ನವದೆಹಲಿ : ನಿಮ್ಮ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸ ಬಾಕಿ ಇದ್ದರೆ ಮತ್ತು ಅದನ್ನು ಇತ್ಯರ್ಥಗೊಳಿಸಲು ನೀವು ಬ್ಯಾಂಕ್‌ಗೆ ಹೋಗುವ ಬಗ್ಗೆ ಯೋಚಿಸುತ್ತಿದ್ದರೆ ಈಗಲೇ ಮಾಡಿಕೊಳ್ಳಿ ಯಾಕಂದ್ರೆ, ಮುಂದಿನ 5 ದಿನಗಳವರೆಗೆ ಕೆಲವು ರಾಜ್ಯಗಳಲ್ಲಿ ಬ್ಯಾಂಕ್ ರಜೆ ಇದೆ. ಆದ್ದರಿಂದ, ಮನೆಯಿಂದ ಹೊರಡುವ ಮೊದಲು, ಆ ದಿನ ನಿಮ್ಮ ಬ್ಯಾಂಕ್ ಬಂದ್ ಇದೆಯಾ ಎಂದು ಖಚಿತಪಡಿಸಿಕೊಳ್ಳಿ.


COMMERCIAL BREAK
SCROLL TO CONTINUE READING

ಮುಂದಿನ 5 ದಿನ ಬ್ಯಾಂಕುಗಳು ಇಲ್ಲಿ ತೆರೆಯುವುದಿಲ್ಲ: 


ಒಟ್ಟಾರೆಯಾಗಿ, ಜುಲೈನಲ್ಲಿ 15 ದಿನ ಬ್ಯಾಂಕ್ ರಜಾದಿನಗಳಿವೆ(Bank Holiday). ಆರ್‌ಬಿಐನ ರಜಾದಿನದ ಕ್ಯಾಲೆಂಡರ್ ಪ್ರಕಾರ, ಡೆಹ್ರಾಡೂನ್‌ನಲ್ಲಿ ಹರೇಲಾ ಪೂಜೆಯ ಸಂದರ್ಭದಲ್ಲಿ 2021 ಜುಲೈ 16 ರಂದು ಬ್ಯಾಂಕ್ ರಜೆ ಇದೆ. ಜುಲೈ 17 ರಂದು ಶಿಲ್ಲಾಂಗ್‌ನ ಅಗರ್ತಲಾದಲ್ಲಿ ಯು ತಿರೋತ್ ಸಿಂಗ್ ದಿನ ಮತ್ತು ಖಾರ್ಚಿ ಪೂಜೆಗೆ ಬ್ಯಾಂಕುಗಳು ಮತ್ತೆ ರಜೆ ಇದೆ. ಜುಲೈ 18 ರಂದು ಭಾನುವಾರದಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಗ್ಯಾಂಗ್ಟಾಕ್ನಲ್ಲಿ ಗುರು ರಿಂಪೋಚೆ ಅವರ ತುಂಗ್ಕರ್ ತ್ಸೆಚು ಹಬ್ಬಕ್ಕಾಗಿ ಜುಲೈ 19 ರಂದು ಮತ್ತೆ ಬ್ಯಾಂಕುಗಳನ್ನು ಬಂದ್ ಇರಲಿವೆ.


ಇದನ್ನೂ ಓದಿ : LIC Policy : ಪ್ರತಿ ತಿಂಗಳು ₹1302 ಪ್ರೀಮಿಯಂ ಪಾವತಿಸಿದರೆ ಸಿಗಲಿದೆ  ₹27.60 ಲಕ್ಷ : ಈ ಪಾಲಿಸಿ ಯಾವುದು?


ಅದೇ ರೀತಿ, 2021 ರ ಜುಲೈ 20 ರಂದು ಬಕ್ರಿದ್ ಕಾರಣದಿಂದ ಜಮ್ಮು, ಕೊಚ್ಚಿ, ಶ್ರೀನಗರ ಮತ್ತು ತಿರುವನಂತಪುರಂನಲ್ಲಿ ಯಾವುದೇ ಬ್ಯಾಂಕ್(Bank) ವಹಿವಾಟು ಇರುವುದಿಲ್ಲ. ಐಜ್ವಾಲ್, ಭುವನೇಶ್ವರ, ಗ್ಯಾಂಗ್ಟಾಕ್, ಕೊಚ್ಚಿ ಮತ್ತು ತಿರುವನಂತಪುರಂ ಹೊರತುಪಡಿಸಿ ಜುಲೈ 21 ರಂದು ದೇಶಾದ್ಯಂತ ಬ್ಯಾಂಕುಗಳು ಈದ್ ಅಲ್ ಅಧಾಗೆ ರಜೆ ಇವೆ. ಆದಾಗ್ಯೂ, ಈ ಬ್ಯಾಂಕ್ ರಜಾದಿನಗಳು ಎಲ್ಲಾ ರಾಜ್ಯಗಳಿಗೆ ಏಕಕಾಲದಲ್ಲಿ ಅನ್ನವಿಸುವುದಿಲ್ಲ ಎಂಬುವುದು ಗಮನಿಸಬೇಕು. ಆರ್‌ಬಿಐ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ, ದೇಶಾದ್ಯಂತ ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಬ್ಯಾಂಕುಗಳು ಮೇಲೆ ತಿಳಿಸಿದ ದಿನಾಂಕಗಳಲ್ಲಿ ಮುಚ್ಚಲ್ಪಡುತ್ತವೆ ಎಂದು ತಿಳಿಸಲಾಗಿದೆ.


ಇದನ್ನೂ ಓದಿ : Master Card Ban: ಎಸ್‌ಬಿಐ, ಆಕ್ಸಿಸ್ ಸೇರಿದಂತೆ 5 ಬ್ಯಾಂಕುಗಳ ಕಾರ್ಡ್‌ಗಳ ಮೇಲೆ ಪರಿಣಾಮ


ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ಪರಿಶೀಲಿಸಿ-


- 17 ಜುಲೈ 2021: ಖಾರ್ಚಿ ಪೂಜಾ - (ಅಗರ್ತಲಾ, ಶಿಲ್ಲಾಂಗ್)
- 18 ಜುಲೈ 2021: ಭಾನುವಾರ
- 19 ಜುಲೈ 2021: ಗುರು ರಿಂಪೋಚಿಯ ತುಂಗ್ಕರ್ ತ್ಸೆಚು - (ಗ್ಯಾಂಗ್ಟಾಕ್)
- 20 ಜುಲೈ 2021: ಮಂಗಳವಾರ - ಈದ್ ಅಲ್ ಅಧಾ (ದೇಶಾದ್ಯಂತ ಬ್ಯಾಂಕ್ ರಜೆ)
- 21 ಜುಲೈ 2021: ಬುಧವಾರ - ಬಕ್ರಿದ್ (ದೇಶಾದ್ಯಂತ ಬ್ಯಾಂಕ್ ರಜೆ)