Bank Holiday List July 2021: ಜುಲೈ ತಿಂಗಳಲ್ಲಿ, ನೀವು ನಿಮ್ಮ ಯಾವುದೇ ಕೆಲಸಗಳಿಗಾಗಿ ಬ್ಯಾಂಕಿಗೆ ಹೋಗಬೇಕಾದರೆ ಅದಕ್ಕೂ ಮುನ್ನ ಒಮ್ಮೆ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡುವ ರಜಾದಿನಗಳ ಪಟ್ಟಿಯನ್ನು ತಪ್ಪದೇ ಪರಿಶೀಲಿಸಿ. ಏಕೆಂದರೆ ಇದರಲ್ಲಿ ತಿಂಗಳಲ್ಲಿ ಬ್ಯಾಂಕುಗಳಿಗೆ ಎಷ್ಟು ದಿನ ಅಂಟ್ಟು ಯಾವಾಗ ಅರಜೆ ಇರಲಿದೆ ಎಂಬ ಮಾಹಿತಿ ಲಭ್ಯವಾಗಲಿದೆ.


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ ವರ್ಷದ ಬೇರೆ ತಿಂಗಳುಗಳಿಗೆ ಹೋಲಿಸಿದರೆ ಜುಲೈ ತಿಂಗಳಲ್ಲಿ ಬ್ಯಾಂಕಿಗೆ ಕಡಿಮೆ ರಜಾ ದಿನಗಳಿರುತ್ತವೆ. ಅದಾಗ್ಯೂ ಯಾವುದೇ ಪ್ರಮುಖ ಕೆಲಸಗಳಿಗಾಗಿ ಬ್ಯಾಂಕಿಗೆ ತೆರಳುವ ಮೊದಲು ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು (Bank Holidays List) ಒಮ್ಮೆ ಪರಿಶೀಲಿಸುವುದು ಒಳ್ಳೆಯದು. ಜುಲೈ ತಿಂಗಳಲ್ಲಿ ಬ್ಯಾಂಕುಗಳನ್ನು 3 ದಿನಗಳವರೆಗೆ ಮುಚ್ಚಲಾಗುವುದು. ಈ ಕಾರಣಕ್ಕಾಗಿ, ನಿಮ್ಮ ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ತ್ವರಿತವಾಗಿ ನಿಭಾಯಿಸಿ. 


ಇದನ್ನೂ ಓದಿ- Aadhaar Card: UIDAI ವಿಶೇಷ ಸೇವೆಯ ಲಾಭ ಪಡೆದು ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸವನ್ನು ಸುಲಭವಾಗಿ ಬದಲಾಯಿಸಿ


ಭಾನುವಾರ ನಿಯಮಿತ ರಜಾದಿನವಾಗಿದೆ ಮತ್ತು ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕಿಗೆ ರಜೆ (Bank Holiday) ಇರುತ್ತದೆ. ಆದಾಗ್ಯೂ, ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಹಬ್ಬಗಳ ಕಾರಣ, ರಜಾದಿನಗಳು ಸಹ ವಿಭಿನ್ನವಾಗಿವೆ. ಗೆಜೆಟೆಡ್ ರಜಾದಿನಗಳು ಮಾತ್ರ ದೇಶಾದ್ಯಂತ ಬ್ಯಾಂಕುಗಳಲ್ಲಿ ಒಂದೇ ಆಗಿರುತ್ತದೆ.


ಇದನ್ನೂ ಓದಿ- ATM: ಎಟಿಎಂನಿಂದ ಹಣ ವಿತ್ ಡ್ರಾ ಮಾಡುವಾಗ ಕಳ್ಳರು ಬಳಸುವ ಈ ವಿಶಿಷ್ಟ ಟ್ರಿಕ್ ಬಗ್ಗೆ ಇರಲಿ ಎಚ್ಚರ


ಈ ತಿಂಗಳ ಮೂರು ದಿನಗಳ ರಜಾದಿನಗಳಲ್ಲಿ 2 ರಜಾದಿನಗಳು ಶನಿವಾರ, ಹಾಗೆಯೇ ಬಕ್ರಿದ್ ಸಂದರ್ಭದಲ್ಲಿ ಬ್ಯಾಂಕ್ ರಜೆ ಇರುತ್ತದೆ. ಅಂದರೆ, ಜುಲೈ 10, ಜುಲೈ 21 ಮತ್ತು ಜುಲೈ 24 ರಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಕರೋನಾ ಅವಧಿಯಲ್ಲಿ, ಎಸ್‌ಬಿಐ ಸೇರಿದಂತೆ ಅನೇಕ ಬ್ಯಾಂಕುಗಳು ಗ್ರಾಹಕರಿಗಾಗಿ ಡೋರ್ ಸ್ಟೆಪ್ ಬ್ಯಾಂಕಿಂಗ್ ಸೌಲಭ್ಯವನ್ನೂ ಒದಗಿಸುತ್ತಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.