EPFO: ಫಾರ್ಮ್ 10C, 10Dಯ ಪ್ರಯೋಜನಗಳೇನು? ಇಪಿಎಫ್ಒ ಸದಸ್ಯರು ಇದನ್ನು ತಿಳಿದಿರಲೇಬೇಕು!
EPFO: ಇಪಿಎಫ್ಒ ಸದಸ್ಯರು ಇಪಿಎಫ್‌ಒನಿಂದ ಪಿಂಚಣಿ ಪಡೆಯಲು ಅಥವಾ ಇಪಿಎಸ್‌ನಲ್ಲಿ ಠೇವಣಿ ಮಾಡಿದ ಮೊತ್ತದ ಪೂರ್ಣ ಮತ್ತು ಅಂತಿಮ ಪರಿಹಾರಕ್ಕಾಗಿ ಎರಡು ಫಾರ್ಮ್ ಗಳನ್ನು ಭರ್ತಿ ಮಾಡಬೇಕಾಗುತ್ತದೆ. ಅದುವೇ ಫಾರ್ಮ್ 10ಸಿ ಮತ್ತು ಫಾರ್ಮ್ 10ಡಿ. ಇವುಗಳನ್ನು ಯಾವ ಸಂದರ್ಭದಲ್ಲಿ ಬಳಸಬೇಕು? ಇದರ ಪ್ರಯೋಜನಗಳೇನು ಎಂದು ತಿಳಿಯಿರಿ.
EPFO: ಉದ್ಯೋಗಸ್ಥರ ಭವಿಷ್ಯವನ್ನು ಭದ್ರಪಡಿಸಲು ಸಂಬಲದ ಸ್ವಲ್ಪ ಹಣವನ್ನು ಇಪಿಎಫ್ಒದಲ್ಲಿ ಹೂಡಿಕೆ ಮಾಡಲಾಗುತ್ತದೆ. ಈ ನಿಧಿಯು ಉದ್ಯೋಗಸ್ಥರ ಮತ್ತು ಉದ್ಯೋಗದಾತರ ಕೊಡುಗೆಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಒಂದು ಭಾಗ ಇಪಿಎಫ್ ಖಾತೆಗೆ ಹೋದರೆ ಇನ್ನೊಂದು ಭಾಗ ಇಪಿಎಸ್‌ಗೆ ಜಮಾ ಆಗುತ್ತದೆ. ತುರ್ತು ಸಂದರ್ಭಗಳಲ್ಲಿ ಇಪಿಎಫ್ಒ ಖಾತೆದಾರರು ಇಪಿಎಫ್ ನಿಂದ ಭಾಗಶಃ ಹಣವನ್ನು ಹಿಂಪಡೆಯಬಹುದು. ಅದೇ ಸಮಯದಲ್ಲಿ ಯಾವುದೇ ಒಬ್ಬ ವ್ಯಕ್ತಿ ನಿರಂತರ ಎರಡು ತಿಂಗಳವರೆಗೆ ನಿರುದ್ಯೋಗಿ ಆಗಿದ್ದಲ್ಲಿ ಉಳಿದ ಹಣವನ್ನು ಸಹ ಹಿಂಪಡೆಯಬಹುದು.
ಇಪಿಎಸ್‌ನಲ್ಲಿ ವರ್ಷದಿಂದ ವರ್ಷಕ್ಕೆ ಠೇವಣಿ ಇಡುವ ಮೊತ್ತವನ್ನು ಹಿಂಪಡೆಯಲು ಕೆಲವು ನಿಯಮಗಳನ್ನು ರೂಪಿಸಲಾಗಿದೆ. ಇಪಿಎಸ್ ಖಾತೆಯಲ್ಲಿ ಉದ್ಯೋಗಿಯ ಕೊಡುಗೆ 10 ವರ್ಷಗಳನ್ನು ಪೂರೈಸಿದ್ದರೆ ನಿವೃತ್ತಿಯ ನಂತರ ಇಪಿಎಫ್‌ಒನಿಂದ ಪಿಂಚಣಿ ಪಡೆಯಲು ಅವರು ಅರ್ಹರಾಗುತ್ತಾರೆ. ಆದರೆ ಕೊಡುಗೆಯು 10 ವರ್ಷಗಳಿಗಿಂತ ಕಡಿಮೆಯಿದ್ದರೆ ಅವನು
ನಿರಂತರ ಎರಡು ತಿಂಗಳವರೆಗೆ ನಿರುದ್ಯೋಗಿ ಆಗಿದ್ದಲ್ಲಿ ಪೂರ್ಣ ಮತ್ತು ಅಂತಿಮ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಹಣಕ್ಕಾಗಿ ಫಾರ್ಮ್ 10 ಸಿ ಮತ್ತು ಫಾರ್ಮ್ 10 ಡಿ ಅಗತ್ಯವಿದೆ. ಹಾಗಾಗಿ, ಇವೆರಡರಲ್ಲಿ ಯಾವ ಫಾರ್ಮ್ ಯಾವಾಗ ಉಪಯುಕ್ತ ಎಂದು ತಿಳಿದಿರುವುದು ಬಹಳ ಅಗತ್ಯ.
ಏನಿದು ಇಪಿಎಫ್ ಫಾರ್ಮ್ 10ಸಿ? ಇದರ ಉಪಯೋಗಗಳೇನು?
ಇಪಿಎಫ್ಒ ನಿಯಮಾನುಸಾರ, ಯಾವುದೇ ಉದ್ಯೋಗಿಯ ಉದ್ಯೋಗದ ಅವಧಿಯು 10 ವರ್ಷಗಳಿಗಿಂತ ಕಡಿಮೆ ಇದ್ದಲ್ಲಿ ಆತ ನಿರುದ್ಯೋಗದ ಸಂದರ್ಭದಲ್ಲಿ ತನ್ನ ಇಪಿಎಫ್ ನ ಹಣದ ಸಂಪೂರ್ಣ ಹಣವನ್ನು ಬಯಸಿದರೆ ಅಂತಹ ಪರಿಸ್ಥಿತಿಯಲ್ಲಿ, ಅವರು ಫಾರ್ಮ್ 10 ಸಿ ಅನ್ನು ಭರ್ತಿ ಮಾಡಬೇಕಾಗುತ್ತದೆ. ಮಾತ್ರವಲ್ಲ, ಈ ಇಪಿಎಫ್ ಫಾರ್ಮ್ 10ಸಿ ಅನ್ನು ಪಿಂಚಣಿ ಯೋಜನೆ ಪ್ರಮಾಣಪತ್ರವನ್ನು ಪಡೆಯಲು ಸಹ ಬಳಸಲಾಗುತ್ತದೆ. ಇದರ ಮೂಲಕ ನಿಮ್ಮ ಪಿಎಫ್ ಬ್ಯಾಲೆನ್ಸ್ ಹಣವನ್ನು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ವರ್ಗಾಯಿಸಬಹುದು.
ಇದನ್ನೂ ಓದಿ- Credit Card: ಕ್ರೆಡಿಟ್ ಕಾರ್ಡ್ ಹಣಕಾಸು ಉಳಿತಾಯಕ್ಕೆ ಮಾರ್ಗವಾಗಿದೆ ಗೊತ್ತೇ??
ಇಪಿಎಫ್ ಫಾರ್ಮ್ 10ಡಿ ಉಪಯೋಗವೇನು?
ಯಾವುದೇ ಒಬ್ಬ ವ್ಯಕ್ತಿ ಇಪಿಎಫ್ ಖಾತೆಯಲ್ಲಿ 10 ವರ್ಷಗಳವರೆಗೆ ಕೊಡುಗೆ ನೀಡಿದ್ದರೆ ನಿವೃತ್ತಿಯ ನಂತರ ಅವನು ಇಪಿಎಫ್‌ಒನಿಂದ ಪಿಂಚಣಿ ಪಡೆಯಲು ಅರ್ಹನಾಗಿರುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ನಿವೃತ್ತಿಯ ನಂತರ ಪಿಂಚಣಿ ಪ್ರಯೋಜನಗಳನ್ನು ಪಡೆಯಲು, ಅವರು ಫಾರ್ಮ್ 10ಡಿ ಅನ್ನು ಭರ್ತಿ ಮಾಡಬೇಕು. ಇದಲ್ಲದೆ, ಒಬ್ಬ ವ್ಯಕ್ತಿಯು ಇಪಿಎಫ್‌ಒನಿಂದ ಪಿಂಚಣಿ ಪಡೆಯಲು ಅರ್ಹರಾಗಿದ್ದರೆ, ಅವರು ಫಾರ್ಮ್ 10 ಡಿ ಅನ್ನು ಭರ್ತಿ ಮಾಡಬೇಕಾಗುತ್ತದೆ.
ಇಪಿಎಫ್ಒದಲ್ಲಿ ಫಾರ್ಮ್ 10ಸಿ, ಫಾರ್ಮ್ 10ಡಿ ಮಾತ್ರವಲ್ಲದೆ, ಫಾರ್ಮ್ 31 ಮತ್ತು ಫಾರ್ಮ್ 19 ಕೂಡ ಇವೆ. ಇವುಗಳನ್ನು ಯಾವಾಗ ಬಳಸಬೇಕು? ಇದರ ಉಪಯೋಗಗಳೇನು ಎಂದು ನೋಡುವುದಾದರೆ...
ನೀವು ನೌಕರಿ ಮಾಡುವ ಸಮಯದಲ್ಲಿ ಹಣಕ್ಕೆ ಸಂಬಂಧಿಸಿದ ಅಗತ್ಯಗಳನ್ನು ಪೂರೈಸಲು ನಿಮ್ಮ ಪಿಎಫ್ ಬ್ಯಾಲೆನ್ಸ್ ಅಥವಾ ಅಡ್ವಾನ್ಸ್ ಪಿಎಫ್ ನ ಕೆಲವು ಭಾಗವನ್ನು ನೀವು ಹಿಂತೆಗೆದುಕೊಳ್ಳಬಹುದು. ಇದಕ್ಕೆ, ಫಾರ್ಮ್ 31 ಅಗತ್ಯವಿರುತ್ತದೆ. ಇದನ್ನು ಇಪಿಎಫ್ ಕ್ಲೈಮ್ ಫಾರ್ಮ್ 31 ಎಂದೂ ಕರೆಯುತ್ತಾರೆ.
ಇದನ್ನೂ ಓದಿ- FASTAG ಗೆ ಫುಲ್ ಸ್ಟಾಪ್.. ಟೋಲ್ ಗೇಟ್ ಗಳಲ್ಲಿ ಹೊಸ ವ್ಯವಸ್ಥೆ, ಈ ರೀತಿ ಹಣ ಪಾವತಿ..!
ಅಗತ್ಯಕ್ಕೆ ಅನುಗುಣವಾಗಿ ಹಿಂತೆಗೆದುಕೊಳ್ಳುವ ನಿಯಮಗಳು ಬದಲಾಗುತ್ತವೆ. ನೀವು ಸಂಪೂರ್ಣ ಇಪಿಎಫ್ ನಿಧಿಯನ್ನು ಹಿಂತೆಗೆದುಕೊಳ್ಳಬೇಕಾದರೆ, ಇದಕ್ಕಾಗಿ ಫಾರ್ಮ್ 19 ಅನ್ನು ಬಳಸುತ್ತೀರಿ. ಇದನ್ನು ಇಪಿಎಫ್ ಕ್ಲೈಮ್ ಫಾರ್ಮ್ 19 ಎಂದೂ ಕರೆಯಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.