Bank Holiday on May: ನಾಳೆಯಿಂದ ಮೇ ತಿಂಗಳು ಆರಂಭವಾಗಲಿದೆ. ಮೇ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ ಎಷ್ಟು ದಿನ ರಜೆ ಇರಲಿದೆ ಎಂದು ತಿಳಿಯಲು ಇಲ್ಲಿದೆ ಆರ್‌ಬಿ‌ಐ ರಜಾ ದಿನಗಳ ಪಟ್ಟಿ. 


COMMERCIAL BREAK
SCROLL TO CONTINUE READING

ಮೇ ತಿಂಗಳಿನಲ್ಲಿ ಎಷ್ಟು ದಿನ ಬ್ಯಾಂಕ್‌ಗಳಿಗೆ ರಜೆ? 
ಆರ್‌ಬಿ‌ಐ (RBI) ಬಿಡುಗಡೆ ಮಾಡಿರುವ ಬ್ಯಾಂಕ್‌ಗಳ ರಜೆ ದಿನ ಪಟ್ಟಿಯ ಪ್ರಕಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ನಾಲ್ಕು ಭಾನುವಾರಗಳು ಸೇರಿದಂತೆ ಒಟ್ಟು 14 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. 


ಇದನ್ನೂ ಓದಿ- New Rules From 1st May: ಕ್ರೆಡಿಟ್ ಕಾರ್ಡ್ ಸೇರಿದಂತೆ ನಾಳೆಯಿಂದ ಬದಲಾಗಲಿವೆ ಈ ಪ್ರಮುಖ ನಿಯಮಗಳು!


ಆರ್‌ಬಿ‌ಐಯ ಅಧಿಕೃತ  ವೆಬ್‌ಸೈಟ್‌ನಲ್ಲಿ ನೀಡಲಾದ ರಜಾದಿನಗಳ ಪಟ್ಟಿಯ (Holidays List) ಪ್ರಕಾರ, ವಿವಿಧ ರಾಜ್ಯಗಳಿಗೆ ಅನುಗುಣವಾಗಿ ಸ್ಥಳೀಯ ರಜೆಗಳು ಬದಲಾಗಲಿವೆ. ಇದರೊಂದಿಗೆ ಚುನಾವಣಾ ಪ್ರದೇಶಗಳಲ್ಲಿ ಮತದಾನದ ದಿನದಂದು ಬ್ಯಾಂಕ್‌ಗಳಿಗೆ ರಜೆ (Bank Holiday) ಇರಲಿದೆ. 


ಇದನ್ನೂ ಓದಿ- ಶೀಘ್ರದಲ್ಲೇ ಖಾತೆಗೆ ಬೀಳಲಿದೆ ಪಿಎಫ್ ಬಡ್ಡಿ : ಈ ರೀತಿಯಲ್ಲಿ ನಿಮ್ಮ ಪಿಎಫ್ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿ !


ಮೇ ತಿಂಗಳಿನಲ್ಲಿ ಎಷ್ಟು ದಿನ ಬ್ಯಾಂಕ್‌ಗಳು ಮುಚ್ಚಿರುತ್ತವೆ?
ಮೇ 01: ಮಹಾರಾಷ್ಟ್ರ ದಿನ ಮತ್ತು ಕಾರ್ಮಿಕ ದಿನಾಚರಣೆಯ ಕಾರಣ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಮೇ 05: ಭಾನುವಾರ ರಜೆ.
ಮೇ 07ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. 
ಮೇ 08: ರವೀಂದ್ರನಾಥ ಟ್ಯಾಗೋರ್ ಜಯಂತಿ ರಜೆ. (ಕೋಲ್ಕತ್ತಾದಲ್ಲಿ ಮಾತ್ರ)
ಮೇ 10:  ಬಸವ ಜಯಂತಿ/ಅಕ್ಷಯ ತೃತೀಯದ ಕಾರಣ ಹಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. 
ಮೇ 11: ಎರಡನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ.
ಮೇ 12: ಭಾನುವಾರ ರಜೆ.
ಮೇ 13: ವಿವಿಧ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯ ಕಾರಣ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. 
ಮೇ 16: ರಾಜ್ಯ ದಿನದ ಕಾರಣ, ಗ್ಯಾಂಗ್ಟಾಕ್‌ನ ಎಲ್ಲಾ ಬ್ಯಾಂಕ್‌ಗಳು ಈ ದಿನ ಮುಚ್ಚಲ್ಪಡುತ್ತವೆ.
ಮೇ 19: ಭಾನುವಾರ ರಜೆ.
ಮೇ 20: ಬೇಲಾಪುರ ಮತ್ತು ಮುಂಬೈನಲ್ಲಿ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಮೇ 23: ಬುದ್ಧ ಪೂರ್ಣಿಮಾ ರಜೆ
ಮೇ 25: ನಾಲ್ಕನೇ ಶನಿವಾರ ರಜೆ
ಮೇ 26: ಭಾನುವಾರ ರಜೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.