ನವದೆಹಲಿ  :  Bank of Baroda Car Loan Interest Rate : ಕಾರು ಖರೀದಿಸಲು ಯೋಜಿಸುತ್ತಿದ್ದವರಿಗೆ ಇಲ್ಲಿದೆ ಸಿಹಿ ಸುದ್ದಿ. ಕಾರುಗಳ ಬೆಲೆ ಏರಿಕೆಯ ನಡುವೆಯೇ  ಬ್ಯಾಂಕ್ ಆಫ್ ಬರೋಡಾ  ಕಾರು ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಿದೆ.  ಬ್ಯಾಂಕ್ ಆಫ್ ಬರೋಡಾ ಕಾರು ಸಾಲದ ಮೇಲಿನ ಬಡ್ಡಿ ದರವನ್ನು ಶೇಕಡಾ 0.25 ರಷ್ಟು ಕಡಿತಗೊಳಿಸಿದೆ.


COMMERCIAL BREAK
SCROLL TO CONTINUE READING

ಕಾರು ಲೋನ್ ಮೇಲಿನ ಬಡ್ಡಿದರ ಇಳಿಸಿದ ಬ್ಯಾಂಕ್ : 
ಬ್ಯಾಂಕ್ ಕಾರು ಲೋನ್ ಮೇಲಿನ  ಬಡ್ಡಿ ದರವನ್ನು ಶೇ 7ಕ್ಕೆ ಇಳಿಸಿದೆ. ಬೇರೆ ಬೇರೆ  ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿಯನ್ನು ಹೆಚ್ಚಿಸುತ್ತಿದ್ದರೆ, ಬ್ಯಾಂಕ್ ಆಫ್ ಬರೋಡಾ ಬಡ್ಡಿ ಕಡಿತಗೊಳಿಸಿ ಬಿಗ್ ರಿಲೀಫ್ ನೀಡಿದೆ. ಪ್ರಸ್ತುತ, ಬ್ಯಾಂಕ್ ಕಾರ್ ಲೋನ್‌ಗಳ ಮೇಲೆ ಶೇಕಡಾ 7.25 ರಷ್ಟು ವಾರ್ಷಿಕ ಬಡ್ಡಿಯನ್ನು ವಿಧಿಸಲಾಗುತ್ತಿತ್ತು. ಬಡ್ಡಿ ದರ ಇಳಿಕೆ ಜತೆಗೆ ಸಾಲದ ಪ್ರೋಸೆಸ್ಸಿಂಗ್ ಶುಲ್ಕವನ್ನು ಕೂಡಾ ಕಡಿತಗೊಳಿಸಲಾಗಿದೆ.


ಇದನ್ನೂ ಓದಿ : Aadhar Card: ಹುಟ್ಟಿದ ಮಗುವಿಗೂ ಪಡೆಯಬಹುದು ಆಧಾರ್ ಕಾರ್ಡ್! ಹೇಗೆ?


 ಪ್ರೋಸೆಸ್ಸಿಂಗ್ ಶುಲ್ಕದಲ್ಲಿ ಭಾರೀ ರಿಯಾಯಿತಿ :
ಈ ಆಫರ್ ಅಡಿಯಲ್ಲಿ, ಬ್ಯಾಂಕ್ ಗ್ರಾಹಕರಿಂದ 1,500 ರೂ + ಜಿಎಸ್‌ಟಿಯನ್ನು ಪ್ರೋಸೆಸ್ಸಿಂಗ್ ಶುಲ್ಕವಾಗಿ ವಿಧಿಸುತ್ತದೆ. ಈ ಕೊಡುಗೆಯು ಜೂನ್ 30, 2022 ರವರೆಗೆ ಮಾನ್ಯವಾಗಿದ್ದು, ಕಾರು ಖರೀದಿ ವೇಳೆ ಮಾತ್ರ  ಈ ಕೊಡುಗೆ ಲಭ್ಯವಾಗುತ್ತದೆ.  ಬಡ್ಡಿ ದರವನ್ನು ಗ್ರಾಹಕರ 'ಕ್ರೆಡಿಟ್ ಪ್ರೊಫೈಲ್'ಗೆ ಲಿಂಕ್ ಮಾಡಲಾಗುತ್ತದೆ.


ವಾಹನ ಸಾಲದ ಮೇಲಿನ ಬಡ್ಡಿ ದರ ಮತ್ತು ಪ್ರೋಸೆಸ್ಸಿಂಗ್ ಶುಲ್ಕವನ್ನು ಕಡಿತಗೊಳಿಸಿರುವುದರಿಂದ ಗ್ರಾಹಕರು ತಮ್ಮ ಆಯ್ಕೆಯ ವಾಹನವನ್ನು ಖರೀದಿಸಲು ಸಾಧ್ಯವಾಗುತ್ತದೆ ಎಂದು ಬ್ಯಾಂಕ್ ನ ಜನರಲ್ ಮ್ಯಾನೇಜರ್ ಎಚ್.ಟಿ.ಸೋಲಂಕಿ ತಿಳಿಸಿದ್ದಾರೆ. ಆದರೆ, ಸೆಕೆಂಡ್ ಹ್ಯಾಂಡ್ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಸಾಲದ ಮೇಲಿನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎನ್ನುವುದನ್ನು ಕೂಡಾ ಅವರು ಸ್ಪಷ್ಟಪಡಿಸಿದ್ದಾರೆ.  ಕಳೆದ ತಿಂಗಳು, ಬ್ಯಾಂಕ್ ಆಫ್ ಬರೋಡಾ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು 6.75 ರಿಂದ 6.50 ಕ್ಕೆ ಇಳಿಸಿತ್ತು. 


ಇದನ್ನೂ ಓದಿ : Knowledge News: ರೂಪಾಯಿ ನೋಟಿನ ಈ ವೈಶಿಷ್ಟ್ಯದ ನಿಮಗೆ ಗೊತ್ತಾ? ಇಲ್ಲಿದೆ ಟಾಪ್‌ ಸೀಕ್ರೆಟ್‌...


ಎಷ್ಟು ಪ್ರಯೋಜನವಾಗಲಿದೆ ?
ನೀವು 7 ವರ್ಷಗಳವರೆಗೆ 10 ಲಕ್ಷ ರೂಪಾಯಿಗಳ ಕಾರ್ ಲೋನ್ ತೆಗೆದುಕೊಳ್ಳಲು ಯೋಜಿಸಿದರೆ,  ಶೇಕಡಾ 7.25 ರಂತೆ ಪ್ರತಿ ತಿಂಗಳು 15,215 ರೂಪಾಯಿಗಳ EMI ಅನ್ನು ಪಾವತಿಸಬೇಕಾಗುತ್ತದೆ. ಈಗ ಅದೇ ಸಾಲವನ್ನು ವರ್ಷಕ್ಕೆ 7% ಬಡ್ಡಿಯಂತೆ  ಪಡೆದರೆ, ಪ್ರತಿ ತಿಂಗಳು 15,093 ರೂಪಾಯಿಗಳ EMI ಅನ್ನು ಪಾವತಿಸಬೇಕಾಗುತ್ತದೆ. ಅಂದರೆ, ಪ್ರತಿ ತಿಂಗಳು 122 ರೂಪಾಯಿಗಳನ್ನು ಕಡಿಮೆ ಪಾವತಿಸಬೇಕಾಗುತ್ತದೆ. ವರ್ಷಕ್ಕೆ ಲೆಕ್ಕ ಹಾಕಿದರೆ 1464  ರೂ. ಕಡಿಮೆ ಪಾವತಿಸಿದಂತೆ ಆಗುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.