IRCTC Travel Now Pay Later Facility: ಭಾರತದಲ್ಲಿ ರೈಲ್ವೆಯನ್ನು ಜನಸಾಮಾನ್ಯರ ಜೀವನಾಡಿ ಎಂದು ಪರಿಗಣಿಸಲಾಗುತ್ತದೆ. ದಿನನಿತ್ಯ ಕೋಟ್ಯಂತರ ಪ್ರಯಾಣಿಕರು ತಮ್ಮ ಮನೆಗಳಿಗೆ ತೆರಳಲು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಪ್ರಸ್ತುತ ಭಾರತದಲ್ಲಿ ಹಬ್ಬದ ಸೀಸನ್ ಆರಂಭವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮನೆಗಳಿಗೆ ತೆರಳಲು ಯೋಜನೆ ರೂಪಿಸುತ್ತಿದ್ದಾರೆ. ಅಂತಹ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೇ ಹಲವು ಹಬ್ಬದ ವಿಶೇಷ ರೈಲುಗಳನ್ನು ಆರಂಭಿಸಿದೆ. ಈ ರೈಲುಗಳಲ್ಲಿ ಟಿಕೆಟ್ ಕಾಯ್ದಿರಿಸುವಿಕೆಗಾಗಿ, ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಪ್ರಯಾಣಿಕರಿಗಾಗಿ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ತನ್ಮೂಲಕ ನೀವು ಯಾವುದೇ ಹಣವನ್ನು ಖರ್ಚು ಮಾಡದೆ ರೈಲ್ವೆ ಟಿಕೆಟ್ಗಳನ್ನು ಬುಕ್ ಮಾಡಬಹುದು. ಈ ಸೌಲಭ್ಯದ ಹೆಸರು 'ಟ್ರಾವೆಲ್ ನೌ ಪೇ ಲೇಟರ್'. ಇದರ ಮೂಲಕ ಗ್ರಾಹಕರು ಖಾತೆಯಲ್ಲಿ ಹಣವಿಲ್ಲದಿದ್ದರೂ ರೈಲ್ವೆ ಟಿಕೆಟ್  ಬುಕ್ ಮಾಡಬಹುದು. ನೀವು IRCTC ಯ ರೈಲ್ ಕನೆಕ್ಟ್ ಅಪ್ಲಿಕೇಶನ್‌ನಲ್ಲಿಯೂ ಈ ಸೌಲಭ್ಯವನ್ನು ಪಡೆಯಬಹುದು. IRCTC CASHe ನೊಂದಿಗೆ ಪಾಲುದಾರಿಕೆ ಹೊಂದಿದ್ದು, 'ಟ್ರಾವೆಲ್ ನೌ ಪೇ ಲೇಟರ್' ಸೌಲಭ್ಯವನ್ನು ಒದಗಿಸುತ್ತದೆ.


COMMERCIAL BREAK
SCROLL TO CONTINUE READING

ಟಿಕೆಟ್ ಬುಕ್ ಮಾಡಿದ 6 ತಿಂಗಳ ನಂತರ ಪಾವತಿ ಮಾಡಿ
ನೀವು ಧನತ್ರಯೋದಶಿ ಅಥವಾ ದೀಪಾವಳಿಗೆ ಮನೆಗೆ ಹೋಗಲು ಯೋಜಿಸುತ್ತಿದ್ದರೆ, IRCTC ಯ 'ಟ್ರಾವೆಲ್ ನೌ ಪೇ ಲೇಟರ್' ಅನ್ನು ಬಳಸಿಕೊಂಡು ನೀವು ರೈಲಿನಲ್ಲಿ ಆಸನವನ್ನು ಬುಕ್ ಮಾಡಬಹುದು. ಅನೇಕ ಬಾರಿ ತುರ್ತು ಸಂದರ್ಭಗಳಲ್ಲಿ ಟಿಕೆಟ್ ಕಾಯ್ದಿಸಿರುವಾಗ ಜನರಿಗೆ ಬಳಿಟಿಕೆಟ್ ಕಾಯ್ದಿರಿಸಲು ಹಣವಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳುವ ಮೂಲಕ, ನೀವು ಯಾವುದೇ ಹಣವನ್ನು ಖರ್ಚು ಮಾಡದೆ ರೈಲ್ವೆ ಟಿಕೆಟ್ಗಳನ್ನು ಬುಕ್ ಮಾಡಬಹುದು. CASHe ನ EMI ಆಯ್ಕೆಯನ್ನು ಆರಿಸುವ ಮೂಲಕ ನೀವು ಸುಲಭವಾಗಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ನೀವು 3 ರಿಂದ 6 ತಿಂಗಳ EMI ಆಯ್ಕೆಯ ಮೂಲಕ ಈ ಟಿಕೆಟ್ ಗೆ ಹಣವನ್ನು ಪಾವತಿಸಬಹುದು. ಈ ಸೌಲಭ್ಯದ ಮೂಲಕ ದೇಶಾದ್ಯಂತ ಕೋಟ್ಯಂತರ ರೈಲ್ವೇ ಪ್ರಯಾಣಿಕರು ಭಾರಿ ಲಾಭ ಪಡೆಯಲಿದ್ದಾರೆ. ವಿಶೇಷವೆಂದರೆ ನೀವು ತತ್ಕಾಲ್ ಮತ್ತು ಸಾಮಾನ್ಯ ಟಿಕೆಟ್ ಬುಕಿಂಗ್ ಎರಡಕ್ಕೂ ಟ್ರಾವೆಲ್ ನೌ ಮತ್ತು ಪೇ ಲೇಟರ್ ಸೌಲಭ್ಯವನ್ನು ಬಳಸಬಹುದು. ಈ ಸೌಲಭ್ಯವನ್ನು ಬಳಸಲು ನಿಮಗೆ ಯಾವುದೇ ರೀತಿಯ ದಾಖಲೆಗಳ ಅಗತ್ಯವಿಲ್ಲ.


ಇದನ್ನೂ ಓದಿ-Big News: ದೇಶದ ಕೋಟ್ಯಾಂತರ ಅನ್ನದಾತರಿಗೆ ದೀಪಾವಳಿ ಉಡುಗೊರೆ ನೀಡಿದ ಕೇಂದ್ರ ಸರ್ಕಾರ


CASHe ನ  ಅಧ್ಯಕ್ಷ ಹೇಳಿದ್ದೇನು?
ಈ ಕುರಿತು ಮಾಹಿತಿ ನೀಡಿರುವ CASHe ಅಧ್ಯಕ್ಷ ವಿ.ರಾಮನ್ ಕುಮಾರ್, ದೇಶಾದ್ಯಂತ IRCTC ಮೂಲಕ ‘ಟ್ರಾವೆಲ್ ನೌ ಪೇ ಲೇಟರ್’ ಸೌಲಭ್ಯವನ್ನು ಆರಂಭಿಸಲಾಗಿದೆ. ಪ್ರತಿ ದಿನ 15 ಲಕ್ಷ ಮಂದಿ ಈ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ನಾವು ಹೆಚ್ಚು ಹೆಚ್ಚು ಜನರಿಗೆ TNPL ಸೌಲಭ್ಯವನ್ನು ಒದಗಿಸಲು ಸಾಧ್ಯವಾಗುತ್ತದೆ. CASHe ತನ್ನ ಹಣಕಾಸಿನ ಸೇವೆಗಳನ್ನು TNPL ಸೇವೆಯ ಮೂಲಕ ಸಾಧ್ಯವಾದಷ್ಟು ಜನರಿಗೆ ವಿಸ್ತರಿಸಲು ಯೋಜಿಸುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ. ಇದರೊಂದಿಗೆ, ತನ್ನ ಪ್ಲಾಟ್‌ಫಾರ್ಮ್ ಅನ್ನು ಭಾರತದಲ್ಲಿ ಅತಿದೊಡ್ಡ ಡಿಜಿಟಲ್ ಕ್ರೆಡಿಟ್ ಪ್ಲಾಟ್‌ಫಾರ್ಮ್ ಮಾಡಲು ಪ್ರಯತ್ನಿಸುತ್ತಿದೆ.


ಇದನ್ನೂ ಓದಿ-Diwali Offers: ದೀಪಾವಳಿ ಹಬ್ಬಕ್ಕೆ ಕಾರು ಖರೀದಿಸಬೇಕೆ? ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ


IRCTC ಯ ರೈಲ್ ಕನೆಕ್ಟ್ ಅಪ್ಲಿಕೇಶನ್‌ನಲ್ಲಿ ಈ ರೀತಿ ಟಿಕೆಟ್‌ ಬುಕ್ ಮಾಡಿ
ನೀವೂ ಕೂಡ ಧನತ್ರಯೋದಶಿ ಹಾಗೂ ದೀಪಾವಳಿಯಂದು ನಿಮ್ಮ ಮನೆಗೆ ಹೋಗಲು ಯೋಚಿಸುತ್ತಿದ್ದು, ನಿಮಗೆ ತಕ್ಷಣದ  ಮೀಸಲಾತಿ ಸಿಗದಿದ್ದರೆ, ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. IRCTC ಯ ರೈಲ್ ಕನೆಕ್ಟ್ ಅಪ್ಲಿಕೇಶನ್ ಮೂಲಕ ನೀವು ಸುಲಭವಾಗಿ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಇದಕ್ಕಾಗಿ ನೀವು ಅದನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಐಫೋನ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದರ ನಂತರ, ಕೆಲವು ಸುಲಭ ಹಂತಗಳನ್ನು ಅನುಸರಿಸುವ ಮೂಲಕ, ನೀವು ಸುಲಭವಾಗಿ ರೈಲ್ವೇ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಪ್ರಸ್ತುತ ಬುಕಿಂಗ್‌ಗೆ ನಿಮ್ಮ ಬಳಿ ಹಣವಿಲ್ಲದಿದ್ದರೆ, ನೀವು CASHe TNPL ಆಯ್ಕೆಯನ್ನು ಸಹ ಆರಿಸಿಕೊಳ್ಳಬಹುದು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.