ದೀಪಾವಳಿಗೂ ಮೊದಲು ಬರಲಿದೆ ಮತ್ತೊಂದು ಅಗ್ಗದ E-bike
ಈ ಇ-ಬೈಕ್‌ನಿಂದ ನೀವು ಈ ಲಿಥಿಯಂ ಅಯಾನ್ ಬ್ಯಾಟರಿಯನ್ನು ತೆಗೆದು ಅದನ್ನು ಎಲ್ಲಿ ಬೇಕಾದರೂ ಚಾರ್ಜ್ ಮಾಡಬಹುದು. ಅಂದರೆ ನೀವು ಬ್ಯಾಟರಿಯನ್ನು ಲಾಕ್ ಮಾಡಬಹುದು ಮತ್ತು ಅನ್ಲಾಕ್ ಮಾಡಬಹುದು.
ನವದೆಹಲಿ: ಭಾರತದಲ್ಲಿ ಎಲೆಕ್ಟ್ರಿಕ್ ವಾಹನದತ್ತ (Electric Vehicle) ಒಲವು ಹೆಚ್ಚುತ್ತಿದೆ. ಈ ಕಾರಣದಿಂದಾಗಿ ಕಂಪನಿಗಳು ಸಹ ಹೊಸ ಉತ್ಪನ್ನಗಳನ್ನು ತರುತ್ತಿವೆ. ಈ ಸರಣಿಯಲ್ಲಿ ಬ್ರಿಟನ್‌ನ ಇ-ಬೈಕ್‌ಗಳನ್ನು ತಯಾರಿಸುವ ಗೋ ಜೀರೋ ಮೊಬಿಲಿಟಿ (Go Zero Mobility) ಕಂಪನಿಯು ಮುಂದಿನ ತಿಂಗಳು ಭಾರತದಲ್ಲಿ ಇ-ಬೈಕ್ ಅನ್ನು ಬಿಡುಗಡೆ ಮಾಡಲಿದೆ. ಈಗ ಇ-ಬೈಕ್ ಎಲ್ಲರಿಗೂ ಕೈಗೆಟುವ ದರದಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.
ಕಂಪನಿಯ ಪ್ರಕಾರ ಈ ಇ -ಬೈಕ್ ನಲ್ಲಿ ಸವಾರಿ ಸಹ ಸುಲಭವಾಗುತ್ತದೆ. ಈ ಇ-ಬೈಕ್ ಅನ್ನು ನವೆಂಬರ್ 7, 2020 ರಂದು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಮುಂದಿನ ತಿಂಗಳು Go Zero Pro ಮತ್ತು Go Zero Lite ಎಂಬ ಎರಡು ಎಲೆಕ್ಟ್ರಿಕ್ ಬೈಕ್‌ಗಳನ್ನು ನಾವು ಬಿಡುಗಡೆ ಮಾಡಲಿದ್ದೇವೆ ಎಂದು ಯುಕೆ ಇ-ಬೈಕ್ ಕಂಪನಿಯ ಸ್ಥಾಪಕ ಮತ್ತು ಸಿಇಒ ಅಂಕಿತ್ ಕುಮಾರ್ ನಮ್ಮ ಸಹಾಯಕ ವೆಬ್ಸೈಟ್ ಜೀ ಬಿಸಿನೆಸ್ (ಡಿಜಿಟಲ್) ಗೆ ತಿಳಿಸಿದ್ದಾರೆ.
ಹಬ್ಬಗಳ ಋತುವಿನಲ್ಲಿ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಉತ್ತಮ ಅವಕಾಶ
ಇದು ಪ್ರೀಮಿಯಂ ಗುಣಮಟ್ಟ ಮತ್ತು ಜೀವನಶೈಲಿ ಉತ್ಪನ್ನವಾಗಿದೆ. ಆದ್ದರಿಂದ ಅಂತಹ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನಾವು ಈ ಉತ್ಪನ್ನವನ್ನು ತರುತ್ತಿದ್ದೇವೆ. ಅಮೆಜಾನ್‌ನಲ್ಲಿ ಬೈಕ್ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ ಎಂದವರು ಮಾಹಿತಿ ನೀಡಿದ್ದಾರೆ.
ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ನಾವು 3000 ಇ-ಬೈಕ್‌ಗಳನ್ನು ಮಾರಾಟ ಮಾಡುವ ಗುರಿ ಹೊಂದಿದ್ದೇವೆ. ಹೊಸ ಇ-ಬೈಕ್ (E-Bike) ಪೂರ್ಣ ಚಾರ್ಜ್ ಆದ ನಂತರ ಅದು 25 ಕಿ.ಮೀ ವರೆಗೆ ಪ್ರಯಾಣಿಸುತ್ತದೆ ಎಂದು ಅಂಕಿತ್ ಹೇಳಿದ್ದಾರೆ.
ಕಂಪನಿಯು ಪ್ರಸ್ತುತ ತನ್ನ ಕೋಲ್ಕತಾ ಸ್ಥಾವರದಲ್ಲಿ ಈ ಇ-ಬೈಕ್‌ಗಳ ಉತ್ಪಾದನೆಯಲ್ಲಿ ತೊಡಗಿದೆ. ನಮ್ಮ ಮುಂದಿನ ಉತ್ಪಾದನಾ ಘಟಕವು ಮನೇಸರ್‌ನಲ್ಲಿ ತೆರೆಯಲಿದೆ ಎಂದು ಅಂಕಿತ್ ಹೇಳಿದ್ದಾರೆ. ಆದರೆ ಕಂಪನಿಯು ಹೊಸದಾಗಿ ಬಿಡುಗಡೆ ಆಗಲಿರುವ ಇ-ಬೈಕ್‌ನ ಬೆಲೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ ದೇಶದ ಅತಿ ವೇಗದ ಎಲೆಕ್ಟ್ರಿಕ್ ಬೈಕು
ಇ-ಬೈಕ್ ಬ್ಯಾಟರಿ ಮತ್ತು ಅದರ ಚಾರ್ಜಿಂಗ್:
ಈ ಮುಂಬರುವ ಇ-ಬೈಕ್‌ಗಳಲ್ಲಿನ ಬ್ಯಾಟರಿ ಶೂನ್ಯದಿಂದ 100 ಪ್ರತಿಶತ ಚಾರ್ಜ್ ಮಾಡಲು ಸುಮಾರು 3 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಅಂತೆಯೇ ಶೂನ್ಯದಿಂದ 80 ಪ್ರತಿಶತದವರೆಗೆ ಚಾರ್ಜ್ ಆಗಲು 2 ಗಂಟೆಗಳು ಬೇಕು. ಈ ಇ-ಬೈಕ್‌ನಿಂದ ನೀವು ಈ ಲಿಥಿಯಂ ಅಯಾನ್ ಬ್ಯಾಟರಿಯನ್ನು ತೆಗೆದುಹಾಕಬಹುದು ಮತ್ತು ಅದನ್ನು ಎಲ್ಲಿ ಬೇಕಾದರೂ ಚಾರ್ಜ್ ಮಾಡಬಹುದು. ಅಂದರೆ ನೀವು ಬ್ಯಾಟರಿಯನ್ನು ಲಾಕ್ ಮಾಡಬಹುದು ಮತ್ತು ಅನ್ಲಾಕ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.
ಭಾರತದಲ್ಲಿ ಇ-ಬೈಕ್‌ಗಳ ಭವಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿರುವ ಕಂಪನಿಯ ಸಿಇಒ ಅವರು ಭಾರತದಲ್ಲಿ ಉತ್ತಮ ಭವಿಷ್ಯವನ್ನು ಹೊಂದಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ಮೂರು ಹಂತಗಳಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ಬೈಕ್‌ಗಳು ಭಾರತದ ರಸ್ತೆಗಳಲ್ಲಿ ಇರಲಿವೆ ಎಂದವರು ಭವಿಷ್ಯ ನುಡಿದಿದ್ದಾರೆ.