ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ರಜಾದಿನಗಳ ವೇಳಾಪಟ್ಟಿಯ ಪ್ರಕಾರ, 2022ರ ಆಗಸ್ಟ್ ತಿಂಗಳಿನಲ್ಲಿ 6 ವಾರಾಂತ್ಯದ ರಜೆಗಳನ್ನು ಹೊರತುಪಡಿಸಿ, ಒಟ್ಟು 12 ದಿನಗಳವರೆಗೆ ಬ್ಯಾಂಕುಗಳು ಬಂದ್ ಆಗಿರುತ್ತವೆ. ಆಗಸ್ಟ್ ನಲ್ಲಿ ಒಟ್ಟು 18 ಬ್ಯಾಂಕ್ ರಜಾದಿನಗಳಿವೆ.


COMMERCIAL BREAK
SCROLL TO CONTINUE READING

ಅನೇಕ ಬ್ಯಾಂಕ್ ರಜಾದಿನಗಳು ಪ್ರಾದೇಶಿಕವಾಗಿದ್ದು, ರಾಜ್ಯದಿಂದ ರಾಜ್ಯಕ್ಕೆ ಮತ್ತು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತವೆ. ಇಂಫಾಲದ ಪ್ರಾದೇಶಿಕ ರಜಾದಿನವಾದ ದೇಶಪ್ರೇಮಿಗಳ ದಿನ ಆಗಸ್ಟ್ 13ರಂದು ಅಂದರೆ ತಿಂಗಳ 2ನೇ ಶನಿವಾರ ಎಲ್ಲಾ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. ಇದಲ್ಲದೇ ಇತರ 13 ಪ್ರಾದೇಶಿಕ ರಜಾದಿನಗಳಂತೆ ಬ್ಯಾಂಕ್ ಬಂದ್ ಆಗಿರಲಿವೆ. ಹೀಗಾಗಿ 19 ರಜಾದಿನಗಳ ಬದಲಿಗೆ, ಈ ತಿಂಗಳು ಕೇವಲ 18 ರಜಾದಿನಗಳು ಮಾತ್ರ ಇರುತ್ತವೆ.


ಇದನ್ನೂ ಓದಿ: 5G Auction: 1,49,966 ಕೋಟಿ ರೂ.ಮೌಲ್ಯದ ಬಿಡ್‌ಗಳನ್ನು ಸ್ವೀಕರಿಸಿದ ಕೇಂದ್ರ


ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ಆಗಸ್ಟ್ ನಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ


ಆಗಸ್ಟ್ 1: ಡ್ರುಕ್ಪಾ ತ್ಸೆ-ಜಿ(Drukpa Tshe-zi) ಗ್ಯಾಂಗ್ಟಾಕ್


ಆಗಸ್ಟ್ 8: ಮೊಹರಂ (Ashoora) - ಜಮ್ಮು, ಶ್ರೀನಗರ


ಆಗಸ್ಟ್ 9: ಮೊಹರಂ (Ashoora)- ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಬೇಲಾಪುರ, ಬೆಂಗಳೂರು, ಭೋಪಾಲ್, ಚೆನ್ನೈ, ಹೈದರಾಬಾದ್, ಜೈಪುರ, ಕಾನ್ಪುರ, ಕೋಲ್ಕತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ, ರಾಯ್ಪುರ ಮತ್ತು ರಾಂಚಿ


ಆಗಸ್ಟ್ 11: ರಕ್ಷಾ ಬಂಧನ - ಅಹ್ಮದಾಬಾದ್, ಭೋಪಾಲ್, ಡೆಹ್ರಾಡೂನ್, ಜೈಪುರ ಮತ್ತು ಶಿಮ್ಲಾ


ಆಗಸ್ಟ್ 12: ರಕ್ಷಾ ಬಂಧನ - ಕಾನ್ಪುರ ಮತ್ತು ಲಕ್ನೋ


ಆಗಸ್ಟ್ 13: ದೇಶಭಕ್ತರ ದಿನ - ಇಂಫಾಲ


ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ - ಭಾರತದಾದ್ಯಂತ


ಆಗಸ್ಟ್ 16: ಪಾರ್ಸಿ ಹೊಸ ವರ್ಷ (Shahenshahi)- ಬೇಲಾಪುರ, ಮುಂಬೈ ಮತ್ತು ನಾಗ್ಪುರ


ಆಗಸ್ಟ್ 18: ಜನ್ಮಾಷ್ಟಮಿ - ಭುವನೇಶ್ವರ, ಡೆಹ್ರಾಡೂನ್, ಕಾನ್ಪುರ ಮತ್ತು ಲಕ್ನೋ


ಆಗಸ್ಟ್ 19: ಜನ್ಮಾಷ್ಟಮಿ (Shravan Vad-8)/ ಕೃಷ್ಣ ಜಯಂತಿ - ಅಹಮದಾಬಾದ್, ಭೋಪಾಲ್, ಚಂಡೀಗಢ, ಚೆನ್ನೈ, ಗ್ಯಾಂಗ್ಟಾಕ್, ಜೈಪುರ, ಜಮ್ಮು, ಪಾಟ್ನಾ, ರಾಯ್ಪುರ, ರಾಂಚಿ, ಶಿಲ್ಲಾಂಗ್ ಮತ್ತು ಶಿಮ್ಲಾ


ಆಗಸ್ಟ್ 20: ಶ್ರೀ ಕೃಷ್ಣ ಅಷ್ಟಮಿ - ಹೈದರಾಬಾದ್


ಆಗಸ್ಟ್ 29: ಶ್ರೀಮಂತ ಶಂಕರದೇವರ ತಿಥಿ - ಗುವಾಹಟಿ


ಆಗಸ್ಟ್ 31: ಸಂವತ್ಸರಿ(Chaturthi Paksha)/ ಗಣೇಶ ಚತುರ್ಥಿ/ ವರಸಿದ್ಧಿ ವಿನಾಯಕ ವ್ರತ/ ವಿನಾಯಕ ಚತುರ್ಥಿ- ಅಹಮದಾಬಾದ್, ಬೇಲಾಪುರ, ಬೆಂಗಳೂರು, ಭುವನೇಶ್ವರ, ಚೆನ್ನೈ, ಹೈದರಾಬಾದ್, ಮುಂಬೈ, ನಾಗ್ಪುರ ಮತ್ತು ಪಣಜಿ


ಇದನ್ನೂ ಓದಿ: Amazon Great Freedom Festival: ಮೊಬೈಲ್ ಮೇಲೆ ಶೇ.40, ಟಿವಿಗಳಿಗೆ ಶೇ.60ರಷ್ಟು ರಿಯಾಯಿತಿ!


ವಾರಾಂತ್ಯದ ರಜೆಗಳ ಪಟ್ಟಿ(Weekend Leaves)


ಆಗಸ್ಟ್ 7: ಮೊದಲ ಭಾನುವಾರ


ಆಗಸ್ಟ್ 13: 2ನೇ ಶನಿವಾರ + ದೇಶಭಕ್ತರ ದಿನ


ಆಗಸ್ಟ್ 14: 2ನೇ ಭಾನುವಾರ


ಆಗಸ್ಟ್ 21: 3ನೇ ಭಾನುವಾರ


ಆಗಸ್ಟ್ 27: 4ನೇ ಶನಿವಾರ


ಆಗಸ್ಟ್ 28: 4ನೇ ಭಾನುವಾರ


RBI ರಜಾದಿನಗಳನ್ನು Holiday under Negotiable Instruments Act, Holiday under Negotiable Instruments Act & Real-Time Gross Settlement Holiday ಮತ್ತು Banks’ Closing of Accounts ಎಂದು 3 ವಿಭಾಗಗಳಾಗಿ ವಿಂಗಡಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.