ಆಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ ಆಘಾತ.! ಈ ನಿಯಮ ಬದಲಿಸಿದ ಬ್ಯಾಂಕ್
Axis Bank MCLR Hike: ಮೂರನೇ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಅಕ್ಟೋಬರ್ 18 ರಿಂದ ಒಂದು ವರ್ಷದ ಅವಧಿಗೆ ಪ್ರಮಾಣಿತ ಎಂಸಿಎಲ್‌ಆರ್ ಅನ್ನು ಶೇಕಡಾ 0.25 ರಷ್ಟು ಹೆಚ್ಚಿಸಿರುವುದಾಗಿ ತಿಳಿಸಿದೆ. ಅಂದರೆ ಈಗ ಎಂಸಿಎಲ್‌ಆರ್ ಶೇಕಡಾ 8.35 ಕ್ಕೆ ಏರಿಕೆಯಾಗಿದೆ.
Axis Bank MCLR Hike : ದೇಶದ ಮೂರನೇ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಕೋಟ್ಯಂತರ ಗ್ರಾಹಕರಿಗೆ ಶಾಕ್ ನೀಡಿದೆ. ಆಕ್ಸಿಸ್ ಬ್ಯಾಂಕ್ ಕನಿಷ್ಠ ಬಡ್ಡಿ ದರವನ್ನು ಶೇಕಡಾ 0.25 ರಷ್ಟು ಹೆಚ್ಚಿಸಿದೆ. ಹೆಚ್ಚಿಸಿದ ಬಡ್ಡಿ ದರವನ್ನು ತಕ್ಷಣದಿಂದಲೇ ಜಾರಿಗೆ ತರಲಾಗಿದೆ. ದೇಶದ ಮೂರನೇ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಅಕ್ಟೋಬರ್ 18, 2022 ರಿಂದ ಜಾರಿಗೆ ಬರುವಂತೆ, ಒಂದು ವರ್ಷದ ಅವಧಿಗೆ ಪ್ರಮಾಣಿತ ಎಂಸಿಎಲ್‌ಆರ್ ಅನ್ನು ಶೇಕಡಾ 0.25 ದಷ್ಟು ಹೆಚ್ಚಿಸಲಾಗಿದೆ. ಈ ಹೆಚ್ಚಳದೊಂದಿಗೆ ಈ ಹಿಂದೆ ಶೇ 8.10ರಷ್ಟಿದ್ದ ಎಂಸಿಎಲ್‌ಆರ್ ಈಗ 8.35 ರಷ್ಟಾಗಿದೆ.
ರೆಪೋ ದರ ಹೆಚ್ಚಳದ ನಂತರದ ಕ್ರಮ :
ಒಂದು ವರ್ಷದ ಎಂಸಿಎಲ್‌ಆರ್ ಆಧಾರದ ಮೇಲೆ ವಾಹನ, ವೈಯಕ್ತಿಕ ಮತ್ತು ಗೃಹ ಸಾಲಗಳ ದರಗಳನ್ನು ನಿಗದಿಪಡಿಸಲಾಗಿದೆ. ಸೆಪ್ಟೆಂಬರ್ 30 ರಂದು ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಶೇಕಡಾ 0.50 ರಷ್ಟು ಹೆಚ್ಚಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಆಕ್ಸಿಸ್ ಬ್ಯಾಂಕ್ ಎಂಸಿಎಲ್‌ಆರ್ ದರವನ್ನು ಹೆಚ್ಚಿಸಿದೆ. ಒಂದು ದಿನದಿಂದ ಆರು ತಿಂಗಳವರೆಗಿನ ಸಾಲಗಳ ಮೇಲೆ ಎಂಸಿಎಲ್‌ಆರ್ ಅನ್ನು 0.25 ಪ್ರತಿಶತ ಹೆಚ್ಚಿಸಲಾಗಿದೆ. ಅಂದರೆ 8.15 ರಿಂದ -8.30 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ : Gold Price Today :ಭಾರೀ ಇಳಿಕೆ ಕಂಡ ಬೆಳ್ಳಿ, ಬಂಗಾರವೂ ತುಸು ಅಗ್ಗ
ಈ ಬ್ಯಾಂಕ್‌ಗಳು ಕೂಡಾ ಹೆಚ್ಚಿಸ್ವೆ ಬಡ್ಡಿ ದರ :
ಎಂಸಿಎಲ್‌ಆರ್ ಅನ್ನು ಎರಡು ವರ್ಷಗಳವರೆಗೆ 8.45 ಶೇಕಡಾ ಮತ್ತು ಮೂರು ವರ್ಷಗಳ ಅವಧಿಗೆ 8.50 ಶೇಕಡಾಕ್ಕೆ ಹೆಚ್ಚಿಸಿವೆ. ಮುಂದಿನ ಪರಿಶೀಲನೆಯವರೆಗೂ ಈ ದರಗಳು ಮಾನ್ಯವಾಗಿರುತ್ತವೆ ಎಂದು ಆಕ್ಸಿಸ್ ಬ್ಯಾಂಕ್ ಹೇಳಿದೆ. ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಫೆಡರಲ್ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಎಂಸಿಎಲ್‌ಆರ್ ದರವನ್ನು ಹೆಚ್ಚಿಸಿದ್ದವು.
ಎಸ್‌ಬಿಐ ಸೋಮವಾರ 10 ಕೋಟಿಗಿಂತ ಕಡಿಮೆ ಠೇವಣಿ ಹೊಂದಿರುವ ಉಳಿತಾಯ ಖಾತೆಗಳ ಮೇಲಿನ ಬಡ್ಡಿಯನ್ನು ಶೇಕಡಾ 0.50 ರಷ್ಟು ಕಡಿತಗೊಳಿಸಿ, ಶೇಕಡಾ 2.70 ಕ್ಕೆ ಇಳಿಸಿದೆ. ಈಗ ಗ್ರಾಹಕರಿಗೆ 10 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಠೇವಣಿಗಳ ಮೇಲೆ ಶೇಕಡಾ 3 ರ ದರದಲ್ಲಿ ಬಡ್ಡಿ ಸಿಗಲಿದೆ ಎಂದು ಎಸ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : GPF New Rule : ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ! GPF ನಿಯಮಗಳಲ್ಲಿ ಬದಲಾವಣೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.