Credit Card New Rules: ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಪ್ರಮುಖ ಮಾಹಿತಿಯೊಂದು ಬಂದಿದೆ. ನವೆಂಬರ್ 15ರಿಂದ ಐಸಿಐಸಿಐ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್‌ನ ನಿಯಮಗಳು ಮತ್ತು ಷರತ್ತುಗಳನ್ನು ಬದಲಾಯಿಸಿದೆ. ಐಸಿಐಸಿಐ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್‌ನ ನಿಯಮಗಳು ಮತ್ತು ಷರತ್ತುಗಳಲ್ಲಿ ನವೆಂಬರ್ 15ರಿಂದ ಅನೇಕ ಬದಲಾವಣೆಗಳನ್ನು ಮಾಡಿದೆ. ಬದಲಾಗಿರುವ ನಿಯಮಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ. ಯುಟಿಲಿಟಿ ವಹಿವಾಟುಗಳಿಗೆ ಏರ್‌ಪೋರ್ಟ್ ಲಾಂಜ್ ಪ್ರವೇಶದಂತಹ ಪ್ರಮುಖ ನಿಯಮಗಳನ್ನು ಬದಲಾಯಿಸಲಾಗಿದೆ. 


COMMERCIAL BREAK
SCROLL TO CONTINUE READING

ನ.15ರಿಂದ ಈ ನಿಯಮಗಳು ಬದಲಾಗಲಿವೆ  


ಐಸಿಐಸಿಐ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹಲವು ನಿಯಮಗಳನ್ನು ಬದಲಾಯಿಸಿದೆ. ಇದು ರಿವಾರ್ಡ್ ಪಾಯಿಂಟ್‌ಗಳು ಮತ್ತು ವಹಿವಾಟು ಶುಲ್ಕವನ್ನು ವಿಧಿಸುವ ಮೂಲಕ ಪ್ರಯೋಜನಗಳ ಮೇಲೆ ಪರಿಣಾಮ ಬೀರಲಿದೆ. ಹೊಸ ನಿಯಮದ ಪ್ರಕಾರ, ಕ್ರೆಡಿಟ್ ಕಾರ್ಡ್ ಹೊಂದಿರುವವರು ಕಾಂಪ್ಲಿಮೆಂಟರಿ ಏರ್‌ಪೋರ್ಟ್ ಲಾಂಜ್ ಪ್ರವೇಶಕ್ಕಾಗಿ ತಮ್ಮ ಕಾರ್ಡ್‌ನಿಂದ ತ್ರೈಮಾಸಿಕದಲ್ಲಿ 75,000 ರೂ. ಖರ್ಚು ಮಾಡಬೇಕಾಗುತ್ತದೆ. ಆದರೆ ಈ ಹಿಂದೆ ಇದು 35 ಸಾವಿರ ರೂ. ಇತ್ತು.


ಇದನ್ನೂ ಓದಿ: Free Plot Scheme ಮೂಲಕ ರಾಜ್ಯ ಸರ್ಕಾರ ನೀಡುತ್ತಿದೆ ಫ್ರೀ ಸೈಟ್ !ಮನೆ ನಿರ್ಮಾಣಕ್ಕೆ ಹಣಕಾಸಿನ ನೆರವಿನ ಜೊತೆಗೆ ಉಚಿತ ಜಮೀನಿನ ಭಾಗ್ಯ


ಇಂಧನ ಸರ್ಚಾರ್ಜ್


ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಇಂಧನ ಸರ್ಚಾರ್ಜ್ ಮನ್ನಾ ನಿಯಮಗಳನ್ನು ಸಹ ಬದಲಾಯಿಸಲಾಗಿದೆ. ಹೊಸ ನಿಯಮದ ಪ್ರಕಾರ, ಪ್ರತಿ ತಿಂಗಳು 50 ಸಾವಿರ ರೂ.ವರೆಗಿನ ವಹಿವಾಟುಗಳಿಗೆ ಇಂಧನ ಸರ್ಚಾರ್ಜ್ ಉಚಿತವಾಗಿರುತ್ತದೆ. ಆದರೆ ವಿಶೇಷವಾದ ಎಮರಾಲ್ಡ್ ಮಾಸ್ಟರ್‌ಕಾರ್ಡ್‌ಗೆ ಈ ಮಿತಿಯು ತಿಂಗಳಿಗೆ 1 ಲಕ್ಷ ರೂ. ಆಗಿರುತ್ತದೆ.  


ರಿವಾರ್ಡ್ ಪಾಯಿಂಟ್ಸ್‌


ರೂಬಿಕ್ಸ್, ಸಫಿರೋ, ಎಮರಾಲ್ಡ್ ಕಾರ್ಡ್‌ಗಳು ಯುಟಿಲಿಟಿ ಪಾವತಿಗಳು, 80,000 ರೂ.ವರೆಗಿನ ಮಾಸಿಕ ವೆಚ್ಚಗಳು ಮತ್ತು ಈ ಮಿತಿಯವರೆಗಿನ ವಿಮಾ ಪಾವತಿಗಳ ಮೇಲೆ ರಿವಾರ್ಡ್ ಪಾಯಿಂಟ್‌ಗಳನ್ನು ಒದಗಿಸುವುದನ್ನು ಮುಂದುವರಿಸುತ್ತವೆ. ಇದಲ್ಲದೇ ಇತರೆ ಕಾರ್ಡ್‌ಗಳಿಗೆ ಈ ಮಿತಿ 40 ಸಾವಿರ ರೂ. ಇರುತ್ತದೆ. ಅದೇ ರೀತಿ ಐಸಿಐಸಿಐ ಬ್ಯಾಂಕ್ ರೂಬಿಕ್ಸ್ ವೀಸಾ, ಸಫಿರೋ ವೀಸಾ, ಎಮರಾಲ್ಡ್ ವೀಸಾ ಕಾರ್ಡ್ ಹೊಂದಿರುವವರು ಮಾಸಿಕ ದಿನಸಿ ವೆಚ್ಚದಲ್ಲಿ 40,000 ರೂ.ವರೆಗೆ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಲು ಸಾಧ್ಯವಾಗುತ್ತದೆ. ಉಳಿದವರಿಗೆ ಈ ಮಿತಿ 20 ಸಾವಿರ ರೂ. ಇರುತ್ತದೆ.


ಇದನ್ನೂ ಓದಿ:  ರೈತನ ಹಣೆಬರಹವನ್ನೇ ಬದಲಾಯಿಸಿದ ಸರ್ಕಾರಿ ಯೋಜನೆ, ಲಕ್ಷಾಂತರ ರೂ. ಲಾಭ ಗಳಿಸಿದ ರೈತನ ಯಶೋಗಾಥೆ!


ಪೂರಕ ಕಾರ್ಡ್ ಹೊಂದಿರುವವರಿಗೆ ಬ್ಯಾಂಕ್ ವಾರ್ಷಿಕ ಶುಲ್ಕ 199 ರೂ. ವಿಧಿಸುತ್ತದೆ. ಅದೇ ರೀತಿ ನವೆಂಬರ್ 15ರಿಂದ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ CRED, Paytm, Cheq, MobiKwikನಂತಹ ಥರ್ಡ್‌ ಪಾರ್ಟಿ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಶೈಕ್ಷಣಿಕ ಪಾವತಿಯನ್ನು ಮಾಡಿದರೆ, ವಹಿವಾಟಿನ ಮೊತ್ತದ ಮೇಲೆ ಶೇ.1ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ