Home Loan Rules : ಮನೆ ಖರೀದಿ ಬಹುತೇಕರ ಜೀವನದ ಬಹುದೊಡ್ಡ ಕನಸು. ಕೆಲವರು ಸಾಲ ಪಡೆಯದೆ ಸ್ವಂತ ಮನೆ ಕಟ್ಟಬಹುದು ಅಥವಾ ಖರೀದಿಸಬಹುದು. ಆದರೆ, ಬಹುತೇಕರ ಪಾಲಿಗೆ ಮನೆ ಖರೀದಿ ಕನಸು ಈಡೇರಿಸಿಕೊಳ್ಳಲು ಗೃಹಸಾಲ ಪಡೆಯುವುದು ಅನಿವಾರ್ಯ. 


COMMERCIAL BREAK
SCROLL TO CONTINUE READING

ಗೃಹಸಾಲಕ್ಕೆ ಅರ್ಜಿ ಸಲ್ಲಿಸುವ ಸಮಯದಿಂದ ಸಾಲ ಮರುಪಾವತಿಸುವವರೆಗೆ ಹತ್ತು ಹಲವು ಸಮಸ್ಯೆಗಳು, ಸವಾಲುಗಳು ಎದುರಾಗುತ್ತವೆ. ಇದಕ್ಕೆಲ್ಲ ಸಿದ್ಧವಾಗಿಯೇ ಸಾಲ ಪಡೆಯಲು ಮುಂದಾಗುವುದು ಒಳ್ಳೆಯದು.


ನೀವು ವಾಸಕ್ಕಾಗಿ ಮನೆ ಅಥವಾ ನಿವೇಶನ ಖರೀದಿಸುತ್ತಿದ್ದರೆ ಅದರ ಸ್ಥಳದ ಬಗ್ಗೆ ಗಮನ ಕೊಡಬೇಕು. ಆ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳು ಹೇಗಿವೆ? ನಿಮ್ಮ ಕೆಲಸದ ಸ್ಥಳದಿಂದ ಎಷ್ಟು ದೂರ ಇದೆ? ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಂಜರಿಕೆಯಿಲ್ಲದೇ ಓಡಾಡುವಷ್ಟು ಭದ್ರತಾ ವಾತಾವರಣ ಇದೆಯಾ.? ಆ ಪ್ರದೇಶ ಎಷ್ಟು ಅಭಿವೃದ್ಧಿಯಾಗಿದೆ? ಮುಂದಿನ ದಿನಗಳಲ್ಲಿ ಎಷ್ಟು ವೇಗದಲ್ಲಿ ಅಭಿವೃದ್ಧಿ ಆಗಬಹುದು? ಇವೆಲ್ಲವನ್ನೂ ನೀವು ಗಮನಿಸಬೇಕು. ಗೃಹಸಾಲ ಪಡೆದಾಗ ಕೇವಲ ಬಡ್ಡಿ ಮಾತ್ರ ಪಾವತಿಸಿದರೆ ಸಾಕು ಎಂಬ ಲೆಕ್ಕಾಚಾರ ಕೆಲವರದ್ದಾಗಿರುತ್ತದೆ. 


ಹೆಚ್ಚುವರಿ ಶುಲ್ಕ ಪಾವತಿಸಬೇಕು ಎಂದಾದಾಗ ಹೌಹಾರುತ್ತಾರೆ. ಗೃಹಸಾಲದ ವಿಚಾರಣೆಗೆ ಹೋದಾಗಲೇ ವಿವಿಧ ಶುಲ್ಕಗಳ ಬಗ್ಗೆಯೂ ಕೇಳಿ ತಿಳಿಯಬೇಕಾದದು ಅಗತ್ಯ. ಮುಖ್ಯವಾಗಿ ವಿವಿಧ ಮರೆಮಾಚಿದ ಶುಲ್ಕಗಳು ಇರುತ್ತವೆ. ಈ ಬಗ್ಗೆ ಬಿಡಿಸಿ ಕೇಳಿ ಮಾಹಿತಿ ಪಡೆದುಕೊಳ್ಳಬೇಕು. 


ಇದನ್ನೂ ಓದಿ-ನೀವೂ ಅತಿ ಹೆಚ್ಚು ಆನ್ಲೈನ್ ಶಾಪಿಂಗ್ ಮಾಡುತ್ತೀರಾ? ಹಾಗಾದ್ರೆ ಈ ಸುದ್ದಿ ತಪ್ಪದೆ ಓದಿ!


ಸಂಸ್ಕರಣಾ ಶುಲ್ಕ, ಕಾನೂನು ಶುಲ್ಕಗಳು, ದಾಖಲೆಗಳಿಗೆ ಸಂಬಂಧಪಟ್ಟ ಶುಲ್ಕಗಳು, ಆಸ್ತಿ ಮೌಲ್ಯಮಾಪನ ಶುಲ್ಕ ಸೇರಿದಂತೆ ಹತ್ತು ಹಲವು ಶುಲ್ಕಗಳನ್ನು ಬ್ಯಾಂಕ್‌ಗಳು ವಿಧಿಸುತ್ತವೆ. ಸಾಲದ ಇಎಂಐ ಕಟ್ಟಲು ಆರಂಭಿಸಿದ ಬಳಿಕ ರಿಫೈನಾನ್ಸ್‌ ವೆಚ್ಚ, ತಡವಾಗಿ ಪಾವತಿಸಿರುವುದಕ್ಕೆ ಶುಲ್ಕ ಇತ್ಯಾದಿಗಳನ್ನೂ ಪಾವತಿಸಬೇಕಾಗುತ್ತದೆ. ಇವು ಕಡಿಮೆ ಪ್ರಮಾಣದ ವೆಚ್ಚಗಳಾಗಿದ್ದರೂ ನಿಮಗೆ ಮಾಹಿತಿ ಇದ್ದರೆ ಗೊಂದಲವಾಗದು.


ಬೆಂಗಳೂರಿನಲ್ಲಿ ಮನೆಯೊಂದನ್ನು ಖರೀದಿಸಬೇಕೆಂದರೆ ಏನಿಲ್ಲವೆಂದರೂ 25 ಲಕ್ಷ ರೂನಿಂದ ಆರಂಭವಾಗುತ್ತದೆ. ನೀವು ಹೋಮ್ ಲೋನ್ ಪಡೆಯುವುದು ಅನಿವಾರ್ಯವಾಗುತ್ತದೆ. ಸಾಮಾನ್ಯವಾಗಿ ಮನೆ ಖರೀದಿ ವೆಚ್ಚದಲ್ಲಿ ಶೇ. 80ರಷ್ಟರವರೆಗೂ ಬ್ಯಾಂಕುಗಳು ಸಾಲ ಕೊಡುತ್ತವೆ. 


ಕೆಲ ಸಂದರ್ಭಗಳಲ್ಲಿ ಬ್ಯಾಂಕುಗಳು ಕಡಿಮೆ ಮೊತ್ತದ ಸಾಲ ಮಾತ್ರ ನೀಡಬಹುದು. ಹೀಗಾಗಿ ನೀವು ವಿವಿಧ ಬ್ಯಾಂಕುಗಳಿಗೆ ಹೋಗಿ ವಿಚಾರಿಸಬಹುದು. ನಿಮಗೆ ಗರಿಷ್ಠ ಎಷ್ಟು ಸಾಲ ಸಿಗಬಹುದು ಎಂಬುದರ ಮೇಲೆ ನಿಮ್ಮ ಬಜೆಟ್‌ನಲ್ಲಿ ಮನೆ ಹುಡುಕಾಟ ನಡೆಸಬಹುದು. ಮನೆ ಮೇಲೆ ನೀವು ಸಾಲ ಪಡೆದು ಅದನ್ನು ವಿನಿಯೋಗಿಸುತ್ತೀರಿ. 


ಆದರೆ, ಇದಲ್ಲದೇ ಇನ್ನೂ ಕೆಲ ಹೆಚ್ಚುವರಿ ವೆಚ್ಚಗಳು ಮನೆ ಖರೀದಿಯಲ್ಲಿ ಇರುತ್ತವೆ. ಪ್ರಾಪರ್ಟಿ ರಿಜಿಸ್ಟ್ರೇಶನ್, ಮೈಂಟೆನೆನ್ಸ್ ಇತ್ಯಾದಿ ವೆಚ್ಚಗಳಿಗೆ ನಿಮ್ಮ ಬಳಿ ಹಣ ಸಾಲದಾಗಿ ಹೋಗಬಹುದು. ಆದ್ದರಿಂದ ಮೊದಲೇ ಎಲ್ಲವನ್ನೂ ಲೆಕ್ಕ ಹಾಕಿ ಹಣಕಾಸು ವ್ಯವಸ್ಥೆ ಮಾಡಿಕೊಳ್ಳಿ.


ಇದನ್ನೂ ಓದಿ-ರೈತರ ಆದಾಯ ಹೆಚ್ಚಿಸಲು ಸರ್ಕಾರ ಕೈಗೊಂಡಿದೆ ಈ ಕ್ರಮ, ಈ ಕೆಲಸಕ್ಕೆ ಸಿಗಲಿದೆ 2.5 ಲಕ್ಷ ರೂ.ಗಳು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ