PPF: ನೀವೂ ಕೂಡ ಪಿ‌ಪಿ‌ಎಫ್ ಖಾತೆದಾರರಾಗಿದ್ದರೆ ನಿಮ್ಮ ಸಾರ್ವಜನಿಕ ಭವಿಷ್ಯ ನಿಧಿ (ಪಿ‌ಪಿ‌ಎಫ್) ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹಣಕಾಸು ಸಚಿವಾಲಯವು ಮಾರ್ಚ್ 31, 2023 ರಂದು ಈ ಸಂಬಂಧ ಸುತ್ತೋಲೆಯನ್ನು ಸಹ ಹೊರಡಿಸಿದೆ. ನೀವು ಇನ್ನೂ ಕೂಡ ನಿಮ್ಮ ಪಿ‌ಪಿ‌ಎಫ್ ಖಾತೆಯನ್ನು ಆಧಾರ್ ಜೊತೆಗೆ ಲಿಂಕ್ ಮಾಡದಿದ್ದಲ್ಲಿ ಭವಿಷ್ಯದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು.


COMMERCIAL BREAK
SCROLL TO CONTINUE READING

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಹೂಡಿಕೆ ಯೋಜನೆಯು ಹೆಚ್ಚಿನ ಬಡ್ಡಿಯನ್ನು ನೀಡುವ ಅತ್ಯಂತ ಜನಪ್ರಿಯ ಸರ್ಕಾರಿ ಯೋಜನೆಗಳಲ್ಲಿ ಒಂದಾಗಿದೆ. 15 ವರ್ಷಗಳ ಹೂಡಿಕೆಯ ಮಿತಿಯೊಂದಿಗೆ ಈ ಯೋಜನೆಯಲ್ಲಿ ವಾರ್ಷಿಕವಾಗಿ ಗರಿಷ್ಠ 1.5 ಲಕ್ಷ ರೂ. ವರೆಗೆ ಹೂಡಿಕೆ ಮಾಡಬಹುದಾಗಿದೆ. ಈ ಮೊತ್ತದ ಮೇಲೆ ಶೇಕಡಾ 7.1 ರ ಬಡ್ಡಿದರವನ್ನು ನಿಗಡಿಗೊಳಿಸಲಾಗಿದೆ. ಇದೀಗ ಪಿ‌ಪಿ‌ಎಫ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.


ಇದನ್ನೂ ಓದಿ- ರೈಲು ಪ್ರಯಾಣಿಕರ ಗಮನಕ್ಕೆ: ರೈಲಿನಲ್ಲಿ ಮೊಬೈಲ್ ಚಾರ್ಜ್ ಮಾಡುವ ಮುನ್ನ ಈ ನಿಯಮವನ್ನೊಮ್ಮೆ ಓದಿ


ವಾಸ್ತವವಾಗಿ, ಹಣಕಾಸು ಸಚಿವಾಲಯವು ಎಲ್ಲಾ ರೀತಿಯ ಸಣ್ಣ ಉಳಿತಾಯ ಯೋಜನೆಗಳು ಮತ್ತು ಪೋಸ್ಟ್ ಆಫೀಸ್ ಸ್ಕೀಮ್ ಹೂಡಿಕೆದಾರರು ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಸಚಿವಾಲಯದ ಪ್ರಕಾರ, ಪಿಪಿಎಫ್ ಹೂಡಿಕೆದಾರರು ಮಾರ್ಚ್ 31, 2023 ರ ಮೊದಲು ಖಾತೆಯನ್ನು ತೆರೆದಿದ್ದರೆ ಮತ್ತು ಅವರ ಆಧಾರ್ ಸಂಖ್ಯೆಯನ್ನು ಖಾತೆಗಳ ಕಚೇರಿಗೆ ಸಲ್ಲಿಸದಿದ್ದರೆ, ಅವರು ಏಪ್ರಿಲ್ 1, 2023 ರಿಂದ ಜಾರಿಗೆ ಬರುವಂತೆ ಆರು ತಿಂಗಳ ಅವಧಿಯೊಳಗೆ ಆಧಾರ್ ಅನ್ನು ಸಲ್ಲಿಸಬೇಕು. ಆರು ತಿಂಗಳ ಅವಧಿಯು 30 ಸೆಪ್ಟೆಂಬರ್ 2023 ರಂದು ಕೊನೆಗೊಳ್ಳುತ್ತದೆ. ಹೂಡಿಕೆದಾರರು ಆಧಾರ್ ಜೊತೆಗೆ ಪ್ಯಾನ್ ಅನ್ನು ಸಹ ಸಲ್ಲಿಸಬಹುದು.


ಇದನ್ನೂ ಓದಿ- 70 ಸಾವಿರದ iPhone 13 ಜಸ್ಟ್ 30 ಸಾವಿರಕ್ಕೆ! ನಿಮ್ಮ ಫೇವರೇಟ್ ಫೋನ್ ಖರೀದಿಸಲು ಇದುವೇ ಸರಿಯಾದ ಟೈಂ!


ಪಿಪಿ‌ಎಫ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ಏನಾಗುತ್ತದೆ?
ಹಣಕಾಸು ಸಚಿವಾಲಯದ ಸೂಚನೆಗಳ ಪ್ರಕಾರ, ಪಿಪಿಎಫ್ ಖಾತೆ ಹೊಂದಿರುವವರು ಈ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಅಂತಹ ಖಾತೆಯನ್ನು ಸ್ಥಗಿತಗೊಳಿಸಲಾಗುವುದು. ಒಂದೊಮ್ಮೆ ನಿಮ್ಮ ಪಿ‌ಪಿ‌ಎಫ್ ಅಕೌಂಟ್ ಲಾಕ್ ಆದರೆ ಈ ಕೆಳಗಿನ ಕೆಲಸಗಳು ಸಾಧ್ಯವಾಗುವುದಿಲ್ಲ. 
* ಹೂಡಿಕೆದಾರರು ತಮ್ಮ ಪಿಪಿಎಫ್ ಖಾತೆಗಳಲ್ಲಿ ಹಣವನ್ನು ಜಮಾ ಮಾಡಲು ಸಾಧ್ಯವಾಗುವುದಿಲ್ಲ.


* ಪಾವತಿಸಬೇಕಾದ ಬಡ್ಡಿಯ ಮೊತ್ತವನ್ನು ಪಿಪಿಎಫ್ ಖಾತೆದಾರರ ಖಾತೆಗೆ ಜಮಾ ಮಾಡಲಾಗುವುದಿಲ್ಲ.


* ಮೆಚುರಿಟಿ ಮೊತ್ತವನ್ನು ಹೂಡಿಕೆದಾರರು ನಿರ್ದಿಷ್ಟಪಡಿಸಿದ ಬ್ಯಾಂಕ್ ಖಾತೆಗೆ ವರ್ಗಾಯಿಸುವಲ್ಲಿಯೂ ತೊಂದರೆಗಳನ್ನು ಎದುರಿಸಬೇಕಾಗಬಹುದು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.