Bank Holidays : ಬ್ಯಾಂಕ್ ಗ್ರಾಹಕರೇ ಗಮನಿಸಿ : ಇಂದಿನಿಂದ 13 ದಿನ ಬ್ಯಾಂಕ್ ಬಂದ್
ಇಂದಿನಿಂದ, ವಿವಿಧ ನಗರಗಳಲ್ಲಿ ಒಟ್ಟು 13 ದಿನಗಳವರೆಗೆ ಬ್ಯಾಂಕುಗಳು ರಜೆ ಇವೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಕೂಡ ಯಾವುದೇ ಪ್ರಮುಖ ಬ್ಯಾಂಕ್ ಕೆಲಸಗಳನ್ನ ಇಟ್ಟುಕೊಳ್ಳುವ ಮೊದಲು ಈ ಸುದ್ದಿಯನ್ನು ಓದಿ...
ನವದೆಹಲಿ : ನೀವು ಕೂಡ ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ಏನಾದ್ರು ಇಟ್ಟುಕೊಳ್ಳಲು ಹೊರಟಿದ್ದರೆ, ಮೊದಲು ಈ ಸುದ್ದಿಯನ್ನು ಓದಿ. ಅಕ್ಟೋಬರ್ 2021 ರಲ್ಲಿ, ನವರಾತ್ರಿ, ದಸರಾ ಸೇರಿದಂತೆ ಅನೇಕ ಹಬ್ಬಗಳಿವೆ. ಈ ಅನುಕ್ರಮದಲ್ಲಿ, ಇಂದಿನಿಂದ, ವಿವಿಧ ನಗರಗಳಲ್ಲಿ ಒಟ್ಟು 13 ದಿನಗಳವರೆಗೆ ಬ್ಯಾಂಕುಗಳು ರಜೆ ಇವೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಕೂಡ ಯಾವುದೇ ಪ್ರಮುಖ ಬ್ಯಾಂಕ್ ಕೆಲಸಗಳನ್ನ ಇಟ್ಟುಕೊಳ್ಳುವ ಮೊದಲು ಈ ಸುದ್ದಿಯನ್ನು ಓದಿ...
21 ದಿನಗಳವರೆಗೆ ಬ್ಯಾಂಕ್ ರಜೆ
ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಕ್ಟೋಬರ್ ತಿಂಗಳ ಅಧಿಕೃತ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ 21 ರಜಾದಿನಗಳಿವೆ. ಈ ಸಮಯದಲ್ಲಿ, ದೇಶದ ಅನೇಕ ನಗರಗಳಲ್ಲಿ ಬ್ಯಾಂಕುಗಳು ನಿರಂತರವಾಗಿ ರಜೆ ಇವೆ. ಈ 21 ದಿನ ರಜೆ ದಿನಗಳಲ್ಲಿ ವೀಕೆಂಡ್ ರಜೆ ಕೂಡ ಒಳಗೊಂಡಿದೆ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್‌ಗಳು ಭಾನುವಾರದಂದು ಹಾಗೂ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ರಜೆ ಇರುತ್ತದೆ.
ಇದನ್ನೂ ಓದಿ : Mukesh Ambani : ವಿಶ್ವ ಶ್ರೀಮಂತರ ಪಟ್ಟಿಗೆ ಮುಖೇಶ್ ಅಂಬಾನಿ : ಒಟ್ಟು ಆಸ್ತಿಯ ಮೌಲ್ಯ 10 ಸಾವಿರ ಕೋಟಿ!
ಬ್ಯಾಂಕುಗಳು ಸತತ ಐದು ದಿನಗಳವರೆಗೆ ರಜೆ
ಈ ರಜಾದಿನ(Bank Holiday)ಗಳಲ್ಲಿ ಇಂದಿನಿಂದ ದೇಶದ ವಿವಿಧ ನಗರಗಳಲ್ಲಿ 13 ದಿನಗಳವರೆಗೆ ಬ್ಯಾಂಕುಗಳು ರಜೆ ಇರುತ್ತವೆ. ಆರ್‌ಬಿಐ ನಿಗದಿಪಡಿಸಿದ ರಜಾದಿನಗಳು ಕೆಲವು ಪ್ರಾದೇಶಿಕ ಹಬ್ಬಗಳ ಮೇಲೆ ಅವಲಂಬಿತವಾಗಿರುವುದರಿಂದ ದೇಶಾದ್ಯಂತ ಎಲ್ಲಾ ಬ್ಯಾಂಕುಗಳು 21 ದಿನಗಳವರೆಗೆ ಬಂದ್ ಇರುತ್ತವೆ. ಅಂದರೆ, ಕೆಲವು ರಜಾದಿನಗಳು ಕೆಲವು ರಾಜ್ಯಗಳಿಗೆ ಮಾತ್ರ ಸೀಮಿತವಾಗಿವೆ, ಇತರ ರಾಜ್ಯಗಳಲ್ಲಿ ಎಲ್ಲಾ ಬ್ಯಾಂಕಿಂಗ್ ಕೆಲಸಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.
ಯಾವ ದಿನ ಬ್ಯಾಂಕ್ ರಜೆ ಇರುತ್ತವೆ?
ಇಂದು ಎರಡನೇ ಶನಿವಾರ(Second Saturday)ವಾದ್ದರಿಂದ, ದೇಶಾದ್ಯಂತ ಬ್ಯಾಂಕ್ ರಜೆ ಇರುತ್ತವೆ. ಇದರೊಂದಿಗೆ, ನಾಳೆ ಭಾನುವಾರ ರಜಾದಿನವಾಗಿದೆ. ಇದರ ನಂತರ, ಮಹಾಸಪ್ತಮಿ, ಮಹಾಷ್ಟಮಿ ಮತ್ತು ದಸರಾ ನಿಮಿತ್ತ ಬ್ಯಾಂಕ್ ಉದ್ಯೋಗಿಗಳಿಗೆ ರಜೆ ಇರುತ್ತದೆ. ಅಕ್ಟೋಬರ್ ತಿಂಗಳ ಕೊನೆಯ ರಜೆ 31 ರಂದು ಇರುತ್ತದೆ.
ಇದನ್ನೂ ಓದಿ : PPF Calculator : ಈ ಟ್ರಿಕ್ ಮೂಲಕ ಪಿಪಿಎಫ್‌ನಲ್ಲಿ ಹಣ ಹೂಡಿಕೆ ಮಾಡಿ, ಇದರಿಂದ ನಿಮಗೆ ಸಿಗಲಿದೆ 1.5 ಕೋಟಿ ಲಾಭ!
ರಜಾದಿನಗಳ ಸಂಪೂರ್ಣ ಪಟ್ಟಿ ನೋಡಿ
ಅಕ್ಟೋಬರ್ 1 - ಗ್ಯಾಂಗ್‌ಟಾಕ್‌ನಲ್ಲಿ ಅರ್ಧ ವಾರ್ಷಿಕ ಬ್ಯಾಂಕ್ ರಜೆ
ಅಕ್ಟೋಬರ್ 2 - ಮಹಾತ್ಮ ಗಾಂಧಿ ಜಯಂತಿ (ಎಲ್ಲಾ ರಾಜ್ಯಗಳಲ್ಲಿ ಬ್ಯಾಂಕುಗಳು ಬಂದ್)
ಅಕ್ಟೋಬರ್ 3 - ಭಾನುವಾರ (ವಾರದ ರಜೆ)
ಅಕ್ಟೋಬರ್ 6 - ಮಹಾಲಯ ಅಮಾವಾಸ್ಯೆ - ಅಗರ್ತಲಾ, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ಬ್ಯಾಂಕ್ ಬಂದ್
7 ಅಕ್ಟೋಬರ್ - ಮೀರಾ ಚೋರೆಲ್ ಹೌಬಾ - ಇಂಫಾಲದಲ್ಲಿ ಬ್ಯಾಂಕ್ ಬಂದ್
ಅಕ್ಟೋಬರ್ 9 - ಶನಿವಾರ (ತಿಂಗಳ 2 ನೇ ಶನಿವಾರ)
ಅಕ್ಟೋಬರ್ 10 - ಭಾನುವಾರ (ವಾರದ ರಜೆ)
12 ಅಕ್ಟೋಬರ್ - ದುರ್ಗಾ ಪೂಜೆ (ಮಹಾ ಸಪ್ತಮಿ) - ಕೋಲ್ಕತ್ತಾದ ಅಗರ್ತಲಾದಲ್ಲಿ ಬ್ಯಾಂಕ್ ರಜೆ
ಅಕ್ಟೋಬರ್ 13 - ದುರ್ಗಾ ಪೂಜೆ (ಮಹಾ ಅಷ್ಟಮಿ) - ಅಗರ್ತಲಾ, ಭುವನೇಶ್ವರ, ಗ್ಯಾಂಗ್ಟಾಕ್, ಗುವಾಹಟಿ, ಇಂಫಾಲ್, ಕೋಲ್ಕತಾ, ಪಾಟ್ನಾ ಮತ್ತು ರಾಂಚಿಯಲ್ಲಿ ಬ್ಯಾಂಕ್ ಬಂದ್.
ಅಕ್ಟೋಬರ್ 14 - ದುರ್ಗಾ ಪೂಜೆ / ದಸರಾ (ಮಹಾ ನವಮಿ) / ಆಯುಧ ಪೂಜೆ - ಅಗರ್ತಲಾ, ಬೆಂಗಳೂರು, ಚೆನ್ನೈ, ಗ್ಯಾಂಗ್ಟಾಕ್, ಗುವಾಹಟಿ, ಕಾನ್ಪುರ, ಕೊಚ್ಚಿ, ಕೋಲ್ಕತ್ತಾ, ಲಕ್ನೋ, ಪಾಟ್ನಾ, ರಾಂಚಿ, ಶಿಲ್ಲಾಂಗ್ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್ ರಜೆ.
ಅಕ್ಟೋಬರ್ 15 - ದುರ್ಗಾ ಪೂಜೆ / ದಸರಾ / ವಿಜಯದಶ್ಮಿ - ಇಂಫಾಲ್ ಮತ್ತು ಶಿಮ್ಲಾವನ್ನು ಹೊರತುಪಡಿಸಿ ಇತರ ಸ್ಥಳಗಳಲ್ಲಿ ಬ್ಯಾಂಕ್ ರಜೆ.
16 ಅಕ್ಟೋಬರ್ - ದುರ್ಗಾ ಪೂಜೆ (ದಶೈನ್) - ಗ್ಯಾಂಗ್ಟಾಕ್ ನಲ್ಲಿ ಬ್ಯಾಂಕ್ ಬಂದ್.
17 ಅಕ್ಟೋಬರ್ - ಭಾನುವಾರ (ವಾರದ ರಜೆ)
18 ಅಕ್ಟೋಬರ್ - ಕತಿ ಬಿಹು - ಗುವಾಹಟಿಯಲ್ಲಿ ಬ್ಯಾಂಕ್ ರಜೆ.
19 ಅಕ್ಟೋಬರ್- ಈದ್-ಇ-ಮಿಲಾದ್ / ಈದ್-ಇ-ಮಿಲಾದುನ್ನಬಿ / ಮಿಲಾದ್-ಇ-ಶರೀಫ್ / ಬರವಫತ್- ಅಹಮದಾಬಾದ್, ಬೇಲಾಪುರ, ಭೋಪಾಲ್, ಚೆನ್ನೈ, ಡೆಹ್ರಾಡೂನ್, ಹೈದರಾಬಾದ್, ಇಂಫಾಲ್, ಜಮ್ಮು, ಕಾನ್ಪುರ, ಕೊಚ್ಚಿ, ಲಕ್ನೋ, ಮುಂಬೈ, ನಾಗ್ಪುರ, ಹೊಸ ದೆಹಲಿ, ರಾಯ್‌ಪುರ, ರಾಂಚಿ, ಶ್ರೀನಗರ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್ ಬಂದ್ ಇರುತ್ತವೆ.
ಅಕ್ಟೋಬರ್ 20 - ಮಹರ್ಷಿ ವಾಲ್ಮೀಕಿ / ಲಕ್ಷ್ಮಿ ಪೂಜೆ / ಈದ್ -ಇ -ಮಿಲಾದ್ ಜನ್ಮದಿನ
22 ಅಕ್ಟೋಬರ್-ಈದ್-ಇ-ಮಿಲಾದ್-ಉಲ್-ನಬಿ ನಂತರ ಶುಕ್ರವಾರ-ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ ರಜೆ.
23 ಅಕ್ಟೋಬರ್ - ಶನಿವಾರ (ತಿಂಗಳ ನಾಲ್ಕನೇ ಶನಿವಾರ)
ಅಕ್ಟೋಬರ್ 24 - ಭಾನುವಾರ (ವಾರದ ರಜೆ)
26 ಅಕ್ಟೋಬರ್ - ವಿಲೀನ ದಿನ - ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ ಬಂದ್
ಅಕ್ಟೋಬರ್ 31 - ಭಾನುವಾರ (ವಾರದ ರಜೆ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ