ನವದೆಹಲಿ: Bob E Auction For Property - ನೀವೂ ಸಹ ಕೈಗೆಟುಕುವ ಬೆಲೆಯ ಮನೆಯನ್ನು (Affordable Housing) ಹುಡುಕುತ್ತಿದ್ದರೆ, ಬ್ಯಾಂಕ್ ಆಫ್ ಬರೋಡಾ ನಿಮಗಾಗಿ ಒಂದು ಉತ್ತಮ ಯೋಜನೆಯನ್ನು ತಂದಿದೆ. ಈ ಹಿಂದೆ ಇದೇ ರೀತಿಯ ಆಫರ್ ಅನ್ನು PNB ಕೂಡ ಪ್ರಸ್ತುತಪಡಿಸಿದೆ ಎಂಬುದು ಇಲ್ಲಿ ಗಮನಾರ್ಹ. ವಾಸ್ತವವಾಗಿ, ಬ್ಯಾಂಕ್ ಆಫ್ ಬರೋಡಾ (BOB) ಕೆಲವು ಆಸ್ತಿಗಳನ್ನು ಹರಾಜು ಮಾಡಲಿದೆ. ಗೃಹ ಸಾಲ ಪಡೆದು, ಸಾಲ ತೀರಿಸದೆ ಇರುವ ಗೃಹ ಮಾಲೀಕರ ವಿರುದ್ಧ ಬ್ಯಾಂಕ್ ಈ ರೀತಿಯ ಕ್ರಮ ಕೈಗೊಳ್ಳುವುದು ಒಂದು ಸಾಮಾನ್ಯ ಪ್ರಕ್ರಿಯೆಯಾಗಿದೆ. 


COMMERCIAL BREAK
SCROLL TO CONTINUE READING

ಜನವರಿ 29ರಿಂದ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದೆ (Bob E Auction Residential Property Auction)
ಬ್ಯಾಂಕ್ ಆಫ್ ಬಡೋದಾ ಈ ಹರಾಜು ಪ್ರಕ್ರಿಯೆ ಜನವರಿ 29ರಿಂದ ಆರಂಭಗೊಳ್ಳಲಿದೆ. ಈ ಆಸ್ತಿಗಳ ಕುರಿತು IBAPI (Indian Banks Auctions Mortgaged Properties Information) ವತಿಯಿಂದ ಮಾಹಿತಿ ನೀಡಲಾಗಿದೆ. ಬ್ಯಾಂಕ್ ವತಿಯಿಂದ ಹರಾಜು ಮಾಡಲಾಗುತ್ತಿರುವ ಆಸ್ತಿಗಳಲ್ಲಿ ರಹವಾಸಿ ಕಟ್ಟಡಗಳು, ವಾಣಿಜ್ಯ ಮಳಿಗೆಗಳು, ಔದ್ಯೋಗಿಕ ಹಾಗೂ ಕೃಷಿಗೆ ಸಂಬಂಧಿಸಿದ ಎಲ್ಲಾ ಆಸ್ತಿಗಳು ಶಾಮೀಲಾಗಿವೆ.


ಯಾವಾಗ ಹರಾಜು ಪ್ರಕ್ರಿಯೆ ನಡೆಯಲಿದೆ?
ಗುರುವಾರ BOB ವತಿಯಿಂದ ಅದರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಜನವರಿ 29 ರಿಂದ ಇ-ಆಕ್ಷನ್ ಪ್ರಕ್ರಿಯೆ ನಡೆಸಲಾಗುವುದು ಎಂದು ಅದರಲ್ಲಿ ಮಾಹಿತಿ ನೀಡಲಾಗಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ನೀವೂ ಕೂಡ ಭಾಗವಹಿಸಿ ನಿಮಗೆ ಬೇಕಾದ ಮತ್ತು ನೆಚ್ಚಿನ ಆಸ್ತಿಯನ್ನು ಖರೀದಿಸಬಹುದು.


ಇದನ್ನೂ ಓದಿ-ICICI Bank ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶಾಕ್, ಈಗ ಪಾವತಿ ತಡವಾದ್ರೆ ಬೀಳುತ್ತೆ ಭಾರೀ ದಂಡ


ಇ-ಆಕ್ಷನ್ ನಲ್ಲಿ ಹೇಗೆ ಭಾಗವಹಿಸಬೇಕು?
ಒಂದು ವೇಳೆ ನೀವೂ ಕೂಡ ಬ್ಯಾಂಕ್ ಆಫ್ ಬಡೋದಾದ ಈ ಮೆಗಾ ಇ-ಆಕ್ಷನ್ ಪ್ರಕ್ರಿಯಯಲ್ಲಿ ಭಾಗವಹಿಸಲು ಬಯಸುತ್ತಿದ್ದರೆ, ಇ-ಮಾರಾಟ ಪೋರ್ಟಲ್ ಆಗಿರುವ https://ibapi.in ಮೇಲೆ ಹೆಸರು ಹೊಂದಣಿ ಮಾಡಬಹುದು. ಇದಕ್ಕಾಗಿ ನೀವು ಹೋಂ ಪೇಜ್ ನಲ್ಲಿರುವ ಬಿಡರ್ಸ್ ರಿಜಿಸ್ಟ್ರೇಷನ್ ಆಯ್ಕೆಯ ಮೇಲೆ ಕ್ಲಿಕ್ಕಿಸಬೇಕು. ಅಲ್ಲಿ ನೀವು ಮೊಬೈಲ್ ನಂಬರ್ ಹಾಗೂ ಇ-ಮೇಲ್ ಮೂಲಕ ನೋಂದಣಿ ಮಾಡಬಹುದು.


ಇದನ್ನೂ ಓದಿ-LIC ಈ ಯೋಜನೆಗೆ ಬರೀ 1 ಪ್ರೀಮಿಯಂ ಪಾವತಿಸಿ ನಂತರ ಪ್ರತಿ ತಿಂಗಳು ಪಡೆಯಿರಿ ₹12,000!


KYC ಅಗತ್ಯ
ಬ್ಯಾಂಕ್ ಆಫ್ ಬದೋದ ಹಾಗೂ ಇತರ ಬ್ಯಾಂಕ್ ಗಳು ಕಾಲ-ಕಾಲಕ್ಕೆ ಇಂತಹ ಆಸ್ತಿಗಳ ಹರಾಜು ಪ್ರಕ್ರಿಯೆ ನಡೆಸುತ್ತವೆ. ಯಾವ ಆಸ್ತಿಗಳ ಮೇಲೆ ಸಾಲ ಬಾಕಿ ಉಳಿದಿದೆಯೋ, ಅಂತಹ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಬ್ಯಾಂಕ್ ಗಳು ಹರಾಜು ಪ್ರಕ್ರಿಯೆ ನಡೆಸುತ್ತವೆ. ಇಲ್ಲಿ ಪಾಲ್ಗೊಳ್ಳಲು ಬಿಡ್ ಕೂಗುವವರು KYC ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. KYC ದಾಖಲೆಗಳು ಸರ್ವಿಸ್ ಪ್ರೊವೈಡರ್ ಗಳಿಂದ ಪರಿಷ್ಕೃತಗೊಳಿಸಲಾಗುವುದು. ಇದರಲ್ಲಿ ಎರಡು ದಿನಗಳ ಕಾಲಾವಕಾಶಬೇಕಾಗುತ್ತದೆ.


ಇದನ್ನೂ ಓದಿ-Gold price today : ಚಿನ್ನಾಭರಣ ಪ್ರಿಯರ ಗಮನಕ್ಕೆ : ಇಂದು ಮತ್ತೆ ಚಿನ್ನ - ಬೆಳ್ಳಿ ಬೆಲೆ ಏರಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.