Income Tax Department Penalty On Govt Bank:  ಆದಾಯ ತೆರಿಗೆ ಇಲಾಖೆ ಸಾರ್ವಜನಿಕ ವಲಯದ ಸಾಲದಾತ, ಬ್ಯಾಂಕ್ ಆಫ್ ಇಂಡಿಯಾ (Bank Of India) ವಿರುದ್ಧ  ಮಹತ್ವದ ಕ್ರಮ ಕೈಗೊಂಡಿದ್ದು 564.44 ಕೋಟಿ ರೂ. ದಂಡ ವಿಧಿಸಿದೆ.  ವಿವಿಧ ನಿಯಮಗಳ ಉಲ್ಲಂಘನೆ ಹಿನ್ನಲೆಯಲ್ಲಿ ಬ್ಯಾಂಕ್ ಮೇಲೆ ಕೋಟ್ಯಾಂತರ ರೂ. ದಂಡ ವಿಧಿಸಲಾಗಿದೆ. 


COMMERCIAL BREAK
SCROLL TO CONTINUE READING

ಆದಾಯ ತೆರಿಗೆ ಇಲಾಖೆ (Income Tax Department) ಯ ಈ ಕ್ರಮವನ್ನು ವಿರೋಧಿಸಿರುವ ಸಾರ್ವಜನಿಕ ವಲಯದ ಬ್ಯಾಂಕ್ ಗುರುವಾರ (ಮಾರ್ಚ್ 28)  ಈ ಆದೇಶದ ವಿರುದ್ಧ ಆದಾಯ ತೆರಿಗೆ ಆಯುಕ್ತ, ರಾಷ್ಟ್ರೀಯ ಫೇಸ್‌ಲೆಸ್ ಅಪೀಲ್ ಸೆಂಟರ್ (ಎನ್‌ಎಫ್‌ಎಸಿ) ಮುಂದೆ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಿದೆ. 


ಇದನ್ನೂ ಓದಿ- SBI ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಈ ಡೆಬಿಟ್ ಕಾರ್ಡ್‌ಗಳ ಮೇಲಿನ ಶುಲ್ಕ ಹೆಚ್ಚಳ


ಸರ್ಕಾರಿ ಬ್ಯಾಂಕ್‌ಗೆ ಭಾರಿ ದಂಡ ವಿಧಿಸಿದ ಆದಾಯ ತೆರಿಗೆ ಇಲಾಖೆ ಕ್ರಮಕ್ಕೆ ಕಾರಣ?
ಬ್ಯಾಂಕ್ ವಿರುದ್ಧ ಹಲವು ನಿಯಮಗಳ ಉಲ್ಲಂಘನೆ ಆರೋಪದಡಿ ಆದಾಯ ತೆರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ. ಬ್ಯಾಂಕ್ ಸ್ಟಾಕ್ ಎಕ್ಸ್‌ಚೇಂಜ್‌ಗೆ ನೀಡಿದ ಸಂವಹನದಲ್ಲಿ, "2018-19 ರ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 270A ಅಡಿಯಲ್ಲಿ ಆದಾಯ ತೆರಿಗೆ ಇಲಾಖೆ, ಮೌಲ್ಯಮಾಪನ ಘಟಕದಿಂದ 564.44 ರೂಪಾಯಿ ದಂಡವನ್ನು ವಿಧಿಸಿದ" ಆದೇಶವನ್ನು ಸ್ವೀಕರಿಸಿದೆ.


ಈ ಕುರಿತಂತೆ ಬ್ಯಾಂಕ್ ಹೇಳಿದ್ದೇನು? 
ಆದಾಯ ತೆರಿಗೆ ಇಲಾಖೆ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಬ್ಯಾಂಕ್, ಈ ವಿಷಯದಲ್ಲಿ ಅಗತ್ಯ ಕಾನೂನು ಆಧಾರಗಳನ್ನು ಹೊಂದಿದ್ದು, ನಿಗದಿತ ಅವಧಿಯೊಳಗೆ ದಂಡವನ್ನು ಕಡಿಮೆ ಮಾಡಲು ರಾಷ್ಟ್ರೀಯ ಫೇಸ್‌ಲೆಸ್ ಮೇಲ್ಮನವಿ ಕೇಂದ್ರವನ್ನು ಸಂಪರ್ಕಿಸಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದೆ. 


ಇದನ್ನೂ ಓದಿ- ಕೆಲಸಕ್ಕೆ ರಾಜೀನಾಮೆ ನೀಡುವಾಗ ನೋಟಿಸ್ ಪೀರಿಯೇಡ್ ಪೂರೈಸುವುದು ನಿಜಕ್ಕೂ ಅಗತ್ಯವೇ? ಇಲ್ಲಿದೆ ನೋಡಿ ಸರಿಯಾದ ಉತ್ತರ !


ಈ ವಿಷಯದಲ್ಲಿ ತನ್ನ ನಿಲುವನ್ನು ಸಮರ್ಥಿಸಲು ಸಾಕಷ್ಟು ವಾಸ್ತವಿಕ ಮತ್ತು ಕಾನೂನು ಆಧಾರವನ್ನು ಹೊಂದಿರುವುದಾಗಿ ತಿಳಿಸಿರುವ ಬ್ಯಾಂಕ್, ಇದರಿಂದ ಸಂಪೂರ್ಣ ದಂಡದ ಬೇಡಿಕೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ, ಈ ಕ್ರಮವು ಬ್ಯಾಂಕಿನ ಹಣಕಾಸು, ಕಾರ್ಯಾಚರಣೆ ಅಥವಾ ಇತರ ಚಟುವಟಿಕೆಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.