How To Make Yor Investment Double - ಪ್ರತಿ ಬಾರಿ ಯಾವುದೇ ಒಂದು ನೀವು ಸ್ಕೀಮ್‌ನಲ್ಲಿ ಹೂಡಿಕೆ ಮಾಡುವಾಗ, ನಿಮ್ಮ ಹಣ (Money) ದ್ವಿಗುಣಗೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನೀವು ಊಹಿಸಬಹುದು. ನೀವು ನಿಮ್ಮ ಹಣವನ್ನು ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡಿದರೆ, ಅದು ಸರಿಯಾದ ರೀತಿಯಲ್ಲಿ ಬೆಳೆಯುತ್ತದೆ. ಸಂಯುಕ್ತ ಬಡ್ಡಿಯಿಂದಾಗಿ ಇದು ದ್ವಿಗುಣ ಅಥವಾ ಮೂರು ಪಟ್ಟು ಹೆಚ್ಚಾಗಬಹುದು. ಆದರೆ ವಾಸ್ತವದಲ್ಲಿ ಇದಕ್ಕೆ ಎಷ್ಟು ಸಮಯಾವಕಾಶ ಬೇಕಾಗುತ್ತದೆ? ಎಂಬುದರ ಕುರಿತು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಹಣ ಎರಡು ಪಟ್ಟು ಅಥವಾ ಮೂರು ಪಟ್ಟು ಹೆಚ್ಚಾಗುವುದರ ನಿಖರ ಮಾಹಿತಿ ತಿಳಿಯುವುದಿಲ್ಲ ಎಂಬುದು ನಿಜ. ಆದರೆ, ಇದು ಯಾವುದೇ ಒಂದು ಹೂಡಿಕೆಯಿಂದ (Bank FD) ನಿಮಗೆ ಬರುವ ಆದಾಯದ ಒಂದು ನಿಶ್ಚಿತ ಐಡಿಯಾ ನೀಡಬಲ್ಲದು. ಇದಕ್ಕಾಗಿ ಒಂದು ಸರಳ ನಿಯಮವಿದ್ದು, ಈ ನಿಯಮ ನಿಮಗೆ ನಿಮ್ಮ ಹಣ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದನ್ನು ಹೇಳಲಿದೆ. ಈ ನಿಯಮವನ್ನು ರೂ. ಆಫ್ 72 ಅಥವಾ ರೂಲ್ ಆಫ್ 114 ಎಂದು ಕರೆಯುತ್ತಾರೆ. ಹೂಡಿಕೆಗೆ ಸಂಬಂಧಿಸಿದ ನಿರ್ಣಯಗಳನ್ನೂ ತೆಗೆದುಕೊಳ್ಳಲು ತುಂಬಾ ವಿವೇಚನೆಯಿಂದ ಇವುಗಳ ಬಳಕೆಯನ್ನು ನೀವು ಮಾಡಬಹುದು


ರೂಲ್ ಆಫ್ 72 ಅಂದರೇನು?
ಈ ನಿಯಮ ನಿಮ್ಮ ಹೂಡಿಕೆ ಎಷ್ಟು ಅವಧಿಯಲ್ಲಿ ಡಬಲ್ (Double Money) ಆಗಲಿದೆ ಎಂಬುದರ ಕುರಿತು ಹೇಳುತ್ತದೆ.  ಇದರ ಫಾರ್ಮುಲಾ ತುಂಬಾ ಸಿಂಪಲ್ ಆಗಿದೆ. ಹೂಡಿಕೆಯ (Mutual Funds) ಹಣ ಎಷ್ಟು ಅವಧಿಯಲ್ಲಿ ಡಬಲ್ ಆಗಲಿದೆ ತಿಳಿದುಕೊಳ್ಳಲು ಯೋಜನೆಯ ಬಡ್ಡಿದರವನ್ನು 72 ರಿಂದ ಭಾಗಿಸಿ. ಏಕೆಂದರೆ ಆದಾಯದ ಒಂದು ನಿಶ್ಚಿತ ದರವಿರಬೇಕು.


ಉದಾಹರಣೆಗಾಗಿ- ಈ ತಿಂಗಳು ನೀವು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PF) ನಲ್ಲಿ 50,000 ಹೂಡಿಕೆ ಮಾಡಲು ಯೋಜನೆ ರೂಪಿಸಿದ್ದರೆ, ಕೇಂದ್ರ ಸರ್ಕಾರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕಾಗಿ ಶೇ.7.1ರಷ್ಟು ಬಡ್ಡಿ ದರ ನಿಗದಿಪಡಿಸಿದೆ. ಈಗ ನಿಮ್ಮ ಹೂಡಿಕೆಯ ರೂ.50,000 ರೂ. ಗಳು 1 ಲಕ್ಷ ರೂಗಳಿಗೆ ಬೆಳೆಯಲು ಬೇಕಾಗುವ ಸಮಯ ತಿಳಿದುಕೊಳ್ಳಲು 72ನ್ನು ಬಡ್ಡಿ ದರದಿಂದ ಭಾಗಿಸಿ. ಅಂದರೆ 72/7.1 = 10.14 ಎಂದರ್ಥ. ಹೀಗಿರುವಾಗ ಶೇ.7.1 ರಷ್ಟು ಬಡ್ಡಿದರ ನಿರಂತರ ಉಳಿದರೆ, ನಿಮ್ಮ ಹಣ 10.14 ವರ್ಷಗಳಲ್ಲಿ ಡಬಲ್ ಆಗಲಿದೆ ಎಂದರ್ಥ.


ನಿಮ್ಮ ಹಣವನ್ನು ಮೂರುಪಟ್ಟು ಹೇಗೆ ಮಾಡಬೇಕು?
ಈಗ ಒಂದು ವೇಳೆ ನಿಮ್ಮ ಹೂಡಿಕೆ ಮೂರು ಪಟ್ಟು ಆಗಲು ಎಷ್ಟು ಕಾಲಾವಕಾಶ ಬೇಕಾಗುತ್ತದೆ ಎಂಬುದನ್ನು ತಿಳಿಯಲು ಉತ್ಸುಕರಾಗಿದ್ದರೆ ಕೇಳಿ... ಅದಕ್ಕಾಗಿ  ನೀವು 114 ನಿಯಮ ಉಪಯೋಗಿಸಬೇಕು. ಇದೂ ಕೂಡ 72 ನಿಯಮದ ರೀತಿಯಲ್ಲೇ ಕೆಲಸ ಮಾಡುತ್ತದೆ. ಹೂಡಿಕೆಯ ಮೂರು ಪಟ್ಟು ಮಾಡಲು ಬೇಕಾಗುವ ಸಮಯವನ್ನು ತಿಳಿಯಲು, 114 ಅನ್ನು ನೀವು ಬಡ್ಡಿದಾರದಿಂದ ಭಾಗಿಸಬೇಕು. 114/7.1=16.5 ಅಂದರೆ, 16.5 ವರ್ಷಗಳಲ್ಲಿ ನೀವೂ ಮಾಡಿರುವ 50 ಸಾವಿರ ಹೂಡಿಕೆ 1, 50,000 ಆಗಲಿದೆ.


ಇದನ್ನೂ ಓದಿ-FD Interest Rates : ಎಫ್‌ಡಿಗೆ ಅತಿ ಹೆಚ್ಚು ಬಡ್ಡಿ ನೀಡುತ್ತಿವೆ ಈ 5 ಬ್ಯಾಂಕ್‌ಗಳು!


ವಾರ್ಷಿಕ ರಿಟರ್ನ್ ಮೇಲೆಯೇ ಈ ನಿಯಮ ಅನ್ವಯಿಸುತ್ತದೆ
72 ರ ನಿಯಮವು ವಾರ್ಷಿಕ ಆದಾಯವನ್ನು ಆಧರಿಸಿದೆ ಎಂಬುದನ್ನು ಗಮನಿಸಬೇಕು. ವಾರ್ಷಿಕ ರಿಟರ್ನ್ಸ್‌ನೊಂದಿಗೆ ಎಲ್ಲಾ ರೀತಿಯ ಅವಧಿಗಳಿಗೆ ಇದನ್ನು ಅನ್ವಯಿಸಬಹುದು. ನಿಮ್ಮ ತ್ರೈಮಾಸಿಕ ಅಥವಾ ಅರ್ಧ-ವರ್ಷದ ಸಂಯುಕ್ತ ಆದಾಯವನ್ನು ಲೆಕ್ಕಹಾಕಲು ನೀವು ಈ ನಿಯಮವನ್ನು ಅನ್ವಯಿಸಿದರೆ, ಅದು ನಿಮಗೆ ನಿಖರವಾದ ಅಂಕಿಅಂಶಗಳನ್ನು ನೀಡುವುದಿಲ್ಲ ನೆನಪಿರಲಿ.


ಇದನ್ನೂ ಓದಿ-Credit Card ಬಳಕೆದಾರರ ಗಮನಕ್ಕೆ : ಆದಷ್ಟು ಬೇಗ ಮಾಡಿ ಈ 3 ಕೆಲಸ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಯಾವುದೇ ರೀತಿಯ ಹೂಡಿಕೆಗೆ ಸಲಹೆಯನ್ನು ನೀಡುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆಯನ್ನು ಪಡೆದುಕೊಳ್ಳಿ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ