ಸ್ವಂತ ಮನೆಯ ಕನಸಿಗೆ ಹೊಡೆತ, ಗೃಹಸಾಲ ಬಡ್ಡಿದರದಲ್ಲಿ ಹೆಚ್ಚಳ , ಹೊಸ ದರ ಎಷ್ಟಿರಲಿದೆ ತಿಳಿಯಿರಿ
ಸೆಪ್ಟೆಂಬರ್‌ನಲ್ಲಿ, ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ ವಾರ್ಷಿಕ 6.50 ಪ್ರತಿಶತದಿಂದ ಪ್ರಾರಂಭವಾಗುವ ಗೃಹ ಸಾಲದ ಬಡ್ಡಿದರಗಳನ್ನು ಪರಿಚಯಿಸಿತ್ತು.
ನವದೆಹಲಿ : ಗೃಹ ಸಾಲ (Home loan) ಪಡೆಯುವವರಿಗೆ ಮಹತ್ವದ ಸುದ್ದಿ ಇದು. ಗೃಹಸಾಲದ ಮೇಲಿನ ಬಡ್ಡಿದರವನ್ನು ಬ್ಯಾಂಕ್ ಹೆಚ್ಚಿಸಿದೆ. ಹಬ್ಬದ ಆಫರ್ ಕೊನೆಗೊಳ್ಳುತ್ತಿದ್ದಂತೆಯೇ ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) ಗೃಹ ಸಾಲದ ಬಡ್ಡಿದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಬ್ಯಾಂಕ್ ಗೃಹ ಸಾಲಗಳ ಬಡ್ಡಿದರವನ್ನು (Interest rate) 5 ಮೂಲ ಅಂಕಗಳ ಅಂದರೆ ಶೇಕಡಾ 0.05 ರಷ್ಟು ಹೆಚ್ಚಿಸಿದೆ. ಅಂದರೆ ಇನ್ನು ಮಹೀಂದ್ರಾ ಬ್ಯಾಂಕ್‌ನಲ್ಲಿ ಗೃಹ ಸಾಲದ ಬಡ್ಡಿ ದರಗಳು ಶೇಕಡಾ 6.55 ರಿಂದ ಪ್ರಾರಂಭವಾಗುತ್ತವೆ. ಗೃಹ ಸಾಲಗಳ ಹೊಸ ಬಡ್ಡಿ ದರಗಳು ನವೆಂಬರ್ 9 ರಿಂದ ಡಿಸೆಂಬರ್ 10, 2021 ರವರೆಗೆ ಅನ್ವಯವಾಗಲಿದೆ.
ಬ್ಯಾಂಕ್ ನೀಡಿದೆ ಮಾಹಿತಿ :
ಸೆಪ್ಟೆಂಬರ್‌ನಲ್ಲಿ, ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) ಲಿಮಿಟೆಡ್ ವಾರ್ಷಿಕ 6.50 ಪ್ರತಿಶತದಿಂದ ಪ್ರಾರಂಭವಾಗುವ ಗೃಹ ಸಾಲದ ಬಡ್ಡಿದರಗಳನ್ನು (Home loan interest rate) ಪರಿಚಯಿಸಿತ್ತು. ಸೀಮಿತ ಅವಧಿಯ ಹಬ್ಬದ ಸೀಸನ್ ಆಫರ್ ಇಂದು ಅಂದರೆ ನವೆಂಬರ್ 8ಕ್ಕೆ ಕೊನೆಗೊಳ್ಳುತ್ತದೆ. ಮುಂದಿನ ಏಳು ದಿನಗಳವರೆಗೆ ಅಂದರೆ ನವೆಂಬರ್ 15, 2021 ರೊಳಗೆ ವಿತರಿಸಲಾಗುವ ಅರ್ಜಿದಾರರಿಗೆ, ಬಡ್ಡಿ ದರಗಳು ಶೇಕಡಾ 6.50 ರಷ್ಟಾಗಿರುತ್ತದೆ.
ಇದನ್ನೂ ಓದಿ : ಕ್ರೆಡಿಟ್ ಕಾರ್ಡ್ ಬಳಕೆದಾರರೇ? ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ ನೋಡುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
ಮನೆ ಖರೀದಿಗೆ ಉತ್ತಮ ಅವಕಾಶ :
ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಕನ್ಸೂಮರ್ ಅಸೆಟ್ ಅಧ್ಯಕ್ಷ ಅಂಬುಜ್ ಚಂದನಾ ಅವರು ಮಾತನಾಡಿ, “ಇತ್ತೀಚೆಗೆ ವಿಶೇಷ 60 ದಿನಗಳ ಹಬ್ಬದ ಋತುವಿನ ಕೊಡುಗೆಯು ಮನೆ ಖರೀದಿದಾರರಿಂದ ಮೆಚ್ಚುಗೆ ಪಡೆದಿದೆ ಮತ್ತು ಹೊಸ ಲೋನ್, ಮತ್ತು ಬ್ಯಾಲೆನ್ಸ್ ವರ್ಗಾವಣೆ (Balance transfer) ಎರಡರಲ್ಲೂ ಭಾರೀ ಬೇಡಿಕೆ ಕಂಡು ಬಂದಿತ್ತು ಎಂದು ಹೇಳಿದ್ದಾರೆ. ಹೊಸ ಗೃಹ ಸಾಲದ ದರ 6.55 ಪ್ರತಿಶತದೊಂದಿಗೆ ಸಾಲಗಾರರಿಗೆ ಉತ್ತಮ ಸಮಯವನ್ನು ವಿಸ್ತರಿಸಲು ನಾವು ಸಂತೋಷಪಡುತ್ತೇವೆ. ಗ್ರಾಹಕರಿಗೆ ತಮ್ಮ ಕನಸಿನ ಮನೆಯನ್ನು ಖರೀದಿಸಲು ಇದು ಉತ್ತಮ ಅವಕಾಶವಾಗಿದೆ ಎಂದಿದ್ದಾರೆ.
ಗ್ರಾಹಕರಿಗೆ ಸಿಗಲಿದೆ ಪ್ರಯೋಜನ :
ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಹೊಸ ಬಡ್ಡಿ ದರವು (new interest rate) ಬ್ಯಾಲೆನ್ಸ್ ಟ್ರಾನ್ಸ್‌ಫರ್ ಲೋನ್‌ಗಳಿಗೂ ಅನ್ವಯಿಸುತ್ತದೆ. ಈ ಬಡ್ಡಿ ದರದ ಅಡಿಯಲ್ಲಿ ಪಡೆಯಬಹುದಾದ ಸಾಲದ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ ಮತ್ತು ಇದು ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಸ್ಥರಿಗೆ ಲಭ್ಯವಿರುತ್ತದೆ. ಯಾವುದೇ ಅರ್ಹ ಗ್ರಾಹಕರು ಇಲ್ಲಿ ಸಾಲವನ್ನು ತೆಗೆದುಕೊಳ್ಳಬಹುದು. ಅಂತಿಮ ದರವು ಗ್ರಾಹಕನ ಕ್ರೆಡಿಟ್ ಸ್ಕೋರ್ ಅನ್ನು ಅವಲಂಬಿಸಿರುತ್ತದೆ.
ಇದನ್ನೂ ಓದಿ : ನಿಷೇಧದ ಬಳಿಕ ನಿಮ್ಮ 500 ಮತ್ತು 1000 ರೂ. ಹಳೆಯ ನೋಟುಗಳು ಏನಾದವು ಗೊತ್ತಾ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ