ಆಯುಷ್ಮಾನ್ ಕಾರ್ಡ್‌ನಲ್ಲಿ ಈ ರೋಗಗಳಿಗೂ ಸಿಗುತ್ತೆ ಉಚಿತ ಚಿಕಿತ್ಸೆ, ಪ್ರತಿಯೊಬ್ಬರಿಗೂ ತಿಳಿದಿರಲೇಬೇಕಾದ ವಿಷಯವಿದು!
Ayushman Bharat Yojana: ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಫಲಾನುಭವಿಗಳಿಗೆ 5 ಲಕ್ಷದವರೆಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಇದೀಗ, ಇದರ ಪ್ರಯೋಜನವನ್ನು ಮತ್ತಷ್ಟು ಹೆಚ್ಚಿಸಿರುವ ಮೋದಿ ಸರ್ಕಾರ ಈ ಯೋಜನೆಯಲ್ಲಿ ಹೆಚ್ಚಿನ ಆರೋಗ್ಯ ಪ್ಯಾಕೇಜ್‌ಗಳನ್ನು ಸೇರಿಸಲು ಮುಂದಾಗಿದೆ.
Ayushman Bharat Yojana: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಪ್ರಯೋಜನಗಳನ್ನು ಮತ್ತಷ್ಟು ವಿಸ್ತರಿಸಲು ಮೋದಿ ಸರ್ಕಾರ ಯೋಜಿಸುತ್ತಿದೆ. ಆಯುಷ್ಮಾನ್ ಯೋಜನೆಯನ್ನು ನಿರ್ವಹಿಸುವ ಸಂಸ್ಥೆಯಾದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA), ಈ ಯೋಜನೆಯಡಿ ವೃದ್ಧರು ಅದರಲ್ಲೂ ಮುಖ್ಯವಾಗಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಉತ್ತಮ ಆರೋಗ್ಯ ಸೇವೆಗಳನ್ನು ಆಯುಷ್ಮಾನ್ ಯೋಜನೆ ವ್ಯಾಪ್ತಿಗೆ ತರಲು ಪರಿಗಣಿಸುತ್ತಿದೆ.
ಆಯುಷ್ಮಾನ್ ಕಾರ್ಡ್‌ನಲ್ಲಿ ಈ ರೋಗಗಳಿಗೂ ಸಿಗುತ್ತೆ ಉಚಿತ ಚಿಕಿತ್ಸೆ:
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಈ ಉದ್ದೇಶ ನೆರವೇರಿದರೆ ಭವಿಷ್ಯದಲ್ಲಿ ಆಯುಷ್ಮಾನ್ ಕಾರ್ಡ್‌ನಲ್ಲಿ ನೋಂದಾಯಿತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಕಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆ ಲಭ್ಯವಾಗಲಿದೆ. ಗಮನಾರ್ಹವಾಗಿ, ಕಳೆದ ತಿಂಗಳಷ್ಟೇ ನರೇಂದ್ರ ಮೋದಿ ಸಂಪುಟವು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ವೃದ್ಧರನ್ನು ಅವರ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ತರುವುದಾಗಿ ಘೋಷಿಸಿತ್ತು. ಮೋದಿ ಸರ್ಕಾರದ ಈ ಘೋಷಣೆಯಿಂದ ದೇಶದ ಸುಮಾರು 6 ಕೋಟಿ ಹಿರಿಯ ನಾಗರೀಕರಿಗೆ ಪ್ರಯೋಜನವಾಗಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ- Gold Rate Today: ಆಭರಣ ಪ್ರಿಯರಿಗೆ ಬಿಗ್ ಶಾಕ್! ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ
ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ ವಿಸ್ತೃತ ಯೋಜನೆ ಜಾರಿಗೆ ಬರಬಹುದು ಎಂದು ಅಧಿಕೃತ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ- ರತನ್ ಟಾಟಾ ಟಾಪ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಾಣದಿರಲು ಆ ಒಬ್ಬ ವ್ಯಕ್ತಿಯೇ ಕಾರಣ...!
ಆಯುಷ್ಮಾನ್ ಯೋಜನೆಯಲ್ಲಿ ಪ್ರಸ್ತುತ ಸಾಮಾನ್ಯ ಔಷಧ, ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಮತ್ತು ಹೃದ್ರೋಗದಂತಹ 27 ವಿವಿಧ ವೈದ್ಯಕೀಯ ವಿಶೇಷತೆಗಳನ್ನು ಒಳಗೊಂಡಿರುವ 1,949 ವೈದ್ಯಕೀಯ ಕಾರ್ಯವಿಧಾನಗಳನ್ನು ಒಳಗೊಂಡಿದೆ. ಇದರ ಅಡಿಯಲ್ಲಿ, ಫಲಾನುಭವಿಗಳಿಗೆ ಆಸ್ಪತ್ರೆ ಸೇವೆಗಳು, ಔಷಧಿಗಳು, ರೋಗನಿರ್ಣಯ ಸೇವೆಗಳು, ಆಹಾರ ಮತ್ತು ವಸತಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಆಯುಷ್ಮಾನ್ ಯೋಜನೆಗೆ ಇತರ ಯಾವ ಆರೋಗ್ಯ ಪ್ಯಾಕೇಜ್‌ಗಳನ್ನು ಸೇರಿಸಬಹುದು ಎಂಬುದನ್ನು ಗಮನಿಸುವುದಾದರೆ... ಅಲ್ಝೈಮರ್ಸ್ ಮತ್ತು ಬುದ್ಧಿಮಾಂದ್ಯತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗುವವರಿಗೂ ಕೂಡ ಆಯುಷ್ಮಾನ್ ಯೋಜನೆಯ ಅಡಿಯಲ್ಲಿ ಚಿಕಿತ್ಸೆ ಲಭ್ಯವಾಗುವ ಸಾಧ್ಯತೆ ಇದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.