Bank Holiday in January 2023 : 2022 ರ ಕೊನೆಯ ತಿಂಗಳು ಡಿಸೇಂಬರ್ ಇಂದು ಮುಕ್ತಾಯವಾಗಲಿದೆ. ನಾಳೆಯಿಂದ ಹೊಸ ವರ್ಷ ಪ್ರಾರಂಭವಾಗುತ್ತದೆ. ಹೊಸ ವರ್ಷದ ಶುಭ ದಿನಗಳಲ್ಲಿ, ಅನೇಕ ಜನ ಹಣಕಾಸಿನ ವ್ಯವಹಾರ ಅಥವಾ ಹೂಡಿಕೆಗಳ ಬಗ್ಗೆ ಯೋಚಿಸುತ್ತಾರೆ. ಅದಕ್ಕಾಗಿಯೇ ಅನೇಕರು ಬ್ಯಾಂಕುಗಳಿಗೆ ಹೋಗಬೇಕಾಗುತ್ತದೆ. ಬ್ಯಾಂಕ್ ಗೆ ಹೌಗುವ ಮೊದಲು ಈ ಸುದ್ದಿ ಓದಿ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಜನವರಿ 2023 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಿದೆ.


COMMERCIAL BREAK
SCROLL TO CONTINUE READING

ಆರ್‌ಬಿಐ ಪ್ರಕಟಿಸಿದ ಪಟ್ಟಿಯ ಪ್ರಕಾರ, ಒಟ್ಟು 13 ಬ್ಯಾಂಕ್ ರಜೆ ಇರುತ್ತವೆ ವಿವಿಧ ರಾಜ್ಯ ಹಬ್ಬಗಳು ಮತ್ತು ಇತರ ಕಾರ್ಯಕ್ರಮಗಳು ಅಥವಾ ರಜಾದಿನಗಳ ಪ್ರಕಾರ ವಾರದ ರಜಾದಿನಗಳು ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳು ) ಒಳಗೊಂಡಂತೆ 13 ದಿನ ಬ್ಯಾಂಕ್ ರಜೆ ಇರುತ್ತವೆ.


ಇದನ್ನೂ ಓದಿ : SSY Scheme : ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರದ ಬಗ್ಗೆ ಬಿಗ್ ಅಪ್‌ಡೇಟ್!


ವರ್ಷಾರಂಭ ಅಂದರೆ ಜನವರಿ 1 ಭಾನುವಾರ ರಜೆ ಇರುವುದರಿಂದ ಬ್ಯಾಂಕ್ ಉದ್ಯೋಗಿಗಳು ಹೊಸ ವರ್ಷದ ಸಂಭ್ರಮದಲ್ಲಿದ್ದಾರೆ. ಜನವರಿ 8 ಎರಡನೇ ಭಾನುವಾರ, ಜನವರಿ 14 ತಿಂಗಳ ಎರಡನೇ ಶನಿವಾರ, ಜನವರಿ 15 ಮೂರನೇ ಭಾನುವಾರ, ಜನವರಿ 22 ನಾಲ್ಕನೇ ಭಾನುವಾರ, ಜನವರಿ 28 ನಾಲ್ಕನೇ ಶನಿವಾರ ಮತ್ತು ಜನವರಿ 29 ಐದನೇ ಭಾನುವಾರ.


ಹಾಗೆ, ಗಣರಾಜ್ಯೋತ್ಸವದ ನಿಮಿತ್ತ ದೇಶಾದ್ಯಂತ ಜನವರಿ 26 ರಜಾ ದಿನವಾಗಿರುತ್ತದೆ. ಇದರೊಂದಿಗೆ ಹೊಸ ವರ್ಷದ ಆಚರಣೆಗಾಗಿ ಜನವರಿ 2 ರಂದು ಐಜ್ವಾಲ್‌ನಲ್ಲಿ ಬ್ಯಾಂಕುಗಳು ರಜೆ ಇರುತ್ತವೆ. ಗಾನ್-ನಾಗೈ, ಮೊಯಿನು ಇರತ್ಪಾ ಕಾರಣದಿಂದಾಗಿ ಜನವರಿ 3 ಮತ್ತು 4 ರಂದು ಇಂಫಾಲ್‌ನಲ್ಲಿ ಬ್ಯಾಂಕುಗಳು ರಜೆ ಇರುತ್ತವೆ. ಜನವರಿ 16 ಮತ್ತು 17 ರಂದು ತಿರುವಳ್ಳುವರ್ ದಿನ ಮತ್ತು ಉಳವರ್ ತಿರುನಾಳ್ಚಾಯ ನಿಮಿತ್ತ ಚೆನ್ನೈನಲ್ಲಿ ಬ್ಯಾಂಕ್‌ಗಳು ಬಂದ್ ಇರುತ್ತವೆ.


ಇದನ್ನೂ ಓದಿ : LIC Jeevan Labh : LIC ಈ ಯೋಜನೆಯಲ್ಲಿ ₹256 ಹೂಡಿಕೆ ಮಾಡಿದ್ರೆ, ₹54 ಲಕ್ಷ ಲಾಭ ಸಿಗಲಿದೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.