Bank Rules For Cash Deposit and Withdrawal : ಪ್ರಧಾನಿ ಮೋದಿಯವರ ಜನ್ ಧನ್ ಖಾತೆ ಯೋಜನೆಯಡಿ, ದೇಶದ ಪ್ರತಿಯೊಬ್ಬ ನಾಗರಿಕನ ಬ್ಯಾಂಕ್ ಖಾತೆಯನ್ನು ತೆರೆಯುವ ಪ್ರಯತ್ನವನ್ನು ಮಾಡಿದರು ಮತ್ತು ಅಕೌಂಟ್ ತೆರೆದರು. ಈಗ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮತ್ತು ಜಮೆ ಮಾಡುವ ನಿಯಮಗಳು ಬದಲಾಗಲಿವೆ. ಹೀಗಾಗಿ ಎಲ್ಲಾ ಖಾತೆದಾರರು ಹೊಸ ನಿಯಮಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ನೀವು ಯಾವುದೇ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರೆ, ಈ ಸುದ್ದಿಯನ್ನು ಖಂಡಿತವಾಗಿ ಓದಿ.


COMMERCIAL BREAK
SCROLL TO CONTINUE READING

ಮೇ 26 ರಿಂದ ಹೊಸ ನಿಯಮಗಳು ಜಾರಿಗೆ


ಹೊಸ ನಿಯಮಗಳ ಜಾರಿ ನಂತರ, ನೀವು ಬ್ಯಾಂಕ್‌ನಲ್ಲಿ ಹಣವನ್ನು ಠೇವಣಿ ಮಾಡಲು ಅಥವಾ ಹಿಂಪಡೆಯಲು ಹೋದರೆ ನೀವು ಸ್ವಲ್ಪ ತೊಂದರೆ ಎದುರಿಸಬೇಕಾಗಬಹುದು. ಕಪ್ಪುಹಣವನ್ನು ತಡೆಯಲು ಸರ್ಕಾರ ಹೊಸ ನಿಯಮಗಳನ್ನು ರೂಪಿಸಿದೆ. ಹೊಸ ನಿಯಮಗಳು ಮೇ 26 ರಿಂದ ಜಾರಿಗೆ ಬರಲಿವೆ. ಈಗ ಆರ್ಥಿಕ ವರ್ಷದಲ್ಲಿ 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಲು ಅಥವಾ ಹಿಂಪಡೆಯಲು ಆಧಾರ್ ಅಥವಾ ಪ್ಯಾನ್ ಅನ್ನು ಕಡ್ಡಾಯಗೊಳಿಸಲಾಗಿದೆ.


ಇದನ್ನೂ ಓದಿ : LED Bulb: ಕರೆಂಟ್ ಇಲ್ಲದ ವೇಳೆಯೂ ಮನೆಯನ್ನು ಬೆಳಗುತ್ತದೆ ಈ ಬಲ್ಬ್, ಬೆಲೆ 200 ರೂ. ಗಿಂತ ಕಮ್ಮಿ


ಉಳಿತಾಯ ಖಾತೆ ತೆರೆಯಲು ನಿಯಮಗಳು ಅನ್ವಯ


ಇದಲ್ಲದೆ, ಉಳಿತಾಯ ಖಾತೆ ತೆರೆಯಲು ಆಧಾರ್ ಮತ್ತು ಪ್ಯಾನ್ ಅನ್ನು ಸಹ ಕಡ್ಡಾಯಗೊಳಿಸಲಾಗಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಹೊರಡಿಸಿದ ಅಧಿಸೂಚನೆಯಲ್ಲಿ, ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳೊಂದಿಗೆ ದೊಡ್ಡ ಮೊತ್ತದ ವಹಿವಾಟುಗಳಿಗೆ ಪ್ಯಾನ್ ಮಾಹಿತಿ ಅಥವಾ ಆಧಾರ್‌ನ ಬಯೋಮೆಟ್ರಿಕ್ ಪರಿಶೀಲನೆ ಅಗತ್ಯ ಎಂದು ಹೇಳಲಾಗಿದೆ. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಲು ಇದೇ ನಿಯಮಗಳು ಅನ್ವಯವಾಗುತ್ತವೆ.


ವಹಿವಾಟುಗಳಲ್ಲಿ ಹೆಚ್ಚು ಪಾರದರ್ಶಕತೆ


ಆದಾಯ ತೆರಿಗೆ (15 ನೇ ತಿದ್ದುಪಡಿ) ನಿಯಮಗಳು, 2022 ರ ಅಡಿಯಲ್ಲಿ CBDT ಸಿದ್ಧಪಡಿಸಿದ ಹೊಸ ನಿಯಮವನ್ನು 10 ಮೇ 2022 ರಂದು ಹೊರಡಿಸಲಾಗಿದೆ. ಮೇ 26 ರಿಂದ ಗ್ರಾಹಕರಿಗೆ ಈ ನಿಯಮಗಳು ಜಾರಿಯಾಗಲಿವೆ. ಈ ನಿಯಮ ಜಾರಿಯಾದ ನಂತರ ವಹಿವಾಟಿನಲ್ಲಿ ಪಾರದರ್ಶಕತೆ ಹೆಚ್ಚಲಿದ್ದು, ಕಪ್ಪುಹಣಕ್ಕೆ ಕಡಿವಾಣ ಬೀಳಲಿದೆ ಎನ್ನುತ್ತಾರೆ ತಜ್ಞರು.


ಇದನ್ನೂ ಓದಿ : Aadhaar-Voter ID card link : ಆಧಾರ್-ವೋಟರ್ ಐಡಿ ಕಾರ್ಡ್ ಲಿಂಕ್ : ಸರ್ಕಾರದಿಂದ ಶೀಘ್ರದಲ್ಲೇ ನಿಯಮ ಜಾರಿ!


ನಿಯಮವೇನು?


ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ಆರ್ಥಿಕ ವರ್ಷದಲ್ಲಿ ಖಾತೆಯಿಂದ 20 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿದರೆ, ನಂತರ ಪ್ಯಾನ್ ಕಾರ್ಡ್ ಮಾಹಿತಿಯನ್ನು ನೀಡಬೇಕಾಗುತ್ತದೆ. ಅವರು ಪ್ಯಾನ್ ಹೊಂದಿಲ್ಲದಿದ್ದರೆ, ಅವರು ಆಧಾರ್‌ನ ಬಯೋಮೆಟ್ರಿಕ್ ಗುರುತನ್ನು ನೀಡಬಹುದು. ಇದರಿಂದ ಅಧಿಕಾರಿಗಳಿಗೆ ವಹಿವಾಟಿನ ಮೇಲೆ ನಿಗಾ ಇಡಲು ಅನುಕೂಲವಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.