Bank Holidays December 2022: ನೀವು ಸಹ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವನ್ನು ಹೊಂದಿದ್ದರೆ ಅಥವಾ ನೀವು ಬ್ಯಾಂಕ್‌ಗೆ ಹೋಗಲು ಯೋಜಿಸುತ್ತಿದ್ದರೆ, ಅದಕ್ಕೂ ಮೊದಲು ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್ ಎಷ್ಟು ದಿನಗಳವರೆಗೆ ಬಂದ್ ಇರಲಿವೆ ಎಂಬುದನ್ನು ನೀವು ತಿಳಿದಿರಲೇಬೇಕು. ಡಿಸೆಂಬರ್‌ ತಿಂಗಳ ಒಟ್ಟು 31 ದಿನಗಳಲ್ಲಿ 13 ದಿನಗಳ ಕಾಲ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಬ್ಯಾಂಕ್ ರಜೆಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ಯಾವ ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ಕೆಲಸ ಇರುವುದಿಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಪಟ್ಟಿ ಬಿಡುಗಡೆ ಮಾಡಿದ RBI
ಪ್ರತಿ ತಿಂಗಳು ಭಾರತೀಯ ರಿಸರ್ವ ಬ್ಯಾಂಕ್ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಗ್ರಾಹಕರು ಮತ್ತು ಉದ್ಯೋಗಿಗಳ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಬ್ಯಾಂಕ್ ಕೆಲಸಕ್ಕೆ ತೊಂದರೆಯಾಗದಿರಲಿ ಎಂಬ ಉದ್ದೇಶದಿಂದ   ಆರ್‌ಬಿಐ ರಜಾದಿನಗಳ ಪಟ್ಟಿಯನ್ನು ಮುಂಚಿತವಾಗಿ ಬಿಡುಗಡೆ ಮಾಡುತ್ತದೆ.


ಡಿಸೆಂಬರ್ ಬ್ಯಾಂಕ್ ರಜಾದಿನಗಳ ಪಟ್ಟಿ 2022
>> ಡಿಸೆಂಬರ್ 3 - ಸೇಂಟ್ ಕ್ಸೇವಿಯರ್ ಹಬ್ಬ - ಗೋವಾದಲ್ಲಿ ಬ್ಯಾಂಕ್ ಬಂದ್ ಇರಲಿವೆ
>> ಡಿಸೆಂಬರ್ 4 - ಸಂಪೂರ್ಣ ದೇಶಾದ್ಯಂತ ಬ್ಯಾಂಕುಗಳು ಬಂದ್ ಇರಲಿವೆ
>> ಡಿಸೆಂಬರ್ 10 - ಎರಡನೇ ಶನಿವಾರ - ದೇಶದಾದ್ಯಂತ ಬ್ಯಾಂಕುಗಳು ಬಂದ್ ಇರಲಿವೆ
>> ಡಿಸೆಂಬರ್ 11 - ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಬಂದ್ ಇರಲಿವೆ (ಸಾರ್ವತ್ರಿಕ ರಜಾ ದಿನ)
>> ಡಿಸೆಂಬರ್ 12- ಪ-ತಗನ್ ನೆಂಗ್ಮಿಂಜ ಸಂಗಮ  ಕಾರಣ ಮೇಘಾಲಯದಲ್ಲಿ ಬ್ಯಾಂಕ್ ಗಳು ಬಂದ್ ಇರಲಿವೆ.
>> ಡಿಸೆಂಬರ್ 18- ಭಾನುವಾರದ ರಜಾದಿನ
>> ಡಿಸೆಂಬರ್ 19 - ಗೋವಾ ವಿಮೋಚನಾ ದಿನ - ಗೋವಾದಲ್ಲಿ ಬ್ಯಾಂಕ್ ಗಳು ಬಂದ್ ಇರಲಿವೆ.
>> ಡಿಸೆಂಬರ್ 24 - ಕ್ರಿಸ್ಮಸ್ ಮತ್ತು ನಾಲ್ಕನೇ ಶನಿವಾರ - ದೇಶದಾದ್ಯಂತ ಬ್ಯಾಂಕ್ ಗಳು ಬಂದ್ ಇರಲಿವೆ
>> ಡಿಸೆಂಬರ್ 25 - ಭಾನುವಾರದ ರಜಾದಿನ 
>> ಡಿಸೆಂಬರ್ 26- ಲಸುಂಗ್, ನಾಮ್‌ಸಂಗ್ - ಮಿಜೋರಾಂ, ಸಿಕ್ಕಿಂ, ಮೇಘಾಲಯದಲ್ಲಿ ಬ್ಯಾಂಕುಗಳು ಬಂದ್ ಇರಲಿವೆ
>> ಡಿಸೆಂಬರ್ 29 - ಗುರು ಗೋಬಿಂದ್ ಸಿಂಗ್ ಅವರ ಜನ್ಮದಿನ - ಚಂಡೀಗಢದಲ್ಲಿ ಬ್ಯಾಂಕ್ ಗಳು ಬಂದ್ ಇರಲಿವೆ.
>> ಡಿಸೆಂಬರ್ 30- ಯು ಕಿಯಾಂಗ್ ನಂಗ್ವಾ - ಮೇಘಾಲಯದಲ್ಲಿ ಬ್ಯಾಂಕ್ ಗಳು ಬಂದ್  ಇರಲಿವೆ
>> ಡಿಸೆಂಬರ್ 31 – ಹೊಸ ವರ್ಷದ ಮುನ್ನಾದಿನ – ಮಿಜೋರಾಂನಲ್ಲಿ ಬ್ಯಾಂಕ್ ಗಳಿಗೆ ರಜೆ ಇರಲಿದೆ


ಇದನ್ನೂ ಓದಿ-PAN Card ನಲ್ಲಿ ಈ ತಪ್ಪು ಇದ್ದರೆ, ಈಗಲೇ ಸುಧಾರಿಸಿಕೊಳ್ಳಿ... ಇಲ್ದಿದ್ರೆ?


ಪಟ್ಟಿಯನ್ನು ಪರಿಶೀಲಿಸುವ ಮೂಲಕ ನಿಮ್ಮ ಕೆಲಸವನ್ನು ಪೂರ್ಣಗೊಳಿಸಿ
ರಾಜ್ಯವಾರು ರಜಾದಿನಗಳನ್ನು ಈ ಸಂಪೂರ್ಣ ಪಟ್ಟಿಯಲ್ಲಿ ಸೇರಿಸಲಾಗಿದೆ, ಆದ್ದರಿಂದ ನಿಮ್ಮ ನಗರದಲ್ಲಿ ರಜೆಯನ್ನು ನೋಡಿದ ನಂತರವೇ ಬ್ಯಾಂಕ್‌ಗೆ ಹೋಗಲು ಯೋಜನೆ ರೂಪಿಸಿ. RBI ರಜಾದಿನಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ನೀಡುತ್ತದೆ. ನೀವು ಬ್ಯಾಂಕ್‌ಗಳ ಕೆಲಸವನ್ನು ಆನ್‌ಲೈನ್‌ನಲ್ಲಿ ಕೂಡ ಪೂರ್ಣಗೊಳಿಸಬಹುದು.


ಇದನ್ನೂ ಓದಿ-Ration Card: ಉಚಿತ ಪಡಿತರ ಪಡೆಯುವವರಿಗೊಂದು ಭಾರಿ ಸಂತಸದ ಸುದ್ದಿ, ಸರ್ಕಾರದ ಹೊಸ ಆದೇಶ ಜಾರಿ


ನೀವು ಆನ್‌ಲೈನ್ ಬ್ಯಾಂಕಿಂಗ್ ಅನ್ನು ಬಳಸಬಹುದು
ಗ್ರಾಹಕರು ಎಲ್ಲಾ ಸಮಯದಲ್ಲೂ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು UPI ಅನ್ನು ಬಳಸಬಹುದು ಎಂಬುದು ಇಲ್ಲಿ ಉಲ್ಲೇಖನೀಯ. ಕೆಲವು ರಜಾದಿನಗಳು ರಾಷ್ಟ್ರೀಯವಾಗಿರುವ ಕಾರಣ ಅವು ಎಲ್ಲಾ ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ. ಆದರೆ ಅನೇಕ ರಾಜ್ಯಗಳು ಪ್ರಾದೇಶಿಕ ರಜಾದಿನಗಳನ್ನು ಹೊಂದಿವೆ, ಈ ರಜಾದಿನಗಳು ರಾಜ್ಯಗಳ ಹಬ್ಬಗಳನ್ನು ಅವಲಂಬಿಸಿರುತ್ತದೆ. ರಾಷ್ಟ್ರಮಟ್ಟದಲ್ಲಿ ಹೇಳುವುದಾದರೆ, ಡಿಸೆಂಬರ್‌ನಲ್ಲಿ 3,4,10,11,18,24,25 ರಂದು ಏಕಕಾಲದಲ್ಲಿ ಬ್ಯಾಂಕ್‌ಗಳು ಬಂದ್ ಇರಲಿವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.