Bank Locker Rule Change: ಬ್ಯಾಂಕ್ ನಲ್ಲಿ ಲಾಕರ್ ಹೊಂದಿರುವವರೇ ಎಚ್ಚರ! ನಿಯಮ ಬದಲಾಯಿಸಿದ RBI
New Bank Locker Rules: ನೂತನ ಆರ್‌ಬಿಐ (RBI) ಮಾರ್ಗಸೂಚಿಗಳ ಪ್ರಕಾರ, ಲಾಕರ್ ಅನ್ನು ದೀರ್ಘಕಾಲದವರೆಗೆ ತೆರೆಯದಿದ್ದರೆ, ನಿಯಮಿತವಾಗಿ ಬಾಡಿಗೆ ಪಾವತಿಸುತ್ತಿದ್ದರೂ ಕೂಡ, ಬ್ಯಾಂಕುಗಳಿಗೆ ಲಾಕರ್ ತೆರೆಯಲು ಅನುಮತಿ ನೀಡಲಾಗಿದೆ.
ನವದೆಹಲಿ: RBI New Guidelines On Locker - ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್‌ನಲ್ಲಿ (Bank Locker) ಇರಿಸುತ್ತಾರೆ, ಇದರಿಂದ ಈ ದುಬಾರಿ ವಸ್ತುಗಳು ಸುರಕ್ಷಿತವಾಗಿರುತ್ತವೆ. ಬ್ಯಾಂಕುಗಳ ಹೋಲಿಕೆಯಲ್ಲಿ ನಮ್ಮ ಮನೆಯಲ್ಲಿಟ್ಟಿರುವ ಆಭರಣಗಳು ಕಳ್ಳತನವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ಇದೀಗ ಈ ನಿಮ್ಮಈ ಅನುಕೂಲತೆಯ ಮೇಲೆ ಗ್ರಹಣ ಹಿಡಿಯುವ ಸಾಧ್ಯತೆ ಇದೆ. ಆರ್‌ಬಿಐನ ಹೊಸ ನಿಯಮಗಳ (RBI New Rule) ಪ್ರಕಾರ, ನೀವು ದೀರ್ಘಕಾಲದವರೆಗೆ ಲಾಕರ್ ತೆರೆಯದಿದ್ದರೆ, ಬ್ಯಾಂಕುಗಳು ನಿಮ್ಮ ಲಾಕರ್ ಅನ್ನು ಮುರಿಯಬಹುದು.
ಬ್ಯಾಂಕ್ ಗಳಿಗೆ ಹೊಸ ಮಾರ್ಗಸೂಚಿಗಳು ಬಿಡುಗಡೆ
ಭಾರತೀಯ ರಿಸರ್ವ್ ಬ್ಯಾಂಕ್ ಸೇಫ್ ಡಿಪಾಸಿಟ್ ಲಾಕರ್ ಗೆ ಸಂಬಂಧಿಸಿದಂತೆ ತಿದ್ದುಪಡಿ ಮಾರ್ಗಸೂಚಿಗಳನ್ನು ಜಾರಿಮಾಡಿದೆ. ಹೊಸ ಮಾರ್ಗಸೂಚಿಗಳಲ್ಲಿ ಬ್ಯಾಂಕುಗಳಿಗೆ ಲಾಕರ್ ತೆರೆಯಲು ಅನುಮತಿ ನೀಡಲಾಗಿದೆ. ಒಂದು ವೇಳೆ ಲಾಕರ್ ದೀರ್ಘಕಾಲದವರೆಗೆ ತೆರೆದಿಲ್ಲ ಎಂದಾದರೆ ಈ ನಿಯಮ ಅನ್ವಯಿಸಲಿದೆ. ನಿಯಮಿತ ಬಾಡಿಗೆ ಪಾವತಿಯಾದರೂ ಕೂಡ ಈ ನಿಯಮ ಅನ್ವಯವಾಗಲಿದೆ ಎಂಬುದು ಇಲ್ಲಿ ಗಮನಾರ್ಹ.
ಮಾರ್ಗ ಸೂಚಿಗಳಲ್ಲಿ ತಿದ್ದುಪಡಿ ತಂದ RBI
ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದ ವಿವಿಧ ಬೆಳವಣಿಗೆಗಳು, ಗ್ರಾಹಕರ ದೂರುಗಳ ಸ್ವಭಾವ ಮತ್ತು ಬ್ಯಾಂಕ್‌ಗಳು ಮತ್ತು ಭಾರತೀಯ ಬ್ಯಾಂಕ್‌ಗಳ ಸಂಘದಿಂದ (Indian Banks’ Association) ಪಡೆದ ಪ್ರತಿಕ್ರಿಯೆಗಳನ್ನು ಗಮನದಲ್ಲಿಟ್ಟುಕೊಂಡು, ಆರ್‌ಬಿಐ (Reserve Bank Of India) ಇತ್ತೀಚೆಗೆ ಸುರಕ್ಷಿತ ಠೇವಣಿ ಲಾಕರ್‌ಗಳ ಕುರಿತು ತನ್ನ ಮಾರ್ಗಸೂಚಿಗಳನ್ನು ಪರಿಷ್ಕರಿಸಿ, ನಿಷ್ಕ್ರೀಯ ಬ್ಯಾಂಕ್ ಲಾಕರ್ ಗಳಿಗೆ ಸಂಬಂಧಿಸಿದಂತೆ ಬ್ಯಾಂಕುಗಳಿಗೆ (Banks) ಹೊಸ ನಿರ್ದೇಶನಗಳನ್ನು ನೀಡಿದೆ.
ಬ್ಯಾಂಕ್ ನಿಮ್ಮ ಲಾಕರ್ ಅನ್ನು ಮುರಿಯಬಹುದು
ಆರ್‌ಬಿಐನ ಪರಿಸ್ಕೃತ ಮಾರ್ಗಸೂಚಿಗಳಲ್ಲಿ ಬ್ಯಾಂಕ್ ಲಾಕರ್ (Safe Deposit Lockers) ಅನ್ನು ಮುರಿಯಲು ಮತ್ತು ಲಾಕರ್‌ನ ಸಂಗತಿಗಳನ್ನು ಅದರ ನಾಮಿನಿ/ಕಾನೂನು ಉತ್ತರಾಧಿಕಾರಿಗೆ ವರ್ಗಾಯಿಸಲು ಅಥವಾ ವಸ್ತುಗಳನ್ನು ಪಾರದರ್ಶಕವಾಗಿ ವಿಲೇವಾರಿ ಮಾಡಲು ಬ್ಯಾಂಕುಗಳು ಮುಕ್ತವಾಗಿರಲಿವೆ ಎಂದು ಹೇಳಲಾಗಿದೆ. ಲಾಕರ್-ಬಾಡಿಗೆದಾರನು 7 ವರ್ಷಗಳ ಕಾಲ ಸುಪ್ತವಾಗಿದ್ದರೂ ಮತ್ತು ನಿಯಮಿತವಾಗಿ ಬಾಡಿಗೆ ಪಾವತಿಸಿದರೂ ಅವರನ್ನು ಪತ್ತೆ ಮಾಡಲು ಸಾಧ್ಯವಿರುವುದಿಲ್ಲ. ಆದರೆ ಇದೆ ಸಂದರ್ಭದಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ರಕ್ಷಿಸಿ, ಕೇಂದ್ರ ಬ್ಯಾಂಕ್ ಯಾವುದೇ ಲಾಕರ್ (Bank Locker Facility) ಮುರಿಯುವ ಮೊದಲು ಬ್ಯಾಂಕುಗಳು ಅನುಸರಿಸಬೇಕಾದ ವಿವರವಾದ ಸೂಚನೆಗಳನ್ನು ಸಹ ನೀಡಿದೆ.
ಇದನ್ನೂ ಓದಿ-BIG NEWS : ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆ ಹ್ಯಾಕ್!
ಲಾಕರ್ ಸೇವೆ ಪಡೆದುಕೊಳ್ಳುವವರಿಗೆ ಬ್ಯಾಂಕ್ ಅಲರ್ಟ್ ಜಾರಿಗೊಳಿಸಲಿದೆ
ಆರ್‌ಬಿಐ (Reserve Bank Of India) ಮಾರ್ಗಸೂಚಿಗಳಲ್ಲಿ ಬ್ಯಾಂಕುಗಳು ಲಾಕರ್-ಬಾಡಿಗೆದಾರರಿಗೆ ಪತ್ರದ ಮೂಲಕ ಈ ಕುರಿತು ನೋಟಿಸ್ ನೀಡಲಿದ್ದು, ನೋಂದಾಯಿತ ಇಮೇಲ್ ಐಡಿ ಮತ್ತು ಮೊಬೈಲ್ ಫೋನ್ ಸಂಖ್ಯೆಗೆ ಇಮೇಲ್ ಮತ್ತು ಎಸ್‌ಎಂಎಸ್ ಅಲರ್ಟ್‌ಗಳನ್ನು ಸಹ ಕಳುಹಿಸಲಿವೆ. ಪತ್ರ ಡೆಲಿವರಿಯಾಗದೆ ಹಿಂದಿರುಗಿದರೆ ಅಥವಾ ಲಾಕರ್ ಅನ್ನು ಬಾಡಿಗೆ ಪಡೆದವರ ವಿಳಾಸ ದೊರೆಯದ ಸಂದರ್ಭದಲ್ಲಿ, ಬ್ಯಾಂಕುಗಳು ಲಾಕರ್ ಬಾಡಿಗೆದಾರರು ಅಥವಾ ಲಾಕರ್ನಲ್ಲಿರುವ ಸಾಮಗ್ರಿಗಳಲ್ಲಿ ಆಸಕ್ತಿ ಹೊಂದಿರುವ ಇತರೆ ಯಾವುದೇ ವ್ಯಕ್ತಿಗೆ ಉತ್ತರ ನೀಡಲು ಸಮಯಾವಕಾಸ ನೀಡಿ, ಎರಡು ಸಾರ್ವಜನಿಕ ಪತ್ರಿಕೆಗಳಲ್ಲಿ (ಒಂದು ಆಂಗ್ಲ ಮಾಧ್ಯಮ ಪತ್ರಿಕೆ ಹಾಗೂ ಮತ್ತೊಂದು ಸ್ಥಳೀಯ ಮಾಧ್ಯಮ ಪತ್ರಿಕೆ) ಈ ಕುರಿತು ನೋಟಿಸ್ ಜಾರಿ ಮಾಡಲಿವೆ.
ಇದನ್ನೂ ಓದಿ-ತಬ್ಲಿಘಿ ಜಮಾತ್ ಮೇಲೆ ಸೌದಿ ಅರೇಬಿಯಾ ನಿಷೇಧ, 'ಭಯೋತ್ಪಾದನೆಯ ಹೆಬ್ಬಾಗಿಲು' ಎಂದು ಬಣ್ಣಿಸಿದ ಸರ್ಕಾರ
ಲಾಕರ್ ತೆರೆಯುವ ಮಾರ್ಗಸೂಚಿಗಳು
ಬ್ಯಾಂಕ್ ಅಧಿಕಾರಿ ಮತ್ತು ಇಬ್ಬರು ಸ್ವತಂತ್ರ ಸಾಕ್ಷಿಗಳ ಸಮ್ಮುಖದಲ್ಲಿ ಲಾಕರ್ ತೆರೆಯಬೇಕು ಮತ್ತು ಇಡೀ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡ್ ಮಾಡಬೇಕು. ಲಾಕರ್ ತೆರೆದ ನಂತರ, ಗ್ರಾಹಕರು ಕ್ಲೈಮ್ ಮಾಡುವವರೆಗೂ ವಿಷಯಗಳನ್ನು ಅಗ್ನಿ ನಿರೋಧಕ ಸುರಕ್ಷಿತ ಒಳಗೆ ವಿವರವಾದ ದಾಸ್ತಾನಿನೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಇಡಬೇಕು ಎಂದು ಆರ್‌ಬಿಐ ಹೇಳಿದೆ.
ಇದನ್ನೂ ಓದಿ-ವಿಶ್ವಕ್ಕೆ ಎಂಟ್ರಿ ಕೊಟ್ಟ ಮತ್ತೊಂದು ಅಪಾಯ! ಎರಡು ರೂಪಾಂತರಿಗಳಲ್ಲಿ ವಿಭಜನೆಯಾದ Omicron Variant
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.