Bank Holidays In April: ಏಪ್ರಿಲ್‌ನಲ್ಲಿ 14ದಿನಗಳವರೆಗೆ ಬ್ಯಾಂಕ್‌ಗಳಿಗೆ ರಜೆ, ಇಲ್ಲಿದೆ ಲಿಸ್ಟ್
Bank Holidays In April: ಇಂದಿನಿಂದ (ಏಪ್ರಿಲ್ 01) ಹೊಸ ಹಣಕಾಸು ವರ್ಷ ಆರಂಭವಾಗಿದೆ. ಈ ತಿಂಗಳು ಬ್ಯಾಂಕ್‌ಗಳಿಗೆ ಬರೋಬ್ಬರಿ 14 ದಿನ ರಜೆ ಇರಲಿದೆ. ಹಾಗಾಗಿ, ನಿಮಗೆ ಬ್ಯಾಂಕ್ಗಳಲ್ಲಿ ಏನಾದರೂ ಮುಖ್ಯವಾದ ಕೆಲಸ ಇದ್ದಲ್ಲಿ ಹೊರಹೋಗುವ ಮೊದಲು ಈ ಪಟ್ಟಿಯನ್ನು ಒಮ್ಮೆ ಪರಿಶೀಲಿಸಿ.
Bank Holidays In April: ಏಪ್ರಿಲ್ 01, 2024ರಿಂದ ಹೊಸ ವಿತ್ತೀಯ ವರ್ಷ ಆರಂಭವಾಗಿದೆ. ಹಾಗಾಗಿ, ಇಂದು ದೇಶಾದ್ಯಂತ ಹೆಚ್ಚಿನ ಬ್ಯಾಂಕ್‌ಗಳು ಹಿಂದಿನ ಆರ್ಥಿಕ ವರ್ಷದ ಲೆಕ್ಕಾಚಾರಗಳನ್ನು ಪೂರ್ಣಗೊಳಿಸುವಲ್ಲಿ ನಿರತರಾಗಿರುವುದರಿಂದ ಏಪ್ರಿಲ್ 01ರಂದು ಬ್ಯಾಂಕ್ ರಜೆ ಇರಲಿದೆ. ಈ ತಿಂಗಳಿನಲ್ಲಿ ಒಟ್ಟು 14 ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದ್ದು, ನಿಮಗೇನಾದರೂ ಬ್ಯಾಂಕಿಂಗ್ ಸಂಬಂಧಿತ ಮುಖ್ಯ ಕೆಲಸಗಳಿಗಾಗಿ ಬ್ಯಾಂಕಿಗೆ ಹೋಗಬೇಕಿದ್ದರೆ ಮೊದಲು ರಜಾ ದಿನಗಳ ಪಟ್ಟಿಯನ್ನು ಪರಿಶೀಲಿಸಿ.
ಆರ್‌ಬಿಐ ಕ್ಯಾಲೆಂಡರ್ (RBI Calender) ಪ್ರಕಾರ, ಏಪ್ರಿಲ್‌ನಲ್ಲಿ ಎಲ್ಲಾ ಸಾರ್ವಜನಿಕ ರಜಾದಿನಗಳು, ಪ್ರಾದೇಶಿಕ ರಜಾದಿನಗಳು, ಶನಿವಾರ ಮತ್ತು ಭಾನುವಾರದ ರಜೆಗಳನ್ನು ಸೇರಿಸಿ ಬ್ಯಾಂಕ್‌ಗಳು 14 ದಿನಗಳ ಕಾಲ ಮುಚ್ಚಲ್ಪಡುತ್ತವೆ. ಸಾರ್ವಜನಿಕ ರಜಾ ದಿನಗಳು ಎಲ್ಲಾ ರಾಜ್ಯಗಳಲ್ಲೂ ಒಂದೇ ಆಗಿದ್ದರೂ, ಪ್ರಾದೇಶಿಕ ರಜೆಗಳು ಆಯಾ ರಾಜ್ಯಗಳ ಸ್ಥಳೀಯ ಹಬ್ಬಗಳಿಗೆ ಅನುಗುಣವಾಗಿ ಇರಲಿದೆ.
ಇದನ್ನೂ ಓದಿ- ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭ: ಬದಲಾಗಲಿವೆ ಹಲವು ನಿಯಮ, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ
ಆರ್‌ಬಿಐನಿಂದ ಬಿಡುಗಡೆಯಾಗಿರುವ ಬ್ಯಾಂಕ್ ರಜಾದಿನಗಳ ಪಟ್ಟಿ:
ಏಪ್ರಿಲ್‌ನಲ್ಲಿ ಆರ್ಥಿಕ ವರ್ಷದ (Financial Year) ಕೊನೆಯಲ್ಲಿ ಬ್ಯಾಂಕ್ ಖಾತೆಗಳನ್ನು ಮುಚ್ಚುವುದರಿಂದ, ತಿಂಗಳ ಪ್ರಾರಂಭದ ದಿನವಾದ ಏಪ್ರಿಲ್ 1 ರಂದು ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಇದಲ್ಲದೇ, ಈ ತಿಂಗಳಿನಲ್ಲಿ ಯುಗಾದಿ, ಈದ್‌ನಂತಹ ಹಬ್ಬಗಳ ಕಾರಣದಿಂದಾಗಿ ಹಲವೆಡೆ ಏಪ್ರಿಲ್ 09, ಏಪ್ರಿಲ್ 10 ರಂದು ಮತ್ತು ಅನೇಕ ರಾಜ್ಯಗಳಲ್ಲಿ ಏಪ್ರಿಲ್ 11 ರಂದು ರಜೆ ಇರಲಿದೆ.
ಇದನ್ನೂ ಓದಿ- LPG Price: ಏಪ್ರಿಲ್ ಮೊದಲ ದಿನವೇ ಗ್ರಾಹಕರಿಗೆ ಗುಡ್ ನ್ಯೂಸ್! 30.50 ರೂ. ಅಗ್ಗವಾಯ್ತು ಸಿಲಿಂಡರ್
ನೀವು ಏಪ್ರಿಲ್‌ನಲ್ಲಿ ಬ್ಯಾಂಕ್ ಸಂಬಂಧಿತ ಕೆಲಸವನ್ನು ಹೊಂದಿದ್ದರೆ, ನೀವು ಬ್ಯಾಂಕಿಗೆ ಹೋಗುವ ಮುನ್ನ ಈ ಪಟ್ಟಿಯನ್ನು ಒಮ್ಮೆ ಪರಿಶೀಲಿಸಿ...
* 01 ಏಪ್ರಿಲ್ 2024- ಹಣಕಾಸು ವರ್ಷದ ಕೊನೆಯಲ್ಲಿ ಬ್ಯಾಂಕ್‌ಗಳ ಖಾತೆಗಳನ್ನು ಮುಚ್ಚುವುದರಿಂದ ದೇಶಾದ್ಯಂತ ಏಪ್ರಿಲ್ 01ರಂದು ಬ್ಯಾಂಕ್‌ಗಳಿಗೆ ರಜೆ (Bank Holidays) ಇರಲಿದೆ.
* 05 ಏಪ್ರಿಲ್ 2024- ಬಾಬು ಜಗಜೀವನ್ ರಾಮ್ ಅವರ ಜನ್ಮದಿನ ಮತ್ತು ಜುಮಾತ್-ಉಲ್-ವಿದಾ ಕಾರಣ, ಹೈದರಾಬಾದ್, ತೆಲಂಗಾಣ, ಜಮ್ಮು ಮತ್ತು ಶ್ರೀನಗರದಲ್ಲಿ ಈ ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
* 07 ಏಪ್ರಿಲ್ 2024- ಭಾನುವಾರ ದೇಶಾದ್ಯಂತ ಬ್ಯಾಂಕ್‌ಗಳಿಗೆ ರಜೆ.
* 09ಏಪ್ರಿಲ್ 2024- ಗುಡಿ ಪಾಡ್ವಾ / ಯುಗಾದಿ ಹಬ್ಬ / ತೆಲುಗು ಹೊಸ ವರ್ಷ ಮತ್ತು ಮೊದಲ ನವರಾತ್ರಿಯ ಕಾರಣ ಬೇಲಾಪುರ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಇಂಫಾಲ್, ಜಮ್ಮು, ಮುಂಬೈ, ನಾಗ್ಪುರ, ಪಣಜಿ ಮತ್ತು ಶ್ರೀನಗರದಲ್ಲಿ ಬ್ಯಾಂಕುಗಳು ಈ ದಿನ ಕಾರ್ಯ ನಿರ್ವಹಿಸುವುದಿಲ್ಲ.
* 10 ಏಪ್ರಿಲ್ 2024- ಈದ್ ಕಾರಣ ಕೊಚ್ಚಿ ಮತ್ತು ಕೇರಳದಲ್ಲಿ ಬ್ಯಾಂಕ್‌ಗಳು ರಜೆ ಇರಲಿವೆ.
* 11 ಏಪ್ರಿಲ್ 2024- ಈದ್‌ನ ಕಾರಣ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
* 13 ಏಪ್ರಿಲ್ 2024- ತಿಂಗಳ ಎರಡನೇ ಶನಿವಾರದ ಕಾರಣ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
* 14 ಏಪ್ರಿಲ್ 2024- ಭಾನುವಾರದ ಕಾರಣ ದೇಶದಾದ್ಯಂತ ಬ್ಯಾಂಕುಗಳಿಗೆ ರಜೆ.
* 15 ಏಪ್ರಿಲ್ 2024- ಹಿಮಾಚಲ ದಿನದ ಕಾರಣ ಗುವಾಹಟಿ ಮತ್ತು ಶಿಮ್ಲಾದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
* 17 ಏಪ್ರಿಲ್ 2024- ಶ್ರೀರಾಮ ನವಮಿ ಹಬ್ಬದಂದು ಅಹಮದಾಬಾದ್, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಡೆಹ್ರಾಡೂನ್, ಗ್ಯಾಂಗ್ಟಾಕ್, ಹೈದರಾಬಾದ್, ಜೈಪುರ, ಕಾನ್ಪುರ್, ಲಕ್ನೋ, ಪಾಟ್ನಾ, ರಾಂಚಿ, ಶಿಮ್ಲಾ, ಮುಂಬೈ ಮತ್ತು ನಾಗ್ಪುರದಲ್ಲಿ ಬ್ಯಾಂಕ್‌ಗಳಿಗೆ ರಜೆ ನೀಡಲಾಗಿದೆ.
* 20 ಏಪ್ರಿಲ್ 2024- ಗರಿಯಾ ಪೂಜೆಯ ಕಾರಣ ಅಗರ್ತಲಾದಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.
* 21 ಏಪ್ರಿಲ್ 2024- ಭಾನುವಾರ, ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
* 27 ಏಪ್ರಿಲ್ 2024- ನಾಲ್ಕನೇ ಶನಿವಾರದ ಕಾರಣ ದೇಶದಾದ್ಯಂತ ಬ್ಯಾಂಕುಗಳಿಗೆ ರಜೆ ಇರಲಿದೆ.
* 28 ಏಪ್ರಿಲ್ 2024- ಭಾನುವಾರ ಆಗಿರುವುದರಿಂದ ದೇಶದಾದ್ಯಂತ ಬ್ಯಾಂಕುಗಳಿಗೆ ರಜೆ ಇರಲಿದೆ.
ಆದಾಗ್ಯೂ, ಬ್ಯಾಂಕ್ ಗೆ ಸಂಬಂಧಿಸಿದ ಯಾವುದೇ ಕೆಲಸಗಳಿದ್ದರೆ ಮೊಬೈಲ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಮನೆಯಲ್ಲೇ ಕುಳಿತು ನೀವು ಈ ಕೆಲಸಗಳನ್ನು ಪೂರ್ಣಗೊಳಿಸಬಹುದಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.