Ration Card Latest Update: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಕೆಟ್ಟ ಸುದ್ದಿಯೊಂದನ್ನು ನೀಡಿದೆ. ಕಳೆದ 6 ತಿಂಗಳಿಂದ ಪಡಿತರ ಪಡೆಯದ ಪಡಿತರ ಚೀಟಿದಾರರಿಗೆ  ಆಹಾರ ಇಲಾಖೆ ಶಾಕ್ ನೀಡಿದ್ದು, ಅವರ  ಪಡಿತರ ಚೀಟಿಯನ್ನು ಅಮಾನತುಗೊಳಿಸಲು ಆಹಾರ ಇಲಾಖೆ ಮುಂದಾಗಿದೆ.


COMMERCIAL BREAK
SCROLL TO CONTINUE READING

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಅನ್ನ ಯೋಜನೆಯಡಿ ಕಳೆದು ಆರು ತಿಂಗಳಿನಿಂದ ಪಡಿತರ ಪಡೆದುಕೊಳ್ಳದ ಬಿಪಿಎಲ್ ಕಾರ್ಡ್ ರದ್ದು ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ.
 
ಇದನ್ನೂ ಓದಿ- 
ರಾಜ್ಯ ಸರ್ಕಾರಿ ನೌಕರರಿಗೂ ಸಿಹಿ ಸುದ್ದಿ ! ದಸರಾ ವೇಳೆಯಲ್ಲಿಯೇ ವೇತನ ಹೆಚ್ಚಳ ಘೋಷಿಸಿದ ಸರ್ಕಾರ ! ಖಾತೆ ಸೇರುವ ಹಣ ಎಷ್ಟು ?


ಗಮನಾರ್ಹವಾಗಿ, ರಾಜ್ಯದಲ್ಲಿ 1,16,95,029 ಬಿಪಿಎಲ್ ಕಾರ್ಡ್ ದಾರರಿದ್ದಾರೆ. ಆದರೆ, ಕಳೆದ ಆರು ತಿಂಗಳಿನಿಂದ 3.40 ಲಕ್ಷ ಕಾರ್ಡ್ ದಾರರು ಪಡಿತರವನ್ನೇ ಪಡೆದುಕೊಂಡಿಲ್ಲ. ಇಂತಹ ಕಾರ್ಡ್ ಗಳನ್ನು ರದ್ದು ಮಾಡಲು ಸರ್ಕಾರ ಸೂಚನೆ ನೀಡಿದೆ.


ಪಡಿತರ ಪಡೆಯದ ಕಾರ್ಡ್ ದಾರರಿಗೆ ಯಾವುದೇ ನೋಟಿಸ್ ನೀಡದೆ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತಿದೆ. ಇದರಿಂದ ಪಡಿತರ ಚೀಟಿ ಜೊತೆಗೆ ಸರ್ಕಾರದಿಂದ ಸಿಗುವ ಹಲವು ಸೌಲಭ್ಯಗಳೂ ಕಡಿತವಾಗುವ ಸಾಧ್ಯತೆ ಇದ್ದು, ಇದರಿಂದಾಗಿ, ಲಕ್ಷಾಂತರ ಕುಟುಂಬಗಳಿಗೆ ಆತಂಕ ಎದುರಾದಂತಾಗಿದೆ. 


ಇದನ್ನೂ ಓದಿ- ಈ ಮೂರು ಸಲಹೆಗಳನ್ನು ಪಾಲಿಸಿ, ಆಗ ಹಣಕಾಸಿನ ವಿಷಯದಲ್ಲಿ ಯಾವಾಗಲೂ ಮುಂದಿರುತ್ತೀರಿ...!


ರೇಷನ್ ಕಾರ್ಡ್ ರದ್ದತಿಯಿಂದ ಆಗುವ ಅನಾನುಕೂಲಗಳು: 
ಪಡಿತರ ಚೀಟಿ ರದ್ದತಿಯಿಂದ ಜನರಿಗೆ ಹಲವು ರೀತಿಯ ಅನಾನುಕೂಲಗಳು ಉಂಟಾಗಲಿವೆ. ಅದರಲ್ಲೂ, ಮುಖ್ಯವಾಗಿ ಈ ಕೆಳಗಿನ ಸೌಲಭ್ಯಗಳನ್ನು ಪಡೆಯುವಲ್ಲಿ ಅನಾನುಕೂಲಗಳು ಎದುರಾಗಲಿವೆ. ಅವುಗಳೆಂದರೆ... 
* ಉಚಿತ ರೇಷನ್ ಸೇರಿದಂತೆ ಸರ್ಕಾರದ ಯಾವುದೇ ರೀತಿಯ ಸೌಲಭ್ಯಗಳು
* ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಚಿಕಿತ್ಸೆ ಪಡೆಯಲು
* ಪಿಂಚಣಿ ಸೌಲಭ್ಯ
* ಹಾಗೆಯೇ ಕೇಂದ್ರ ಸರ್ಕಾರದ ಯೋಜನೆಗಳನ್ನು ಸಹ ಪಡೆಯುವಲ್ಲಿಯೂ ತೊಡಕು 
* ಆರ್‌ಟಿಇ ಶಿಕ್ಷಣ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯುವಲ್ಲಿ ಜನರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.