Life Certificate For Pension: ಸರ್ಕಾರಿ ಕೆಲಸದಿಂದ ನಿವೃತ್ತಿಯಾಗಿ ಪಿಂಚಣಿ ಪಡೆಯುತ್ತಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ಸರ್ಕಾರದಿಂದ ಪ್ರತಿ ತಿಂಗಳು ಪಿಂಚಣಿಯಾಗಿ ನಿಗದಿತ ಮೊತ್ತವನ್ನು ನೀಡಲಾಗುತ್ತದೆ. ಪಿಂಚಣಿ ನಿರಂತರವಾಗಿ ಮುಂದುವರಿಯಬೇಕಾದರೆ ಜೀವನ ಪ್ರಮಾಣಪತ್ರವನ್ನು (Life Certificate For Pension) ಸಲ್ಲಿಸಬೇಕಾಗುತ್ತದೆ.  ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಪ್ರತಿ ವರ್ಷ ನವೆಂಬರ್ 1 ರಿಂದ ನವೆಂಬರ್ 30 ರವರೆಗೆ ಗಡುವು ನೀಡಲಾಗುತ್ತದೆ. ಪಿಂಚಣಿದಾರರು ಪಿಂಚಣಿ ಪಾವತಿ (PPO) ಸಂಖ್ಯೆಯನ್ನು ಹೊಂದಿರುವುದು ಬಹಳ ಮುಖ್ಯ. ಜೀವನ ಪ್ರಮಾಣಪತ್ರವನ್ನು ಸಲ್ಲಿಸಿದಾಗ, ನಿಮ್ಮ PPO ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

12 ಅಂಕಿಯ ವಿಶಿಷ್ಟ ಸಂಖ್ಯೆ PPO : 
ಒಂದು ವೇಳೆ ಪಿಪಿಒ ಸಂಖ್ಯೆಯಲ್ಲಿ ಒಂದು ಸಣ್ಣ ತಪ್ಪಾದರೂ  ಪಿಂಚಣಿ ನಿಂತು ಹೋಗುತ್ತದೆ. ಇದು ಪಿಂಚಣಿದಾರರಿಗೆ ಪಿಂಚಣಿ ಪಡೆಯಲು ಸಹಾಯ ಮಾಡುವ ವಿಶಿಷ್ಟ 12 ಅಂಕೆಗಳ ಸಂಖ್ಯೆಯಾಗಿದೆ. 12 ಸಂಖ್ಯೆಗಳ ಮೊದಲ 5 ಅಂಕೆಗಳು PPO ನೀಡುವ ಪ್ರಾಧಿಕಾರದ ಕೋಡ್ ಸಂಖ್ಯೆಗಳಾಗಿವೆ. ಆರನೇ ಮತ್ತು ಏಳನೇ ಸಂಖ್ಯೆಗಳು PPO ಅನ್ನು ನೀಡಿದ ವರ್ಷವನ್ನು ಸೂಚಿಸುತ್ತವೆ. ಇದರ ನಂತರ, ಎಂಟನೇ, ಒಂಬತ್ತನೇ, ಹತ್ತನೇ ಮತ್ತು ಹನ್ನೊಂದನೇ ಸಂಖ್ಯೆಗಳು PPO ಸಂಖ್ಯೆಯನ್ನು ಸೂಚಿಸುತ್ತವೆ. ಕೊನೆಯ ಹನ್ನೆರಡನೆಯ ಅಂಕೆಯು ಚೆಕ್ ಅಂಕೆಗಳನ್ನು ಪ್ರತಿನಿಧಿಸುತ್ತದೆ.


ಇದನ್ನೂ ಓದಿ : Indian Railways: ಪ್ರಯಾಣಿಕರು ರೈಲಿನಲ್ಲಿ ಬಿಟ್ಟು ಹೋದ ಬೆಲೆಬಾಳುವ ಲಗೇಜ್ ಅನ್ನು ರೈಲ್ವೆ ಏನು ಮಾಡುತ್ತೆ!


69 ಲಕ್ಷಕ್ಕೂ ಹೆಚ್ಚು ನಿವೃತ್ತ ಉದ್ಯೋಗಿಗಳಿಗೆ ಪಿಂಚಣಿ :
PPO ಎಂದರೆ ಕೇಂದ್ರ ಪಿಂಚಣಿ ಲೆಕ್ಕಪತ್ರ ಕಚೇರಿ (CPAO) ಗಾಗಿ ಸಂವಹನ ಉಲ್ಲೇಖ ಸಂಖ್ಯೆ. ಪ್ರಸ್ತುತ ಕೇಂದ್ರ ಸರ್ಕಾರದಿಂದ 69 ಲಕ್ಷಕ್ಕೂ ಹೆಚ್ಚು ನಿವೃತ್ತ ನೌಕರರಿಗೆ ಪಿಂಚಣಿ ನೀಡಲಾಗುತ್ತಿದೆ. ಜೀವನ ಪ್ರಮಾಣಪತ್ರವನ್ನು ಸಲ್ಲಿಸುವಾಗ, ಪಿಂಚಣಿದಾರರು ಹೆಸರು, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯ ಬಗ್ಗೆ ಮಾಹಿತಿಯನ್ನು ಒದಗಿಸುವುದು ಅವಶ್ಯಕ. ಇದಲ್ಲದೆ, ಸೆಲ್ಫ್ ಡಿಕ್ಲೇರ್ಡ್ ಜೊತೆಗೆ ಪಿಪಿಒ ಸಂಖ್ಯೆ, ಪಿಂಚಣಿ ಖಾತೆ ಸಂಖ್ಯೆ, ಬ್ಯಾಂಕ್ ಸಂಬಂಧಿತ ಮಾಹಿತಿ ಮತ್ತು ಪಿಂಚಣಿ ಮಂಜೂರಾತಿ ಪ್ರಾಧಿಕಾರದ ಹೆಸರನ್ನು ಕೂಡಾ ನೀಡಬೇಕಾಗುತ್ತದೆ. 


ಲೈಫ್ ಸರ್ಟಿಫಿಕೇಟ್ ಸಲ್ಲಿಸುವುದು ಸಾಧ್ಯವಾಗುವುದಿಲ್ಲ : 
ಒಂದು ವೇಳೆ ನಿಮ್ಮ ಬಳಿ 12 ಅಂಕಿಗಳ PPO ಸಂಖ್ಯೆ ಇಲ್ಲ ಎಂದಾದರೆ  ಲೈಫ್ ಸರ್ಟಿಫಿಕೇಟ್ ಸಲ್ಲಿಸುವುದು ಸಾಧ್ಯವಾಗುವುದಿಲ್ಲ. ಪಿಂಚಣಿದಾರನು PPO ಸಂಖ್ಯೆಯ ಮೂಲಕ ತನ್ನ ಪಿಂಚಣಿಯನ್ನು ಟ್ರ್ಯಾಕ್ ಮಾಡಬಹುದು. EPFO ಸದಸ್ಯ ಸೇವಾ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಪಿಂಚಣಿದಾರರಿಗೆ PPO ಸಂಖ್ಯೆ ಸಿಗುತ್ತದೆ.


ಇದನ್ನೂ ಓದಿ :5,100 ರೂಪಾಯಿಯಷ್ಟು ದುಬಾರಿಯಾದ ಬಂಗಾರ ! ಇನ್ನು ಚಿನ್ನ ಖರೀದಿ ಬರೀ ಕನಸು  


PPO ಸಂಖ್ಯೆಯನ್ನು ಹೀಗೆ ಕಂಡುಕೊಳ್ಳಬಹುದು : 
CPAO ವೆಬ್‌ಸೈಟ್ - www.cpao.nic.inನಲ್ಲಿ ನೋಂದಾಯಿಸಿದ ನಂತರ , ಲಾಗಿನ್ ಮತ್ತು ಪಾಸ್‌ವರ್ಡ್ ಮೂಲಕ CPAO ನಿಂದ PPO ನ ಪ್ರತಿಯನ್ನು ಡೌನ್‌ಲೋಡ್ ಮಾಡುವ ಅವಕಾಶವಿದೆ. ಇಪಿಎಫ್‌ಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ ಸಂಖ್ಯೆಯನ್ನು ಬಳಸಿಕೊಂಡು ಪಿಂಚಣಿದಾರರು ತಮ್ಮ ಪಿಎಫ್ ಸಂಖ್ಯೆಯನ್ನು ಸಹ ಕಂಡುಹಿಡಿಯಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.