ನವದೆಹಲಿ: Salary Overdraft - ತುರ್ತು ಸಂದರ್ಭಗಳಲ್ಲಿ ಒಂದು ವೇಳೆ ನಿಮಗೆ ಹಣಕಾಸಿನ ಅವಶ್ಯಕತೆ ಬಿದ್ದರೆ ನೀವೇನು ಮಾಡುವಿರಿ. ಬಂಧು ಮಿತ್ರರ ಬಳಿ ಸಾಲವಾದರೂ ಪಡೆಯುವಿರಿ ಅಥವಾ ವೈಯಕ್ತಿಕ ಸಾಲಕ್ಕಾಗಿ (Personal Loan) ಅರ್ಜಿ ಸಲ್ಲಿಸುವಿರಿ. ಆದರೆ ಇದೀಗೆ ನಿಮಗೆ ಈ ರೀತಿ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ ಒಂದು ವೇಳೆ ನೀವು ಸ್ಯಾಲರೀಡ್ ನೌಕರರಾಗಿದ್ದರೆ, ನೀವು ಸ್ಯಾಲರಿ ಓವರ್ ಡ್ರಾಫ್ಟ್ ಲಾಭ ಪಡೆಯಬಹುದು.


COMMERCIAL BREAK
SCROLL TO CONTINUE READING

ಏನಿದು ಸ್ಯಾಲರಿ ಓವರ್ ಡ್ರಾಫ್ಟ್ (Salary Overdraft)
ಪ್ರತಿ ತಿಂಗಳು ನಿಮ್ಮ ಖಾತೆಗೆ ನಿಮ್ಮ ವೇತನ ಪಾವತಿಯಾಗುತ್ತಿದ್ದರೆ, ನಿಮ್ಮ ಖಾತೆಗೆ ಓವರ್ ಡ್ರಾಫ್ಟ್ ಸೌಲಭ್ಯವಿದೆಯಾ ಎಂಬುದನ್ನು ಪರಿಶೀಲಿಸಿಕೊಳ್ಳಿ. ಬ್ಯಾಂಕಿನ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ನೀವು ಓವರ್‌ಡ್ರಾಫ್ಟ್‌ಗೆ ಅರ್ಹರಾಗಿದ್ದರೆ, ನಿಮ್ಮ ಹಣಕಾಸಿನ ತೊಂದರೆಗಳು ತಕ್ಷಣವೇ ಕಡಿಮೆಯಾಗುತ್ತವೆ.ವಾಸ್ತವದಲ್ಲಿ ಸಂಬಳದ ಓವರ್‌ಡ್ರಾಫ್ಟ್ ಎನ್ನುವುದು ನಿಮ್ಮ ವೇತನ ಖಾತೆಯಲ್ಲಿ ನೀವು ಪಡೆಯುವ ಒಂದು ರೀತಿಯ ಸಾಲವಾಗಿದೆ. ನಿಮಗೆ ಸಂಬಳವನ್ನು ಹೊರತುಪಡಿಸಿ ಹೆಚ್ಚುವರಿ ಹಣ ಬೇಕಾದಾಗ, ನಿಮ್ಮ ಸಂಬಳ ಖಾತೆಯಿಂದ ಸ್ವಲ್ಪ ಹೆಚ್ಚುವರಿ ಮೊತ್ತವನ್ನು ನೀವು ಹಿಂಪಡೆಯಬಹುದು.


ಯಾರಿಗೆ ಸಿಗುತ್ತದೆ ಓವರ್ ಡ್ರಾಫ್ಟ್ (Bank Overdraft Facility)
ಇಲ್ಲಿ ಗಮನಿಸಬೇಕಾಗಿರುವ ಒಂದು ಅಂಶ ಎಂದರೆ ಎಲ್ಲಾ ಬ್ಯಾಂಕ್ ಗ್ರಾಹಕರು ಈ ಸೌಲಭ್ಯವನ್ನು ಪಡೆಯುವುದಿಲ್ಲ. ಬ್ಯಾಂಕ್ ಗಳು  ತನ್ನ ಕೆಲ ಗ್ರಾಹಕರ ಮತ್ತು ಅವರ ಕಂಪನಿಯ ಕ್ರೆಡಿಟ್ ಪ್ರೊಫೈಲ್ ಪರಿಶೀಲಿಸಿದ ಬಳಿಕ ಓವರ್‌ಡ್ರಾಫ್ಟ್ ಸೌಲಭ್ಯವನ್ನು ನೀಡುತ್ತವೆ. ಐಸಿಐಸಿಐ ಬ್ಯಾಂಕ್, ಎಸ್‌ಬಿಐ ನಂತಹ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ನೀಡುತ್ತವೆ. ನೀವೂ ಕೂಡ ನಿಮ್ಮ ಬ್ಯಾಂಕ್ ನ ಕಸ್ಟಮರ್ ಕೇಯರ್ ಸಂಖ್ಯೆಗೆ ಕರೆ ಮಾಡಿ ಈ ಕುರಿತು ಮಾಹಿತಿ ಪಡೆಯಬಹುದು. ಇದರ ಜೊತೆಗೆ ನೀವು ನಿಮ್ಮ ಖಾತೆಯಿಂದ ಎಷ್ಟು ಓವರ್ ಡ್ರಾಫ್ಟ್ ಪಡೆಯಬಹುದು ಎಂಬುದನ್ನು ಕೂಡ ತಿಳಿಯಬಹುದು.


ಸ್ಯಾಲ್ಸರಿ ಓವರ್ ಡ್ರಾಫ್ಟ್ ಲಿಮಿಟ್ ಎಷ್ಟು? (Bank Loan)
ಪ್ರತಿಯೊಂದು ಬ್ಯಾಂಕ್ ನಲ್ಲಿ ವೇತನ ಓವರ್ ಡ್ರಾಫ್ಟ್ ಗಾಗಿ ನಿಯಮಗಳು ಹಾಗೂ ಬಡ್ಡಿ ದರಗಳು ಭಿನ್ನವಾಗಿವೆ. ಕೆಲ ಬ್ಯಾಂಕ್ ಗಳು ತಮ್ಮ ಒಳ್ಳೆಯ ಗ್ರಾಹಕರಿಗೆ ಮೊದಲೇ ಓವರ್ ಡ್ರಾಫ್ಟ್ ಸೌಕರ್ಯ ನೀಡುತ್ತವೆ. ಕೆಲ ಬ್ಯಾಂಕ್ ಗಳು ನೌಕರರ ತಿಂಗಳ ವೇತನದ 2 ರಿಂದ 3 ಪಟ್ಟು ಹಣವನ್ನು ಓವರ್ ಡ್ರಾಫ್ಟ್ ರೂಪದಲ್ಲಿ ನೀಡುತ್ತವೆ. ಉಳಿದ ಬ್ಯಾಂಕ್ ಗಳು ಒಂದು ತಿಂಗಳ ವೇತನದ ಶೇ.80 ರಿಂದ ಶೇ.90 ರಷ್ಟು ಹಣವನ್ನು ಓವರ್ ಡ್ರಾಫ್ಟ್ ರೂಪದಲ್ಲಿ ನೀಡುತ್ತವೆ. ಕೆಲ ಬ್ಯಾಂಕ್ ಗಳು ಓವರ್ ಡ್ರಾಫ್ಟ್ ಕ್ಯಾಪ್ ನಿಯಮಗಳ ಮೇಲೆ ಕಾರ್ಯನಿರ್ವಹಿಸುತ್ತಿವೆ. ಇದರ ಗರಿಷ್ಟ ಮಿತಿ 4 ರಿಂದ 5 ಲಕ್ಷ ರೂ.ವರೆಗೆ ಇರುವ ಸಾಧ್ಯತೆ ಇದೆ. ಕೆಲ ಬ್ಯಾಂಕ್ ಗಳಿಗೆ ಈ ಮಿತಿ 1 ರಿಂದ 1.5 ಲಕ್ಷ ಮಾತ್ರ ಇರುತ್ತದೆ. 


ಇದನ್ನೂ ಓದಿ- PM Jandhan Account: ಜನ ಧನ್ ಖಾತೆದಾರರೇ ಗಮನಿಸಿ, ಈ ಬಗ್ಗೆ ನಿಮಗೂ ತಿಳಿದಿದೆಯೇ


ಇನೊಂದು ರೀತಿಯ Instant Loan ಆಗಿದೆ
ಓವರ್‌ಡ್ರಾಫ್ಟ್ ಒಂದು ರೀತಿಯ ತ್ವರಿತ ಸಾಲವಾಗಿದೆ.  ಇದಕ್ಕಾಗಿ ನೀವು ಬಡ್ಡಿಯನ್ನೂ ಪಾವತಿಸಬೇಕು. ಸಂಸ್ಕರಣಾ ಶುಲ್ಕವನ್ನು ಸಹ ಪಾವತಿಸಬೇಕು. ಐಸಿಐಸಿಐ ಬ್ಯಾಂಕ್ ನಂತೆ 'ಇನ್‌ಸ್ಟಾಫ್ಲೆಕ್ಸಿ ನಗದು' ಸೌಲಭ್ಯವನ್ನು ಒದಗಿಸುತ್ತದೆ. ಇದಕ್ಕಾಗಿ, ಗ್ರಾಹಕರು ಬ್ಯಾಂಕಿನ ಶಾಖೆಗೆ ಹೋಗಬೇಕಾಗಿಲ್ಲ. ಇದನ್ನು ಆನ್‌ಲೈನ್‌ನಲ್ಲಿ ಮಾತ್ರ ಸಕ್ರಿಯಗೊಳಿಸಬಹುದು. ಈ ಸೌಲಭ್ಯದ ಅಡಿಯಲ್ಲಿ, ಗ್ರಾಹಕರು ತಮ್ಮ ಸಂಬಳದ ಮೂರು ಪಟ್ಟು ಓವರ್‌ಡ್ರಾಫ್ಟ್ ತೆಗೆದುಕೊಳ್ಳಬಹುದು. ಈ ಸೌಲಭ್ಯವು ತ್ವರಿತ ಅನುಮೋದನೆಯನ್ನು ಪಡೆಯುತ್ತದೆ. ಗ್ರಾಹಕರು ಬಯಸಿದಲ್ಲಿ 48 ಗಂಟೆಗಳ ಒಳಗೆ ಓವರ್‌ಡ್ರಾಫ್ಟ್ ಮಿತಿಯನ್ನು ಬಳಸಲು ಆರಂಭಿಸಬಹುದು. ಇದಕ್ಕಾಗಿ ನೀವು ಬಡ್ಡಿಯನ್ನು ಸಹ ಪಾವತಿಸಬೇಕು, ಈ ಬಡ್ಡಿಯನ್ನು ಅನುಮೋದಿತ ಓವರ್‌ಡ್ರಾಫ್ಟ್‌ನ ಮೇಲೆ ವಿಧಿಸಲಾಗುವುದಿಲ್ಲ. ಬದಲಾಗಿ, ಖಾತೆಯಿಂದ ಹಿಂಪಡೆಯುವ ಮೊತ್ತದ ಮೇಲೆ ಮಾತ್ರ ಮೊತ್ತವನ್ನು ವಿಧಿಸಲಾಗುತ್ತದೆ.


ಇದನ್ನೂ ಓದಿ- ನೌಕರಿ ಹೋದರು ಕೂಡ ಚಿಂತಿಸುವ ಅಗತ್ಯವಿಲ್ಲ! ಬ್ಯಾಂಕ್ ನಿಮ್ಮ ಅವಶ್ಯಕತೆ ಪೂರೈಸಲಿದೆ


ಎಷ್ಟಿರುತ್ತದೆ ಬಡ್ಡಿ ದರ?
ಕ್ರೆಡಿಟ್ ಕಾರ್ಡ್ ನಂತೆಯೇ ಈ ಓವರ್ ಡ್ರಾಫ್ಟ್ ಸಾಲಕ್ಕೆ ಬಡ್ಡಿ ವಿಧಿಸಲಾಗುತ್ತದೆ. ಸ್ಯಾಲರಿ ಓವರ್ ಡ್ರಾಫ್ಟ್ ವಿಷಯದಲ್ಲಿ ಪ್ರತಿ ತಿಂಗಳು 1 ರಿಂದ 3 ಪ್ರತಿಶತದಷ್ಟು ಬಡ್ಡಿ ಬೀಳುವ ಸಾದ್ಯತೆ ಇದೆ. ಅಂದರೆ ಸ್ಯಾಲರಿ ಲಿಮಿಟ್ ನಿಂದ ಎಷ್ಟು ಹಣವನ್ನು ನೀವು ಪಡೆಯುವಿರಿ ಅದರ ಮೇಲೆ ವಾರ್ಷಿಕವಾಗಿ ಶೇ. 12 ರಿಂದ ಶೇ.30 ರಷ್ಟು ಬಡ್ಡಿ ಬೀಳುತ್ತದೆ. ಇದಲ್ಲದೆ ಸಮಯಕ್ಕೆ ಸರಿಯಾಗಿ ಒಂದು ವೇಳೆ ನೀವು ಬಡ್ಡಿಯನ್ನು ಪಾವತಿಸದೇ ಹೋದಲ್ಲಿ ಪೆನಾಲ್ಟಿ ಕೂಡ ಬೀಳುತ್ತದೆ. ಪ್ರೋಸ್ಸೇಸಿಂಗ್ ಶುಲ್ಕದ ಕಾರಣ ಕೂಡ ಇದು ಸ್ವಲ ಜಾಸ್ತಿ ದುಬಾರಿಯಾಗಿ ಪರಿಣಮಿಸುತ್ತದೆ.


ಇದನ್ನೂ ಓದಿ-ಬ್ಯಾಂಕ್ ಖಾತೆದಾರರಿಗೆ Electronic Card ನೀಡಲು ಅನುಮತಿ ನೀಡಿದ RBI.. ಏನಿದರ ಲಾಭ ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ