BOI Home Loan Process: ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿದೆ. ಬ್ಯಾಂಕ್ ಆಫ್ ಇಂಡಿಯಾದಿಂದ ಸ್ಟಾರ್ ಹೋಮ್ ಲೋನ್ ಅನ್ನು ವರ್ಷಕ್ಕೆ 8.30 ಪ್ರತಿಶತ ದರದಲ್ಲಿ ಪಡೆಯಬಹುದು. 


COMMERCIAL BREAK
SCROLL TO CONTINUE READING

ಗ್ರಾಹಕರು ಇತರ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳಲ್ಲಿ ಚಾಲನೆಯಲ್ಲಿರುವ ತಮ್ಮ ಗೃಹ ಸಾಲಗಳನ್ನು ಬ್ಯಾಂಕ್ ಆಫ್ ಇಂಡಿಯಾಗೆ ವರ್ಗಾಯಿಸಬಹುದು. ಗೃಹ ಸಾಲಕ್ಕೆ ಸಲ್ಲಿಸುವವರು ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯುತ್ತಾರೆ. ಅಲ್ಲದೆ, ಕಡಿಮೆ ಬಡ್ಡಿದರಗಳು, ಸುಲಭ  ಲಿಕ್ವಿಡಿಟಿ ಮತ್ತು ತೆರಿಗೆ ವಿನಾಯಿತಿಯಂತಹ ಪ್ರಯೋಜನಗಳ ಲಾಭವನ್ನು ಕೂಡಾ ಪಡೆಯಬಹುದು ಎಂದು ಬ್ಯಾಂಕ್ ಹೇಳಿದೆ.  ಮನೆ ನಿರ್ಮಿಸಲು, ಪ್ಲಾಟ್ ಖರೀದಿಸಲು, ಹೊಸ ಅಥವಾ ಹಳೆಯ ಫ್ಲಾಟ್ ಖರೀದಿಸಲು, ನವೀಕರಣ ಅಥವಾ ದುರಸ್ತಿಗಾಗಿ ಈ  ಆಫರ್ ನ ಲಾಭವನ್ನು ಪಡೆಯಬಹುದಾಗಿದೆ. ಬ್ಯಾಂಕ್ ಆಫ್ ಇಂಡಿಯಾ ಸ್ಟಾರ್ ಹೋಮ್ ಲೋನ್ ಸಾಲದ ಮರುಪಾವತಿಗಾಗಿ 30 ವರ್ಷಗಳ ಅವಧಿಯನ್ನು ನೀಡುತ್ತದೆ. 


ಇದನ್ನೂ ಓದಿ : LIC ಈ ಯೋಜನೆಯಲ್ಲಿ ಸಿಗಲಿದೆ 1 ಕೋಟಿ ನೇರ ಲಾಭ : ಇಲ್ಲಿದೆ  ವಿವರ


 ಸಿಗಲಿದೆ ಈ ಎಲ್ಲಾ ಪ್ರಯೋಜನಗಳು : 
ವಿವಿಧ ಅವಧಿಗಳಲ್ಲಿ EMI ಪಾವತಿಸಲು ಹಲವು ಆಯ್ಕೆಗಳಿವೆ. ಇದರಿಂದ ಗ್ರಾಹಕರು ಹೆಚ್ಚಿನ ಒತ್ತಡಕ್ಕೆ ಒಳಗಾಗುವುದಿಲ್ಲ. ಇದಕ್ಕಾಗಿ ಯಾವುದೇ ಪೂರ್ವಪಾವತಿ ಅಥವಾ ಭಾಗಶಃ ಪಾವತಿ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಮಾತ್ರವಲ್ಲ, ಪಾವತಿಸಿದ ಬಡ್ಡಿ ಮತ್ತು ಕಂತುಗಳ ಮೇಲೆ ತೆರಿಗೆ ವಿನಾಯಿತಿಯನ್ನು ಸಹ ನೀಡಲಾಗುತ್ತದೆ. ಗ್ರಾಹಕರ ಮೇಲೆ ಯಾವುದೇ ಹೊರೆ ಇರುವುದಿಲ್ಲ.  ಪ್ರತಿ ದಿನ ಬಡ್ಡಿಯನ್ನು ಲೆಕ್ಕ ಹಾಕಲಾಗುವುದರಿಂದ ಕಡಿಮೆ ಬಡ್ಡಿದರವನ್ನು ಪಾವತಿಸಿದಂತಾಗುತ್ತದೆ. ಅಷ್ಟೇ ಅಲ್ಲ, ಬ್ಯಾಂಕ್ ಆಫ್ ಇಂಡಿಯಾ ಪೀಠೋಪಕರಣ ಸಾಲ ಮತ್ತು ಟಾಪ್ ಅಪ್ ಸೌಲಭ್ಯವನ್ನು ಸಹ ನೀಡುತ್ತದೆ. 


ಸಾಲದ ದರ ಹೆಚ್ಚಿಸಿದ ಬ್ಯಾಂಕ್ ಆಫ್ ಮಹಾರಾಷ್ಟ್ರ  :
ಮತ್ತೊಂದೆಡೆ, ಬ್ಯಾಂಕ್ ಆಫ್ ಮಹಾರಾಷ್ಟ್ರ ಆಯ್ದ ಅವಧಿಯ ಸಾಲಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಒಂದು ವರ್ಷದ ಅವಧಿಯ ಎಂಸಿಎಲ್‌ಆರ್ ಅನ್ನು ಶೇಕಡಾ 7.80 ರಿಂದ ಶೇಕಡಾ 7.90 ಕ್ಕೆ ಹೆಚ್ಚಿಸಲಾಗಿದೆ ಎಂದು ಬ್ಯಾಂಕ್ ಬುಧವಾರ ತಿಳಿಸಿದೆ. ವಾಹನ, ವೈಯಕ್ತಿಕ ಮತ್ತು ಗೃಹ ಸಾಲಗಳ ಮೇಲೆ ಅದೇ ಬಡ್ಡಿಯನ್ನು ವಿಧಿಸಲಾಗುತ್ತದೆ. ಬ್ಯಾಂಕ್ ಪ್ರಕಾರ, ಪರಿಷ್ಕೃತ MCLR ನವೆಂಬರ್ 7, 2022 ರಿಂದ ಜಾರಿಗೆ ಬಂದಿದೆ.  ಒಂದು ತಿಂಗಳ ಅವಧಿಯ MCLR ಅನ್ನು 0.05 ಪಾಯಿಂಟ್‌ಗಳಿಂದ 7.50 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ. ಇದರ ಹೊರತಾಗಿ, ಒಂದು ದಿನ, ಮೂರು ಮತ್ತು ಆರು ತಿಂಗಳ ಅವಧಿಯ ಸಾಲಗಳ ಬಡ್ಡಿ ದರಗಳು ಬದಲಾಗಿಲ್ಲ. 


ಇದನ್ನೂ ಓದಿ : Bike Mileage: ಈ ವೇಗದಲ್ಲಿ ಬೈಕ್ ಓಡಿಸಿದರೆ ಮೈಲೇಜ್ ಸಿಗುವ ಜೊತೆಗೆ ಎಂಜಿನ್ ಕೂಡ ಫಿಟ್ ಆಗಿರುತ್ತೆ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.