PM Kisan Samman Nidhi ಗೆ ಅರ್ಹರಾಗಿರುವ ಕೋಟ್ಯಂತರ ರೈತರು 13ನೇ ಕಂತಿನ ಹಣ ಬಿಡುಗಡೆಗಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ. ವಾಸ್ತವದಲ್ಲಿ, ಸೆಪ್ಟೆಂಬರ್‌ನಲ್ಲಿ, ಪಿಎಂ ಕಿಸಾನ್‌ನ 12 ನೇ ಕಂತನ್ನು ಸರ್ಕಾರವು ರೈತರ ಖಾತೆಗೆ ವರ್ಗಾಯಿಸಿತ್ತು ಎಂಬುದು ಇಲ್ಲಿ ಗಮನಾರ್ಹ. 13ನೇ ಕಂತು ಡಿಸೆಂಬರ್ ಮತ್ತು ಮಾರ್ಚ್ ನಡುವೆ ಸಿಗಬೇಕಿದೆ. 13ನೇ ಕಂತಿನ ಹಣ ಜನವರಿ 26ರೊಳಗೆ ರೈತರ ಖಾತೆಗೆ ಬರಲಿದೆ ಎಂದು ಮೂಲಗಳು ಹೇಳಿವೆ. ಆದರೆ ಇದಕ್ಕೂ ಮುನ್ನವೇ ಬಿಹಾರದ ನಿತೀಶ್ ಸರ್ಕಾರ ರೈತರಿಗೆ ಭರ್ಜರಿ ಗಿಫ್ಟ್ ನೀಡಿದೆ. ಕಿಸಾನ್ ದಿವಸ್ ಸಂದರ್ಭದಲ್ಲಿ ರೈತರಿಗೆ ಸರ್ಕಾರ ಈ ಭಾರಿ ಉಡುಗೊರೆಯನ್ನು ಪ್ರಕಟಿಸಿದೆ.


COMMERCIAL BREAK
SCROLL TO CONTINUE READING

90ರಷ್ಟು ಸಹಾಯಧನ 
ರೈತರಿಗೆ ದೊಡ್ಡ ಉಡುಗೊರೆಯನ್ನು ಘೋಷಿಸಿದ ಬಿಹಾರ ಸರ್ಕಾರ, ಉತ್ತಮ ಗುಣಮಟ್ಟದ ಬೀಜಗಳ ಮೇಲೆ ಭಾರಿ ಸಬ್ಸಿಡಿ ನೀಡುವುದಾಗಿ ಹೇಳಿದೆ . ನಿತೀಶ್ ಸರ್ಕಾರವು 'ಮುಖ್ಯಮಂತ್ರಿಗಳ ತ್ವರಿತ ಬೀಜ ವಿತರಣೆ ಯೋಜನೆ' ಅಡಿಯಲ್ಲಿ ರೈತರಿಗೆ ಈ ಸೌಲಭ್ಯವನ್ನು ನೀಡುತ್ತಿದೆ. ಗುಣಮಟ್ಟದ ಬೀಜಗಳನ್ನು ರೈತರಿಂದ ರೈತರಿಗೆ ತಲುಪಿಸುವುದು ರಾಜ್ಯ ಕೃಷಿ ಇಲಾಖೆಯ ಉದ್ದೇಶವಾಗಿದೆ. ರೈತರಿಗೆ ಸರಕಾರದಿಂದ ಉತ್ತಮ ಗುಣಮಟ್ಟದ ಬೀಜಗಳ ಮೇಲೆ ಶೇ.90ರಷ್ಟು ಸಬ್ಸಿಡಿ ನೀಡಲಾಗುತ್ತಿದೆ.


ಟ್ವೀಟ್ ಮೂಲಕ ಮಾಹಿತಿ ನೀಡಲಾಗಿದೆ
ಯೋಜನೆಯ ಪ್ರಕಾರ, ಅರ್ಧ ಎಕರೆ ಭೂಮಿಗೆ ಭತ್ತ ಮತ್ತು ಗೋಧಿ ಬೀಜಗಳ ವೆಚ್ಚದಲ್ಲಿ ಪ್ರತಿ ಕೆಜಿಗೆ ಶೇ.90 ರಷ್ಟು ಅಥವಾ ಗರಿಷ್ಠ 40 ರೂ.ಗಳ ಸಹಾಯಧನವನ್ನು ನೀಡಲಾಗುತ್ತಿದೆ. ಇದೇ ವೇಳೆ, ಕಾಲು ಎಕರೆ ಜಮೀನಿನಲ್ಲಿ ದ್ವಿದಳ ಧಾನ್ಯಗಳ ಬೆಳೆಗೆ ಬೆಲೆಯ ಮೇಲೆ ಕೆಜಿಗೆ 108 ರೂ ಸಹಾಯಧನ ನೀಡುವ ಯೋಜನೆಯನ್ನು ಹೊಂದಲಾಗಿದೆ. ಈ ಮಾಹಿತಿಯನ್ನು ಬಿಹಾರ ಸರ್ಕಾರ ಟ್ವೀಟ್ ಮಾಡುವ ಮೂಲಕ ನೀಡಿದೆ.


ಇದನ್ನೂ ಓದಿ-Electric Bill: ಮನೆ ಮೇಲ್ಚಾವಣಿಯಲ್ಲಿ ಈ ಲೈಟಿಂಗ್ ವ್ಯವಸ್ಥೆ ಅಳವಡಿಸಿ ಉಚಿತವಾಗಿ ವಿದ್ಯುತ್ ಬಳಸಿ!


ಭತ್ತ ಮತ್ತು ಗೋಧಿ ಸಬ್ಸಿಡಿ ದರದಲ್ಲಿ ಸಿಗಲಿವೆ
ಮುಖ್ಯಮಂತ್ರಿ ತ್ವರಿತ ಬೀಜ ವಿತರಣೆ ಯೋಜನೆಯಡಿ ಆಯ್ಕೆಯಾದ ರೈತರಿಗೆ ಸಬ್ಸಿಡಿ ದರದಲ್ಲಿ ಭತ್ತ ಮತ್ತು ಗೋಧಿ ಬೀಜಗಳನ್ನು ಒದಗಿಸಲಾಗುವುದು ಎನ್ನಲಾಗಿದೆ. ಯೋಜನೆಯಲ್ಲಿ ರೈತರ ಆಯ್ಕೆಯನ್ನು ಅರ್ಹತೆಯ ಆಧಾರದ ಮೇಲೆ ನಡೆಸಲಾಗುವುದು ಎಂದೂ ಕೂಡ ಹೇಳಲಾಗಿದೆ. ನೀವು ಒಂದು ವೇಳೆ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ, ಮೊದಲು ನೀವು ಆನ್‌ಲೈನ್‌ನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು 18001801551 ಸಂಖ್ಯೆಗೆ ಕರೆ ಮಾಡುವ ಮೂಲಕ ಪಡೆದುಕೊಳ್ಳಬಹುದು.


ಇದನ್ನೂ ಓದಿ-Earn Money From Home: ಈ ಅಗ್ಗದ ಮಶೀನ್ ಬಳಸಿ ಮನೆಯಿಂದಲೇ ಲಕ್ಷಾಂತರ ಸಂಪಾದಿಸಿ

ನಿತೀಶ್ ಸರ್ಕಾರದ ಈ ಪ್ರಯೋಜನಕಾರಿ ಯೋಜನೆಯಲ್ಲಿ ಆಯ್ಕೆಯಾಗುವ ಯಾವುದೇ ರೈತಬಾಂಧವನಿಗೆ ಇದರಿಂದ ಎರಡು ರೀತಿಯಲ್ಲಿ ಲಾಭವಾಗಲಿದೆ. ಮೊದಲನೆಯದು ಪಿಎಂ ಕಿಸಾನ್ ಸಮಾನ್ ನಿಧಿ ರೂಪದಲ್ಲಿ ಮತ್ತು ಎರಡನೆಯದು ಬೀಜಗಳ ಮೇಲಿನ ಸಬ್ಸಿಡಿ ರೂಪದಲ್ಲಿ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.