CNG Price Update: ಕೇಂದ್ರ ಬಜೆಟ್ ಮಂಡನೆಯಾಗುವ ಮುನ್ನವೆ ಮಹಾನಗರ ಗ್ಯಾಸ್ ಲಿಮಿಟೆಡ್ ಕಾಂಪ್ರೆಸ್ದ್ ನ್ಯಾಚುರಲ್ ಗ್ಯಾಸ್ (ಸಿಎನ್ಜಿ) ಬೆಲೆಯಲ್ಲಿ ಇಳಿಕೆ ಮಾಡಿದೆ, ಇದು ಮಹಾರಾಷ್ಟ್ರದ ಜನರಿಗೆ ಹೆಚ್ಚಿನ ಪರಿಹಾರವನ್ನು ನೀಡಿದೆ. ಇದೇ ವೇಳೆ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಏವಿಯೇಷನ್ ​​ಟರ್ಬೈನ್ ಇಂಧನದ (ಎಟಿಎಫ್) ಬೆಲೆಯನ್ನು ಹೆಚ್ಚಿಸಿದ್ದು, ಬಜೆಟ್‌ಗೆ ಮುನ್ನ ವಿಮಾನಯಾನ ಕಂಪನಿಗಳಿಗೆ ಶಾಕ್ ನೀಡಿದೆ. ಎಟಿಎಫ್ ವಿಮಾನದ ಕಾರ್ಯಾಚರಣೆಗೆ ಬಳಸುವ ಪೆಟ್ರೋಲಿಯಂ ಆಧಾರಿತ ಇಂಧನವಾಗಿದೆ. ಎಟಿಎಫ್ ಬೆಲೆ ಏರಿಕೆಯಿಂದಾಗಿ ವಿಮಾನ ಪ್ರಯಾಣ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಇಲ್ಲಿ, ಮಹಾನಗರ ಗ್ಯಾಸ್ ಲಿಮಿಟೆಡ್ (ಎಂಜಿಎಲ್) ಸಿಎನ್‌ಜಿ ಬೆಲೆಯನ್ನು ಕಡಿತಗೊಳಿಸಿರುವುದು ಮುಂಬೈ ಮತ್ತು ಸುತ್ತಮುತ್ತಲಿನ ಲಕ್ಷಾಂತರ ಜನರಿಗೆ ಭಾರಿ ನೆಮ್ಮದಿಯನ್ನು ನೀಡಿದೆ. ಈ ಕುರಿತು ಮಾತನಾಡಿರುವ ಎಂಜಿಎಲ್ ಅಧಿಕಾರಿಯೊಬ್ಬರು , ಸಿಎನ್‌ಜಿ ಬೆಲೆಯನ್ನು ಕೆಜಿಗೆ 2.5 ರೂ ಇಳಿಕೆ ಮಾಡಲಾಗಿದೆ ಎಂದಿದ್ದಾರೆ.


ಈ ಬೆಲೆ ಇಳಿಕೆಯ ನಂತರ ಮುಂಬೈನಲ್ಲಿ ಸಿಎನ್‌ಜಿ ಬೆಲೆ ಕೆಜಿಗೆ 87 ರೂ.ಗೆ ಇಳಿದಿದೆ. ಈ ಹಿಂದೆ ಪ್ರತಿ ಕೆಜಿಗೆ 89.5 ರೂ. ಪಾವತಿಸಬೇಕಾಗುತ್ತಿತ್ತು . ಜನವರಿ 31 ರ ಮಧ್ಯರಾತ್ರಿಯಿಂದ ಸಿಎನ್‌ಜಿಯ ಹೊಸ ದರಗಳನ್ನು ಜಾರಿಗೆ ತರಲಾಗಿದೆ. ಮುಂಬೈನಲ್ಲಿ ಸಿಎನ್‌ಜಿ ಬೆಲೆ ಇದೀಗ ಪೆಟ್ರೋಲ್ ಬೆಲೆಗಿಂತ ಶೇಕಡಾ 44 ರಷ್ಟು ಕಡಿಮೆಯಾಗಿದೆ.


ಇದನ್ನೂ ಓದಿ-Budget 2023: ವಾಹನ ಖರೀದಿಸಬೇಕೆ? ಎರಡೇ ಎರಡು ದಿನ ವೇಟ್ ಮಾಡಿ, ಸಿಗಲಿದೆ ಈ ಸಂತಸದ ಸುದ್ದಿ!


ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಿಎನ್‌ಜಿ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಪ್ರತಿ ಕೆಜಿಗೆ 80 ರೂ.ನಿಂದ 86 ರೂ.ಗೆ ಏರಿಕೆಯಾಗಿತ್ತು. ಇದಾದ ಬಳಿಕ ಮತ್ತೆ ಬೆಲೆ ಏರಿಕೆಯಾಗಿದ್ದು, ಸಿಎನ್‌ಜಿ ಬೆಲೆ ಕೆಜಿಗೆ 89.50 ರೂ.ಗೆ ತಲುಪಿತ್ತು.


ಇದನ್ನೂ ಓದಿ-Budget 2023: ಬಜೆಟ್ ಮಂಡನೆಗೂ ಮುನ್ನ ಪಿಪಿಎಫ್ ಕುರಿತು ಮಹತ್ವದ ಅಪ್ಡೇಟ್ ಪ್ರಕಟ!


IOC ಹೆಚ್ಚಿಸಿದ ATF ನ ಹೊಸ ದರಗಳು ಇಂದಿನಿಂದ ಜಾರಿಗೆ ಬಂದಿವೆ. ಫೆಬ್ರವರಿ 1 ರಂದು ದೆಹಲಿಯಲ್ಲಿ ಎಟಿಎಫ್ ಬೆಲೆ ಪ್ರತಿ ಕೆಜಿಗೆ 108,138.77 ರೂ ಆಗಿದ್ದು, ಪ್ರತಿ ಕೆಜಿಗೆ 1,12,356.77 ರೂ.ಗೆ ಏರಿಕೆಯಾಗಿದೆ. ಇದೇ ವೇಳೆ, ಎಟಿಎಫ್ ಬೆಲೆ ಕೋಲ್ಕತ್ತಾದಲ್ಲಿ ಪ್ರತಿ ಕೆಜಿಗೆ 1,19,239.96 ರೂ.ಆಗಿದ್ದರೆ, ಮುಂಬೈನಲ್ಲಿ 1,11,246.61 ರೂ.ಗೆ ಮತ್ತು ಚೆನ್ನೈನಲ್ಲಿ ಕೆಜಿಗೆ 1,16,922.56 ರೂ.ಗೆ ಏರಿಕೆಯಾಗಿದೆ. ಜನವರಿ 1 ರಂದು ಎಟಿಎಫ್ ಬೆಲೆ ಮುಂಬೈನಲ್ಲಿ ಕೆಜಿಗೆ 107,084.11 ರೂ., ಕೋಲ್ಕತ್ತಾದಲ್ಲಿ ಕೆಜಿಗೆ 115,008.08 ಮತ್ತು ಚೆನ್ನೈನಲ್ಲಿ 112,540.95 ರೂ.ಗಳಷ್ಟಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.