ನವದೆಹಲಿ : PM Kisan Latest Update : ಕೇಂದ್ರ ಸರ್ಕಾರ ಇತ್ತೀಚೆಗೆ ತನ್ನ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಕಿಸಾನ್ (PM Kisan) ಯೋಜನೆಯಡಿ 9 ನೇ ಕಂತನ್ನು ಬಿಡುಗಡೆ ಮಾಡಿದೆ. ದೇಶದ ಕೋಟ್ಯಂತರ ರೈತರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಡಿ, ರೈತರು ಆರ್ಥಿಕ ಸಹಾಯವನ್ನು ಪಡೆಯುತ್ತಾರೆ. ಅಲ್ಲದೆ,   ಕೈಗೆಟುಕುವ ದರದಲ್ಲಿ ಸಾಲ ಸೌಲಭ್ಯ ಕೂಡಾ ಸಿಗಲಿದೆ. 


COMMERCIAL BREAK
SCROLL TO CONTINUE READING

 ಪಿಎಂ ಕಿಸಾನ್ ಸಮ್ಮಾನ್ ಯೋಜನೆ (PM Kisan Samman Nidhi) ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit card) ಯೋಜನೆಯನ್ನು ಸ್ವಾವಲಂಬಿ ಭಾರತ ಯೋಜನೆಯಡಿ ಲಿಂಕ್ ಮಾಡಲಾಗಿದೆ. ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ, ಸರ್ಕಾರವು ರೈತರಿಗೆ ಕೈಗೆಟಕುವ ದರದಲ್ಲಿ ಸಾಲವನ್ನು ನೀಡುತ್ತಿದೆ. 


ಇದನ್ನೂ  ಓದಿ : ನಿಮ್ಮ ಬಳಿ 5 ಮತ್ತು 10 ರೂ. ನಾಣ್ಯಗಳಿದ್ದರೆ 10 ಲಕ್ಷ ಗಳಿಸಬಹುದು: ಮಾಹಿತಿ ಇಲ್ಲಿದೆ ನೋಡಿ…


ಈ ಸಾಲದ ಮೇಲಿನ ಬಡ್ಡಿ ದರ ತೀರ ಕಡಿಮೆ : 
ಬೆಳೆಗಳನ್ನು ಬಿತ್ತನೆ ಮಾಡಲು ರೈತರು ಬ್ಯಾಂಕುಗಳಿಂದ ಕಡಿಮೆ ಬಡ್ಡಿದರದಲ್ಲಿ (Interest rate) ಸಾಲ ಪಡೆಯಬಹುದು. ಈ ಸಾಲವನ್ನು ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit card) ಮೂಲಕ ಮಾತ್ರ ನೀಡಲಾಗುತ್ತದೆ. ಈ ಯೋಜನೆಯಡಿಯಲ್ಲಿ, ಯಾಉದೆ ಗ್ಯಾರಂಟಿ ಇಲ್ಲದೆ, ರೈತರು, 3 ಲಕ್ಷದವರೆಗೆ ಸಾಲವನ್ನು ಪಡೆಯಬಹುದು.  3-5 ಲಕ್ಷ ರೂ.ಗಳ ಅಲ್ಪಾವಧಿ ಸಾಲಗಳನ್ನು ಕೇವಲ 4 ಶೇಕಡಾ ಬಡ್ಡಿದರದಲ್ಲಿ ನೀಡಲಾಗುತ್ತದೆ.


ಸರ್ಕಾರವು ಈ ಸಾಲದ ಮೇಲೆ 2 ಪ್ರತಿಶತದಷ್ಟು ಸಬ್ಸಿಡಿಯನ್ನು ನೀಡುತ್ತದೆ. ಇನ್ನು ಸಮಯಕ್ಕೆ ಸರಿಯಾಗಿ, ಮರುಪಾವತಿ ಮಾಡಿದರೆ,  3 ಶೇಕಡಾ ರಿಯಾಯಿತಿ ನೀಡಲಾಗುತ್ತದೆ. ಈ ರೀತಿಯಾಗಿ, ಈ ಸಾಲದ (loan) ಮೇಲೆ ಕೇವಲ 4 ಶೇ ಬಡ್ಡಿ ವಿಧಿಸಲಾಗುತ್ತದೆ. ಆದರೆ ಸಾಲ ಮರುಪಾವತಿಯಲಿ ವಿಳಂಬವಾದರೆ, ಸಾಲದ ಬಡ್ಡಿ ದರವು 7 ಪ್ರತಿಶತದಷ್ಟು ಇರುತ್ತದೆ.


ಇದನ್ನೂ ಓದಿ :  Today Petrol-Diesel Price : ವಾಹನ ಸವಾರರಿಗೆ ಸಿಹಿ ಸುದ್ದಿ : ಭಾನುವಾರ ಇಳಿಕೆಯಾದ ಪೆಟ್ರೋಲ್-ಡೀಸೆಲ್ ಬೆಲೆ


ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಿಸುವುದು ಹೇಗೆ ?
1. ಕಿಸಾನ್ ಕ್ರೆಡಿಟ್ ಕಾರ್ಡ್ ತಯಾರಿಸಲು, ಮೊದಲು  ಗ್ರಾಮ ಲೆಕ್ಕಾಧಿಕಾರಿಯನ್ನು ಭೇಟಿ ಮಾಡಬೇಕು.
2. ಈಗ ಅವರಿಂದ ನಿಮ್ಮ ಭೂಮಿಯ ಖಾತೆಯನ್ನು ಪಡೆಯಿರಿ.
3. ಇದರ ನಂತರ, ಯಾವುದೇ ಬ್ಯಾಂಕಿಗೆ (Bank) ಹೋಗಿ ಮ್ಯಾನೇಜರ್ ಅನ್ನು ಭೇಟಿ ಮಾಡಿ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಲು ಅರ್ಜಿ ಸಲ್ಲಿಸಿ 
4. ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಯಾವುದೇ ಗ್ರಾಮೀಣ ಬ್ಯಾಂಕಿನಿಂದ ತಯಾರಿಸಿದರೆ, ಅದರಲ್ಲಿ ಸರ್ಕಾರವು ಪ್ರೋತ್ಸಾಹಧನ ಇತ್ಯಾದಿಗಳನ್ನು ನೀಡುವುದರಿಂದ ರೈತರಿಗೆ ಅನುಕೂಲವಾಗುತ್ತದೆ.
5. ಇದಾದ ನಂತರ ಬ್ಯಾಂಕ್ ಮ್ಯಾನೇಜರ್ ನಿಮ್ಮನ್ನು ವಕೀಲರ ಬಳಿಗೆ ಕಳುಹಿಸುತ್ತಾರೆ. ಅಲ್ಲಿ ಅಗತ್ಯ ಮಾಹಿತಿಯನ್ನು ಪಡೆದು ಳ್ಳುತ್ತಾರೆ.
6. ಇದರ ನಂತರ ನೀವು ಬ್ಯಾಂಕಿಗೆ ಹೋಗಿ ಒಂದು ಫಾರಂ ಭರ್ತಿ ಮಾಡಬೇಕು.
7. ಇದರೊಂದಿಗೆ ಕೆಲವು ಪೇಪರ್ವರ್ಕ್ ಇರುತ್ತದೆ. ಇದನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ರಚಿಸಲಾಗುತ್ತದೆ.
8. ಇಲ್ಲಿ ನಿಮಗೆ ಎಷ್ಟು ಸಾಲ ಸಿಗುತ್ತದೆ ಎನ್ನುವುದು ನೀವು ಎಷ್ಟು ಭೂಮಿ ಹೊಂದಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.