SMS services Charges : ಯಾವುದೇ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದರೂ ನೀವು ಈ ಸುದ್ದಿಯನ್ನು ಓದಲೇಬೇಕು. ಎಸ್‌ಎಂಎಸ್, ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮತ್ತು ಹೆಚ್ಚುವರಿ ಎಟಿಎಂ ವಹಿವಾಟುಗಳಿಗಾಗಿ ಕಳೆದ ಐದು ವರ್ಷಗಳಲ್ಲಿ  ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು ಸಾವಿರಾರು ಕೋಟಿ ರೂ. ಸಂಗ್ರಹಿಸಿವೆ. 2018 ರಿಂದ ಐದು ವರ್ಷಗಳಲ್ಲಿ ಒಟ್ಟು 35,587 ಕೋಟಿ ರೂ.ಗಳನ್ನು ದಂಡದ ರೂಪದಲ್ಲಿ ಬ್ಯಾಂಕ್ ವಸೂಲಿ ಮಾಡಿದೆ. ಈ ಪೈಕಿ, 2018 ರಿಂದ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದಕ್ಕಾಗಿ ಬ್ಯಾಂಕ್‌ಗಳು 21,044.04 ಕೋಟಿ ರೂ.ಗಳನ್ನು ದಂಡವಾಗಿ  ವಸೂಲಿ ಮಾಡಿವೆ. 


COMMERCIAL BREAK
SCROLL TO CONTINUE READING

ರಾಜ್ಯಸಭೆಯಲ್ಲಿ ನೀಡಿದ ಮಾಹಿತಿ :
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್ ಈ ಮಾಹಿತಿ ನೀಡಿದ್ದಾರೆ. ಇದಲ್ಲದೆ, ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಹೊರತುಪಡಿಸಿ, ಖಾಸಗಿ ವಲಯದ ಬ್ಯಾಂಕ್‌ಗಳು ಹೆಚ್ಚುವರಿ ಎಟಿಎಂ ವಹಿವಾಟಿಗೆ 8,289.32 ಕೋಟಿ ರೂ. ಮತ್ತು ಎಸ್‌ಎಂಎಸ್ ಸೇವೆಗಳನ್ನು ಒದಗಿಸಲು 6,254.32 ಕೋಟಿ ರೂ. ಸಂಗ್ರಹಿಸಿವೆ.  ಖಾಸಗಿ ಬ್ಯಾಂಕ್‌ಗಳಲ್ಲಿ ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ಸೇರಿವೆ.


ಇದನ್ನೂ ಓದಿ : ಇಂದಿನ ಅಡಿಕೆ ಧಾರಣೆ: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಕುಸಿತ!


ಬ್ಯಾಂಕ್‌ಗಳು ವಿಧಿಸುವ ಶುಲ್ಕಗಳನ್ನು ನಿಯಂತ್ರಿಸುವ ಸಲುವಾಗಿ RBI ಈ ಹಿಂದೆ ಸುತ್ತೋಲೆಯನ್ನು ಹೊರಡಿಸಿತ್ತು. RBI ಜುಲೈ 1, 2015 ರಂದು 'ಬ್ಯಾಂಕ್‌ಗಳಲ್ಲಿ ಗ್ರಾಹಕ ಸೇವೆ' ಕುರಿತು ಸುತ್ತೋಲೆಯನ್ನು ಹೊರಡಿಸಿದೆ. ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಇಡದಿದ್ದಲ್ಲಿ ದಂಡವನ್ನು ನಿರ್ಧರಿಸಲು ಬ್ಯಾಂಕ್‌ಗಳಿಗೆ ಅವಕಾಶವಿದೆ ಎಂಬ ನಿಬಂಧನೆಯನ್ನು ಇದರಲ್ಲಿ ಹಾಕಲಾಗಿತ್ತು. ಸುತ್ತೋಲೆಯ ಮೂಲಕ, ಗ್ರಾಹಕರಿಗೆ SMS ಎಚ್ಚರಿಕೆಗಳನ್ನು ಕಳುಹಿಸುವ ಶುಲ್ಕಗಳಲ್ಲಿ ತರ್ಕಬದ್ಧತೆ ಮತ್ತು ಏಕರೂಪತೆಯನ್ನು ಖಚಿತಪಡಿಸಿಕೊಳ್ಳುವಂತೆಯೂ ಬ್ಯಾಂಕುಗಳಿಗೆ RBI ಸೂಚಿಸಿತ್ತು. 


ಜೂನ್ 10, 2021 ರಂದು ಆರ್‌ಬಿಐ ಹೊರಡಿಸಿದ ಸುತ್ತೋಲೆಯ ಪ್ರಕಾರ, ಬ್ಯಾಂಕ್ ಗ್ರಾಹಕರು ತಮ್ಮ ಬ್ಯಾಂಕ್ ಎಟಿಎಂಗಳಿಂದ ಪ್ರತಿ ತಿಂಗಳು ಐದು ಉಚಿತ ವಹಿವಾಟುಗಳನ್ನು ನಡೆಸಬಹುದು. ಗ್ರಾಹಕರು ಇತರ ಬ್ಯಾಂಕ್ ಎಟಿಎಂಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಉಚಿತ ವಹಿವಾಟುಗಳನ್ನು ಮಾತ್ರ ಮಾಡಬಹುದಾಗಿದೆ. ಅಂದರೆ ಮೆಟ್ರೋ ನಗರಗಳಲ್ಲಿ ಮೂರು ವಹಿವಾಟುಗಳು ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ ಐದು ವಹಿವಾಟುಗಳನ್ನು ಮಾಡಬಹುದಾಗಿದೆ. ಈ ಮಿತಿಯನ್ನು ದಾಟಿದರೆ ಪ್ರತಿ ಎಟಿಎಂ ವಹಿವಾಟಿಗೆ ಗರಿಷ್ಠ 21 ರೂ. ಶುಲ್ಕ ಪಾವತಿಸಬೇಕಾಗುತ್ತದೆ. 


ಇದನ್ನೂ ಓದಿ : ನಿಮ್ಮ ಬಳಿ ಈ ಖಾತೆಯೊಂದಿದ್ದರೆ ಸಾಕು ಸುಲಭವಾಗಿ ಈಡೇರುವುದು ಸ್ವಂತ ಮನೆಯ ಕನಸು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.