Bank Holiday : ಬ್ಯಾಂಕ್ ಗ್ರಾಹಕರ ಗಮನಕ್ಕೆ : ಆಗಸ್ಟ್‌ನಲ್ಲಿ 13 ದಿನ ಬಂದ್..!
ಈ ಬಾರಿ ಆಗಸ್ಟ್‌ನಲ್ಲಿ ಮೊಹರಂ, ರಕ್ಷಾ ಬಂಧನ, ಸ್ವಾತಂತ್ರ್ಯ ದಿನಾಚರಣೆ, ಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶ ಚತುರ್ಥಿ ಮುಂತಾದ ಹಲವು ಹಬ್ಬಗಳಿವೆ.
Bank Holiday List in August 2022 : ಜುಲೈ ತಿಂಗಳು ಮುಗಿಯಲು ಸ್ವಲ್ಪ ದಿನಗಳು ಮಾತ್ರ ಬಾಕಿ ಇದೆ. ಹಾಗೆ ಆಗಸ್ಟ್ ಪ್ರಾರಂಭವಾಗುತ್ತದೆ. ಆಗಸ್ಟ್ ತಿಂಗಳಲ್ಲಿ ತುಂಬಾ ಹಬ್ಬಗಳು ಇರುವುದರಿಂದ ಅತೀ ಹೆಚ್ಚು ರಜಾ ದಿನಗಳಿವೆ. ಈ ಬಾರಿ ಆಗಸ್ಟ್‌ನಲ್ಲಿ ಮೊಹರಂ, ರಕ್ಷಾ ಬಂಧನ, ಸ್ವಾತಂತ್ರ್ಯ ದಿನಾಚರಣೆ, ಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶ ಚತುರ್ಥಿ ಮುಂತಾದ ಹಲವು ಹಬ್ಬಗಳಿವೆ, ಹೀಗಾಗಿ ಈ ದಿನಗಳಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಹಾಗಿದ್ರೆ ಆಗಸ್ಟ್‌ನಲ್ಲಿ ಅಷ್ಟು ದಿನ ಬ್ಯಾಂಕ್ ರಜೆ ಇದೆ? ಯಾವ ಯಾವ ರಾಜ್ಯಗಳಿಗೆ ಅನ್ವಯವಾಗುತ್ತದೆ.
ರಜಾದಿನಗಳು ರಾಜ್ಯ ಮತ್ತು ನಗರದಿಂದ ನಗರಕ್ಕೆ ಬದಲಾಗುತ್ತವೆ
ನೀವು ಆಗಸ್ಟ್‌ನಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸಗಳಿದ್ದರೆ, ಈಗಿನಿಂದಲೇ ಅದನ್ನು ಪ್ಲಾನ್ ಮಾಡಿಕೊಳ್ಳಿ. ಆರ್‌ಬಿಐ ಬಿಡುಗಡೆ ಮಾಡಿರುವ ಕ್ಯಾಲೆಂಡರ್ ಪ್ರಕಾರ, ಆಗಸ್ಟ್‌ನಲ್ಲಿ ಶನಿವಾರ ಮತ್ತು ಭಾನುವಾರ 18 ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಇರುತ್ತದೆ.
ಇದನ್ನೂ ಓದಿ : Arecanut Price: ಇಂದಿನ ಅಡಿಕೆ ದರ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ..?
ರಜಾದಿನಗಳಲ್ಲಿ ಆನ್‌ಲೈನ್ ಮೂಲಕ ಕೆಲಸ ಮಾಡಿಕೊಳ್ಳಬಹುದು
ಬ್ಯಾಂಕ್ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳು ಮತ್ತು ಘಟನೆಗಳ ಮೇಲೆ ಅವಲಂಬಿತವಾಗಿದೆ. ಯಾವುದೇ ದಿನ ಬ್ಯಾಂಕ್ ರಜೆಯಾಗಿದ್ದರೆ, ನೀವು ಆನ್‌ಲೈನ್ ಮೂಲಕ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಮನೆ ಅಥವಾ ಕಚೇರಿಯಿಂದ ನಿಮ್ಮ ಕೆಲಸವನ್ನು ಮಾಡಿಕೊಳ್ಳಬಹುದು. ನೀವು ದಿನವಿಡೀ ಆನ್‌ಲೈನ್ ಬ್ಯಾಂಕಿಂಗ್ ಸೇವೆಯನ್ನು ಬಳಸಬಹುದು. ಈ ತಿಂಗಳು ಆರು ದಿನಗಳು ಶನಿವಾರ ಮತ್ತು ಭಾನುವಾರ ವಾರದ ರಜಾದಿನಗಳಾಗಿವೆ. ಇದಲ್ಲದೇ ವಿವಿಧ ರಾಜ್ಯಗಳ ಪ್ರಕಾರ ಇನ್ನೂ 12 ರಜೆಗಳಿವೆ. ಈ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿಯನ್ನು ಈ ಕೆಳಗಿದೆ.
ರಾಜ್ಯಗಳ ಪ್ರಕಾರ ಆಗಸ್ಟ್‌ನಲ್ಲಿ ಬ್ಯಾಂಕ್ ಹಾಲಿಡೇ ಪಟ್ಟಿ
ಆಗಸ್ಟ್ 1 - ದ್ರುಪಕಾ ಶೀ-ಜಿ (ಸಿಕ್ಕಿಂನಲ್ಲಿ ರಜಾದಿನ)
ಆಗಸ್ಟ್ 7 - ಭಾನುವಾರ (ವಾರದ ರಜೆ)
ಆಗಸ್ಟ್ 8 - ಮೊಹರಂ (ಜಮ್ಮು ಮತ್ತು ಕಾಶ್ಮೀರದಲ್ಲಿ ರಜಾದಿನ)
ಆಗಸ್ಟ್ 9 - ಮೊಹರಂ (ನವದೆಹಲಿ, ಲಕ್ನೋ, ಜೈಪುರ, ಹೈದರಾಬಾದ್, ಭೋಪಾಲ್, ಚೆನ್ನೈ, ಕೋಲ್ಕತ್ತಾ, ಮುಂಬೈ, ಪಾಟ್ನಾ, ರಾಯಪುರ, ನಾಗ್ಪುರ ಮತ್ತು ರಾಂಚಿ ಇತ್ಯಾದಿಗಳಲ್ಲಿ ರಜಾದಿನ)
ಆಗಸ್ಟ್ 11 - ರಕ್ಷಾ ಬಂಧನ (ಎಲ್ಲಾ ರಾಜ್ಯಗಳಲ್ಲಿ ರಜೆ)
ಆಗಸ್ಟ್ 12 - ರಕ್ಷಾ ಬಂಧನ (ಕಾನ್ಪುರ್-ಲಕ್ನೋ)
ಆಗಸ್ಟ್ 13 - ಎರಡನೇ ಶನಿವಾರ (ರಜೆ)
ಆಗಸ್ಟ್ 14 - ಭಾನುವಾರ (ವಾರದ ರಜೆ)
ಆಗಸ್ಟ್ 15 - ಸ್ವಾತಂತ್ರ್ಯ ದಿನ
ಆಗಸ್ಟ್ 16 - ಪಾರ್ಸಿ ಹೊಸ ವರ್ಷ (ಮುಂಬೈ-ನಾಗ್ಪುರದಲ್ಲಿ ರಜೆ)
ಆಗಸ್ಟ್ 18- ಜನ್ಮಾಷ್ಟಮಿ (ಎಲ್ಲೆಡೆ ರಜೆ)
ಆಗಸ್ಟ್ 19 - ಶ್ರೀ ಕೃಷ್ಣ ಜನ್ಮಾಷ್ಟಮಿ (ಅಹಮದಾಬಾದ್, ಭೋಪಾಲ್, ಚಂಡೀಗಢ, ಚೆನ್ನೈ, ಗ್ಯಾಂಗ್ಟಾಕ್, ಜೈಪುರ, ಜಮ್ಮು, ಗಟ್ನಾ, ರಾಯ್ಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ)
ಆಗಸ್ಟ್ 20 - ಕೃಷ್ಣ ಅಷ್ಟಮಿ (ಹೈದರಾಬಾದ್)
ಆಗಸ್ಟ್ 21 - ಭಾನುವಾರ (ವಾರದ ರಜೆ)
ಆಗಸ್ಟ್ 27 - ನಾಲ್ಕನೇ ಶನಿವಾರ (ವಾರದ ರಜೆ)
ಆಗಸ್ಟ್ 28 - ಭಾನುವಾರ (ವಾರದ ರಜೆ)
ಆಗಸ್ಟ್ 29 - ಶ್ರೀಮಂತ್ ಶಂಕರದೇವ್ ದಿನಾಂಕ (ಗುವಾಹಟಿ)
ಆಗಸ್ಟ್ 31 - ಗಣೇಶ ಚತುರ್ಥಿ (ಗುಜರಾತ್, ಮಹಾರಾಷ್ಟ್ರ, ಕರ್ನಾಟಕ)
ಇದನ್ನೂ ಓದಿ : ಆಗಸ್ಟ್ ಎರಡನೇ ವಾರದಿಂದ ಓಡಾಡಲಿದೆ ವಂದೇ ಭಾರತ ರೈಲು ..!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.