೂಲವನ್ನು ಬಹಿರಂಗಪಡಿಸಬೇಕು. ವ್ಯಕ್ತಿಯು ತನ್ನ ಬಾಲಿ ಇರುವ ಹಣದ ಮೂಲದ ಬಗ್ಗೆ ಹೇಳಲು ಸಾಧ್ಯವಾಗದಿದ್ದರೆ, ಅಪಾಯಕ್ಕೆ ಸಿಲುಕುವುದು ಗ್ಯಾರಂಟಿ.
ಇದನ್ನೂ ಓದಿ : ಸಿದ್ದರಾಮಯ್ಯ ಬಜೆಟ್ ಮೇಲೆ ಗಡಿಜಿಲ್ಲೆ ಜನರ ಬೆಟ್ಟದಷ್ಟು ನಿರೀಕ್ಷೆ !
ಆದಾಯ ತೆರಿಗೆ ರಿಟರ್ನ್‌ನಲ್ಲಿ ತೋರಿಸದ ಹಣವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರೆ ಆದಾಯ ತೆರಿಗೆ ಇಲಾಖೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು. ಹೀಗೆ ಕಡಿತಗೊಳಿಸಿದ ಮೊತ್ತದ ಮೇಲೆ 137% ವರೆಗಿನ ತೆರಿಗೆಯನ್ನು ನಿಮಗೆ ವಿಧಿಸಲಾಗುತ್ತದೆ.
ITR ಫೈಲ್ ಮಾಡುವವರಿಗೆ ಪರಿಹಾರ :
ಈ ಸಂದರ್ಭದಲ್ಲಿ ಐಟಿಆರ್ ಫೈಲಿಂಗ್ ಸ್ವಲ್ಪ ರಿಲೀಫ್ ಸಿಗುತ್ತದೆ. ಈ ವ್ಯಕ್ತಿಗಳು ಟಿಡಿಎಸ್ ಪಾವತಿಸದೆಯೇ ಬ್ಯಾಂಕ್, ಅಂಚೆ ಕಚೇರಿ ಅಥವಾ ಸಹಕಾರಿ ಬ್ಯಾಂಕ್ ಖಾತೆಗಳಿಂದ ಆರ್ಥಿಕ ವರ್ಷದಲ್ಲಿ 1 ಕೋಟಿ ವರೆಗೆ ನಗದು ಹಿಂಪಡೆಯಬಹುದು.
- ಒಂದು ವರ್ಷದಲ್ಲಿ 1 ಕೋಟಿಗಿಂತ ಹೆಚ್ಚಿನ ಹಿಂಪಡೆಯುವಿಕೆಗೆ 2% TDS ಪಾವತಿಸಬೇಕಾಗುತ್ತದೆ.
- ನೀವು ಕಳೆದ ಮೂರು ವರ್ಷಗಳಿಂದ ITR ಅನ್ನು ಸಲ್ಲಿಸದಿದ್ದರೆ, 20 ಲಕ್ಷಗಳ ನಗದು ವಹಿವಾಟಿನ ಮೇಲೆ 2% TDS ಅನ್ನು ಪಾವತಿಸಬೇಕಾಗುತ್ತದೆ.
- ನೀವು ಕಳೆದ ಮೂರು ವರ್ಷಗಳಿಂದ ಐಟಿಆರ್ ಅನ್ನು ಸಲ್ಲಿಸದಿದ್ದರೆ, 1 ಕೋಟಿಗಿಂತ ಹೆಚ್ಚಿನ ವಹಿವಾಟುಗಳಿಗೆ 5% ಟಿಡಿಎಸ್ ಪಾವತಿಸಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ನಿಯಮಗಳು ಯಾವುವು? :
- ಕ್ರೆಡಿಟ್ ಕಾರ್ಡ್‌ಗಳು ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಒಮ್ಮೆಗೆ 1 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದರೆ ಪರಿಶೀಲನೆಗೆ ಒಳಪಡಬಹುದು.
- ಸರಕು ಅಥವಾ ಸೇವೆಗಳಿಗೆ ನಗದು ಪಾವತಿ 2 ಲಕ್ಷವನ್ನು ಮೀರುವಂತಿಲ್ಲ. ಒಂದೊಮ್ಮೆ ಹಾಗೆ ಮಾಡುವುದಾದರೆ ಪ್ಯಾನ್ ಮತ್ತು ಆಧಾರ್ ಅನ್ನು ತೋರಿಸಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.