BBMP New Rule To Sale Cigarettes, Gutka, Tobacco: ಇನ್ನು ಮುಂದೆ ಬೇಕರಿ ಮತ್ತು ಕಾಂಡಿಮೆಂಟ್ಸ್‌ ಗಳಲ್ಲಿ ಸಿಗರೇಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಲು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (BBMP) ಬ್ರೇಕ್ ಹಾಕಾಲು ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲೇ  ಸಿಗರೆಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಬೇಕು ಎಂದರೆ ಲೈಸೆನ್ಸ್ (License) ಪಡೆಯುವುದು ಕಡ್ಡಾಯ ಎಂಬ ನಿಯಮವನ್ನು ಜಾರಿಗೆ ತರಲು ಹೊರಟಿದೆ. ಒಂದು ವೇಳೆ ಈ ನಿಯಮ ಉಲ್ಲಂಘಿಸಿ ಯಾರಾದರೂ ಬೇಕರಿ ಮತ್ತು ಕಾಂಡಿಮೆಂಟ್ಸ್‌ ಗಳಲ್ಲಿ ಸಿಗರೆಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಿದರೆ ಭಾರೀ ದಂಡ ತೆತ್ತಬೇಕಾಗುತ್ತದೆಯಂತೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ ಬೇಕರಿ ಮತ್ತು ಕಾಂಡಿಮೆಂಟ್ಸ್‌ ಗಳಲ್ಲಿ ಸಿಗರೇಟ್, ಗುಟ್ಕಾ ಮತ್ತು ತಂಬಾಕು ಮಾರಾಟ  ಮಾಡಲು ಬಿಬಿಎಂಪಿ (BBMP) ಅಥವಾ ಇನ್ನಾವುದೇ ಸರ್ಕಾರಿ ಸಾಮ್ಯದ ಸಂಸ್ಥೆ ಪರವಾನಗಿ ನೀಡಿರುವುದಿಲ್ಲ. ಆದರೂ ಬೆಂಗಳೂರಿನಲ್ಲಿ ಈಗ ಬೇಕರಿ ಮತ್ತು ಕಾಂಡಿಮೆಂಟ್ಸ್‌ ಗಳಲ್ಲಿ ಕೂಡ ಸಿಗರೆಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಲಾಗುತ್ತಿದೆ. ಈ ಅಕ್ರಮ ತಡೆಯಬೇಕು ಎಂದು ಪಣತೊಟ್ಟಿರುವ ಬಿಬಿಎಂಪಿ ಎಲ್ಲೇ  ಸಿಗರೇಟ್ (Cigarette), ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಬೇಕು ಎಂದರೆ ಲೈಸೆನ್ಸ್ ಪಡೆಯುವುದು ಕಡ್ಡಾಯ (License is Mandatory) ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದ್ದು ಅದಕ್ಕಾಗಿ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದೆ.


ಮುಂದಿನ ತಿಂಗಳೇ ಬೆಂಗಳೂರು ನಗರದಲ್ಲಿ ಈ ಹೊಸ ನಿಯಮ ಅಧಿಕೃತವಾಗಿ ಜಾರಿಗೆ ಬರಲಿದೆ. ನಿಯಮ ಬಂದ ಬಳಿಕವೂ  ಬೇಕರಿ ಮತ್ತು ಕಾಂಡಿಮೆಂಟ್ಸ್‌ ಗಳಲ್ಲಿ ಅನಧಿಕೃವಾಗಿ ಸಿಗರೇಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಿದರೆ ಅಂಥವರಿಗೆ ಬೀಳುತ್ತೆ 5000 ರೂಪಾಯಿ ದಂಡ. ಮೊದಲ ಬಾರಿಗೆ 5000 ರೂಪಾಯಿ ದಂಡ, ಪುನರಾವರ್ತನೆ ಮಾಡಿದರೆ ದಿನಕ್ಕೆ 100 ರೂಪಾಯಿಗಳಂತೆ ದಂಡ ವಿಧಿಸಲಾಗುವುದು. ಜೊತೆಗೆ ಉದ್ದಿಮೆ ಪರವಾನಗಿಯನ್ನು ರದ್ದುಪಡಿಸಲು ಹೊಸ ನಿಯಮದಲ್ಲಿ ಅವಕಾಶ ನೀಡಲಾಗಿದೆ.


ಇದನ್ನೂ ಓದಿ- ಪೋಸ್ಟ್ ಆಫೀಸ್‌ನ ಅತ್ಯುತ್ತಮ ಜೀವ ವಿಮಾ ಪಾಲಿಸಿ: ತೆರಿಗೆ ವಿನಾಯಿತಿ ಜೊತೆಗೆ ಸಿಗುತ್ತೆ ಇಷ್ಟೆಲ್ಲಾ ಲಾಭ!


ಅನಧಿಕೃವಾಗಿ ಸಿಗರೇಟ್, ಗುಟ್ಕಾ ಮತ್ತು ತಂಬಾಕು ಮಾರಾಟ (Tobacco sales)  ಮಾಡಿ ಅದರಿಂದ ₹ 5000 ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಪರವಾನಗಿ ಪಡೆಯಬೇಕಾಗುತ್ತದೆ. ಸಿಗರೇಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡುವುದಕ್ಕೆ ಪರವಾನಗಿ ಪಡೆಯಲು ರಾಜ್ಯ ಸರ್ಕಾರದ 2022ರ ಆದೇಶದಂತೆ ಮಾರಟಗಾರರು  500 ರೂಪಾಯಿಗಳನ್ನು ಭರಿಸಬೇಕಾಗುತ್ತದೆ. ಸೆಪ್ಟೆಂಬ‌ರ್ ಮೊದಲ ವಾರದಲ್ಲಿ ಆನ್ ಲೈನ್ ನಲ್ಲಿ ಅರ್ಜಿ ದಾಖಲಿಸ ಬಹುದು. ಬಿಬಿಎಂಪಿ ಅಧಿಸೂಚನೆ ಹೊರಡಿಸುವ ಮೂಲಕ  ಪರವಾನಗಿ ಪಡೆಯುವುದಕ್ಕೆ  ಸೂಚನೆ ನೀಡಲಿದೆ. ಪರವಾನಗಿ ಪಡೆಯುವುದಕ್ಕೆ ವ್ಯಾಪಾರಿಗಳಿಗೆ 1 ತಿಂಗಳ  ಕಾಲಾವಕಾಶ ಇರಲಿದೆ. ಅರ್ಜಿ ಸಲ್ಲಿಸಿದ ವ್ಯಾಪಾರಿ ಮಳಿಗೆಗಳಿಗೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಪರವಾನಗಿ ನೀಡಲಿದ್ದಾರೆ.


ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು 49 ಸಾವಿರ ವ್ಯಾಪಾರಿಗಳಿಗೆ ಉದ್ದಿಮೆ ಪರವನಾಗಿ ನೀಡಲಾಗಿದೆ. ಇದರ ಹೊರತಾಗಿ ಈಗ ಪ್ರತ್ಯೇಕವಾಗಿ ತುಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟ್ ಮತ್ತು ಗುಟ್ಕಾ ಮಾರಾಟ ಮಾಡಲು ಪರವಾನಗಿ ನೀಡಲು‌ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೊಸ ಪರವಾನಗಿಗೆ ಪ್ರತಿ ವರ್ಷ 500 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಡೆಸಿರುವ ಸಮೀಕ್ಷೆ ಪ್ರಕಾರ ಬೆಂಗಳೂರಿನ ಪ್ರತಿ ವಾರ್ಡ್‌ನಲ್ಲಿ 150 ರಿಂದ 160 ತಂಬಾಕು ವ್ಯಾಪಾರಿಗಳಿದ್ದಾರು ಬೆಂಗಳೂರಿನಲ್ಲಿ   ಒಟ್ಟು 40 ಸಾವಿರ ವ್ಯಾಪಾರಿಗಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.


ಲೈಸೆನ್ಸ್ ಪಡೆಯಲು ಇರುವ ನಿಯಮಗಳು (Conditions for Obtaining License): 
>> ಬೀದಿ ವ್ಯಾಪಾರಿಗಳಿಗೆ ಸಿಗೋದಿಲ್ಲ ಲೈಸನ್ಸ್
>> 100 ರಿಂದ 150 ಚದರಡಿ ಸ್ಥಿರ ಮಳಿಗೆ ಹೊಂದಿರಬೇಕು
>> ಜಾಗದ ಮಾಲೀಕರ ಹೆಸರಿನಲ್ಲಿ ಪರವಾನಗಿ ಪಡೆಯಬೇಕು
>> ಪಾದಚಾರಿ ಮಾರ್ಗಗಳ ಮೇಲಿರುವ ಅಂಗಡಿಗಳಿಗೆ ಪರವಾನಗಿ ಇಲ್ಲ


ಇದನ್ನೂ ಓದಿ- ಹೊಲದಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಇಂದು ಮುಖೇಶ್ ಅಂಬಾನಿ ನಿವಾಸದ ಬಳಿಯೇ ಖರೀದಿಸಿದ್ದಾರೆ ಬಂಗಲೆ !ಬಿಸಿನೆಸ್ ಮ್ಯಾನ್ ಅಲ್ಲದಿದ್ದರೂ ಇವರ ವೇತನ 109 ಕೋಟಿ ರೂಪಾಯಿಗೂ ಅಧಿಕ


ಕೋಟ್ಟಾ ಕಾಯ್ದೆ-2003ರ ಅಡಿಯಲ್ಲಿ ಬೇಕರಿ ಮತ್ತು ಕಾಂಡಿಮೆಂಟ್ಸ್ ನಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ಅವಕಾಶವಿಲ್ಲ. ಪಾನ್ ಶಾಪ್ ಹಾಗೂ 30 ಆಸನಕ್ಕಿಂತ ಹೆಚ್ಚಿಸುವ ಹೋಟೆಲ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಮಾತ್ರ ಲೈಸೆನ್ಸ್ ಇರಲಿದೆ. ಹೋಟೆಲ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಧೂಮಪಾನಕ್ಕೆ ಪ್ರತ್ಯೇಕ ಸ್ಥಳ ನಿಗದಿಪಡಿಸಿದರೆ ಮಾತ್ರ ಲೈಸೆನ್ಸ್ ಸಿಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.