ಬ್ಯಾಂಕ್ ಲಾಕರ್ ನಲ್ಲಿಟ್ಟ Gold ಕಳುವಾದರೆ ಪರಿಹಾರ ಸಿಗುತ್ತಾ? ನಿಯಮ ಏನು ಹೇಳುತ್ತೆ?
ನೀವು ನಿಮ್ಮ ಮನೆಯಲ್ಲಿರುವ ಚಿನ್ನವನ್ನು(Gold) ಬ್ಯಾಂಕ್ ಲಾಕರ್ ನಲ್ಲಿಟ್ಟು ಜಾಣತನದ ಕೆಲಸ ಮಾಡಿರುವುದಾಗಿ ಅಂದುಕೊಳ್ಳುತ್ತಿದ್ದರೆ ಮತ್ತು ನಿಮ್ಮ ಚಿನ್ನ ಸಂಪೂರ್ಣ ಸುರಕ್ಷಿತವಾಗಿದೆ ಎಂದು ನೀವು ಭಾವಿಸುತ್ತಿದ್ದರೆ , ನಿಮ್ಮ ಈ ಭ್ರಮೆಯನ್ನು ದೂರಗೊಳಿಸಿ.
ನವದೆಹಲಿ:ಪ್ರಾಚೀನ ಕಾಲದಿಂದಲೂ ಚಿನ್ನ (Gold) ವನ್ನು ಸುರಕ್ಷಿತ ಹೂಡಿಕೆ ಮೂಲವೆಂದು ಪರಿಗಣಿಸಲಾಗಿದೆ. ಇಂದಿಗೂ ಭಾರತದಲ್ಲಿ ಚಿನ್ನದೊಂದಿಗೆ ಭಾವನಾತ್ಮಕ ಸಂಬಂಧವಿದೆ. ಆದರೆ ಮನೆಯಲ್ಲಿ ಚಿನ್ನವನ್ನು ಇಡುವುದು ಅಪಾಯದಿಂದ ಖಾಲಿಯಾಗಿಲ್ಲ, ಏಕೆಂದರೆ ಅದು ಕಳುವಾಗುತ್ತದೆ ಎಂಬ ಕಾಡುತ್ತದೆ. ಆದ್ದರಿಂದ ಕೆಲವರು ಇದಕ್ಕಾಗಿ ತಮ್ಮ ಚಿನ್ನವನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡುತ್ತಾರೆ. ಅನೇಕ ಬ್ಯಾಂಕುಗಳು ಲಾಕರ್ ಸೌಲಭ್ಯಗಳನ್ನು ನೀಡುತ್ತವೆ. ನೀವೂ ಸಹ ಈ ರೀತಿ ಯೋಚಿಸುತ್ತಿದ್ದರೆ, ಮೊದಲು ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯ.
ಲಾಕರ್ ನಲ್ಲಿಡಲಾಗಿರುವ ಮೌಲ್ಯಯುತ ವಸ್ತುಗಳು ಸುರಕ್ಷಿತವಾಗಿದೆಯೆ?
ಒಂದು ವೇಳೆ ನೀವು ಚಿನ್ನದ ಆಭರಣಗಳು ಅಥವಾ ಇನ್ನಾವುದೇ ಮಹತ್ವದ ಹಾಗೂ ಮೌಲ್ಯಯುತ ವಸ್ತುಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದು, ಅವು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ನೀವು ಭಾವಿಸಿದ್ದರೆ ಮತ್ತು ಯಾವುದೇ ಒಂದು ಕಾರಣಗಳಿಂದ ಲಾಕರ್ ನಲ್ಲಿ ಇರಿಸಲಾದ ಸರಕುಗಳು ಹಾನಿಗೊಳಗಾದರೆ ಅಥವಾ ಕಳ್ಳತನವಾದರೆ ಬ್ಯಾಂಕ್ ಗಳು ಅದರ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಿಲ್ಲ.
ಇದನ್ನು ಓದಿ- PM Modi ಸರ್ಕಾರದ ಈ ಸ್ಕೀಮ್ ಮೂಲಕ ಅಗ್ಗದ ಚಿನ್ನ ಖರೀದಿಸಿ, ಉತ್ತಮ ಆದಾಯ ನಿಮ್ಮದಾಗಿಸಿಕೊಳ್ಳಿ
ಲಾಕರ್ ವ್ಯವಸ್ಥೆಯ ಕುರಿತು RBI ನಿರ್ದೇಶನಗಳೇನು?
ಲಾಕರ್ ನಲ್ಲಿರಿಸಲಾಗಿರುವ ಚಿನ್ನ ಅಥವಾ ಇತರ ಯಾವುದೇ ವಸ್ತುಗಳ ಸುರಕ್ಷತೆಯ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ 2017ರಲ್ಲಿ ಗೈಡ್ ಲೈನ್ಸ್ ನೀಡಿದೆ. ಈ ಮಾರ್ಗಸೂಚಿತಲ ಪ್ರಕಾರ, ಬ್ಯಾಂಕ್ ನಲ್ಲಿ ಯಾವುದೇ ದುರ್ಘಟನೆ ಸಂಭವಿಸಿ ಒಂದು ವೇಳೆ ಲಾಕರ್ ನಲ್ಲಿ ಇರಿಸಲಾಗಿರುವ ವಸ್ತುಗಳಿಗೆ ಹಾನಿ ತಲುಪಿದರೆ, ಆ ಹಾನಿಗೆ ಪರಿಹಾರ ನೀಡುವುದು ಬ್ಯಾಂಕ್ ಗಳ ಜವಾಬ್ದಾರಿ ಅಲ್ಲ ಎಂದು ಸ್ಪಷ್ಟಪಡಿಸಿದೆ.
ಹೀಗಾಗಿ ಬ್ಯಾಂಕ್ ಗಳು ಗ್ರಾಹಕರ ಜೊತೆಗೆ ಲಾಕರ್ ಅಗ್ರೀಮೆಂಟ್ ಮಾಡಿಕೊಳ್ಳುವ ವೇಳೆ ಈ ಸಂಗತಿಯನ್ನು ದಾಖಲೆಗಳಲ್ಲಿ ಸ್ಪಷ್ಟವಾಗಿ ನಮೂದಿಸಿರುತ್ತವೆ. ಹೀಗಾಗಿ ಬ್ಯಾಂಕ್ ಲಾಕರ್ ನಲ್ಲಿಡುವ ಮುನ್ನ ಗ್ರಾಹಕರು ತಮ್ಮ ವಸ್ತುಗಳ ವಿಮೆ ಇಳಿಸುವುದು ಯೋಗ್ಯವಾದ ಹೆಜ್ಜೆಯಾಗಿದೆ.
ಇದನ್ನು ಓದಿ- ದೀಪಾವಳಿ ಹಬ್ಬದವರೆಗೆ ಚಿನ್ನದ ಬೆಲೆ 60 ಸಾವಿರಕ್ಕೆ ತಲುಪುವ ಸಾಧ್ಯತೆ, ಹೂಡಿಕೆಯ ಮೊದಲು ಈ ವಿಷಯಗಳನ್ನು ಗಮನಿಸಿ
ಬ್ಯಾಂಕ್ ಲಾಕರ್ ನಲ್ಲಿರಿಸಿರುವ ಚಿನ್ನಾಭರಣ ಒಂದು ವೇಳೆ ಕಳುವಾದರೆ ಅಥವಾ ಅಗ್ನಿ ಅವಘಡಕ್ಕೆ ತುತ್ತಾದರೆ, ಬ್ಯಾಂಕ್ ಗಳು ಅವುಗಳ ಜವಾಬ್ದಾರಿ ಹೊರುವದಿಲ್ಲ. ಹೀಗಾಗಿ ಒಂದು ವೇಳೆ ನೀವು ಕೂಡ ನಿಮ್ಮ ಚಿನ್ನ-ಬೆಳ್ಳಿಯ ಆಭರಣಗಳನ್ನು ಬ್ಯಾಂಕ್ ನಲ್ಲಿ ಇರಿಸಿದ್ದರೆ ಅವುಗಳ ವಿಮೆ ಇಳಿಸುವುದನ್ನು ಮರೆಯದಿರಿ. ಇನ್ನೊಂದೆಡೆ ಚಿನ್ನಾಭರಣ ಗಳಿಗಾಗಿ ವಿಮಾ ಪಾಲಸಿ ತೆಗೆದುಕೊಂಡ ಸಂದರ್ಭದಲ್ಲಿ ನೀವು ನಿಮ್ಮ ಚಿನ್ನಾಭರಣಗಳನ್ನು ಬ್ಯಾಂಕ್ ಲಾಕರ್ ನಲ್ಲಿರಿಸುವ ಅವಶ್ಯಕತೆ ಕೂಡ ಬೀಳುವುದಿಲ್ಲ.
ವಿಮಾ ಪಾಲಸಿ ತೆಗೆದುಕೊಂಡ ಸಂದರ್ಭದಲ್ಲಿ ನಿಮಗೆ ಮಾಸಿಕ 300 ರೂ.ಗಳಿಂದ 3000 ಪ್ರಿಮಿಯಂ ಪಾವತಿಸಬೇಕು. ata AIG, IFFCO TOKIO, ICICI Lombard, Future Generali ಗಳಂತಹ ಕೆಲ ಕಂಪನಿಗಳು gold ಇನ್ಸೂರೆನ್ಸ್ ನೀಡುತ್ತವೆ. ನಿಮ್ಮ ಪ್ರೀಮಿಯಂ ಆಧರಿಸಿ ನಿಮಗೆ 40 ಲಕ್ಷ ರೂ.ಗಳ ವರೆಗೆ ಕವರ್ ಸಿಗುತ್ತದೆ.