Best Mileage Bikes: ಇವೇ ನೋಡಿ ಅತ್ಯುತ್ತಮ ಮೈಲೇಜ್ ಹೊಂದಿರುವ ಟಾಪ್ ಬೈಕ್‌ಗಳು
ಅತ್ಯುತ್ತಮ ಮೈಲೇಜ್ ನೀಡುವ ಬೈಕ್‌ಗಳು: ದೇಶೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಮೈಲೇಜ್ ಮತ್ತು ಹಲವಾರು ಅದ್ಭುತ ವೈಶಿಷ್ಟ್ಯಗಳನ್ನು ನೀಡುವ ಅನೇಕ ಬೈಕ್‌ಗಳಿವೆ. ಈ ಬೈಕ್‌ಗಳು ಕೈಗೆಟುಕವ ಬೆಲೆಯಲ್ಲಿ ಲಭ್ಯವಿದ್ದು, ಭಾರತೀಯ ಗ್ರಾಹಕರಿಗೆ ಇಷ್ಟವಾಗುತ್ತವೆ. ಈ ಬೈಕ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
Best Mileage Bikes: ದೇಶೀಯ ಮಾರುಕಟ್ಟೆಯಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಅನೇಕ ಅತ್ಯುತ್ತಮ ಬೈಕುಗಳಿವೆ. ಹಲವಾರು ಕಂಪನಿಗಳು ಗ್ರಾಹಕರಿಗೆ ಇಷ್ಟವಾಗುವ ರೀತಿಯ ಬೈಕುಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಪ್ರತಿಯೊಬ್ಬ ಗ್ರಾಹಕರು ಬೈಕ್ ಖರೀದಿಸಬೇಕಾದರೆ ವೈಶಿಷ್ಟ್ಯಗಳ ಬಗ್ಗೆ ಗಮನ ಹರಿಸುತ್ತಾರೆ. ಈ ಪೈಕಿ ಅತಿಹೆಚ್ಚು ಮೈಲೇಜ್ ನೀಡುವ ಬೈಕ್‌ಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಾರೆ. ನೀವು 250KM ವ್ಯಾಪ್ತಿಯಲ್ಲಿರುವ ಒಂದು ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣಿಸಲು ಅನುಕೂಲವಾಗುವ ಕೆಲವು ಬೈಕ್‌ಗಳಿವೆ.
ಈ ಬೈಕ್‌ಗಳನ್ನು ಖರೀದಿಸುವುದು ನಿಮಗೆ ಲಾಭದಾಯಕವಾಗಬಹದು. ಏಕೆಂದರೆ ಈ ಬೈಕ್‌ಗಳು ಹೆಚ್ಚು ಮೈಲೇಜ್ ನೀಡುತ್ತವೆ. ಈ ಬೈಕ್‌ಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ ಸರಾಸರಿ 70-72KM ಮೈಲೇಜ್ ನೀಡುತ್ತವೆ. ನೀವು 4 ಲೀಟರ್ ಪೆಟ್ರೋಲ್ ಹಾಕಿಸಿದರೆ ಕೇವಲ 350 ರಿಂದ 400 ರೂ.ಗಳಲ್ಲಿ ಈ ದೂರವನ್ನು ಕ್ರಮಿಸಬಹುದು. ಅತಿಹೆಚ್ಚು ಮೈಲೇಜ್ ನೀಡುವ ಬೈಕ್‌ಗಳು ಯಾವುವು ಮತ್ತು ಅವುಗಳ ವೈಶಿಷ್ಟ್ಯಗಳು ಏನು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಇದನ್ನೂ ಓದಿ: Daily GK Quiz: ಭೂಮಿಯ ಸುತ್ತ ಸುತ್ತುವ ಮೊದಲ ಮಾನವ ನಿರ್ಮಿತ ಉಪಗ್ರಹದ ಹೆಸರೇನು?
ಬಜಾಜ್ ಪ್ಲಾಟಿನಾ 100
ಬಜಾಜ್ ಪ್ಲಾಟಿನಾ 100 ಬೈಕ್ 102 CC, ಸಿಂಗಲ್-ಸಿಲಿಂಡರ್, DTS-I ಎಂಜಿನ್ ಹೊಂದಿದ್ದು, ಇದು 7.79 BHP ಪವರ್ ಮತ್ತು 8.34 NM ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮೈಲೇಜ್ ಬಗ್ಗೆ ಹೇಳುವುದಾದರೆ ಇದು 72 kmpl ನೀಡುತ್ತದೆ. ಟ್ರಾನ್ಸ್ಮಿಷನ್ ಬಗ್ಗೆ ಹೇಳುವುದಾದರೆ, ಗ್ರಾಹಕರು 4-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಪಡೆಯುತ್ತಾರೆ. ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ನೀಡಲಾಗಿದೆ. ಇದರ ಬೆಲೆಯ ಬಗ್ಗೆ ಹೇಳುವುದಾರೆ, ಇದು ₹61,617 - ₹66,440 (ಎಕ್ಸ್ ಶೋ ರೂಂ, ದೆಹಲಿ) ಬೆಲೆಯಲ್ಲಿ ಲಭ್ಯವಿದೆ.
ಟಿವಿಎಸ್ ಸ್ಪೋರ್ಟ್
ಟಿವಿಎಸ್ ಸ್ಪೋರ್ಟ್ 109.7 CC, BS 6 ಎಂಜಿನ್ ಹೊಂದಿರುವ ಮೋಟಾರ್‌ಸೈಕಲ್ ಆಗಿದ್ದು, ಇದನ್ನು ಟಿವಿಎಸ್ ಮೋಟಾರ್ ಕಂಪನಿ ತಯಾರಿಸಿದೆ. ಇದು ಇಂಧನ ದಕ್ಷತೆ, ಕೈಗೆಟುಕುವ ಬೆಲೆ ಮತ್ತು ಆರಾಮದಾಯಕ ಸವಾರಿಗಾಗಿ ಹೆಸರುವಾಸಿಯಾಗಿದೆ. ಇದರ ಮೈಲೇಜ್ 70 kmpl. ಈ ಮೋಟಾರ್‌ಸೈಕಲ್‌ನ ಎಂಜಿನ್ ಕುರಿತು ಹೇಳುವುದಾರೆ, ಗ್ರಾಹಕರು 109.7cc, ಸಿಂಗಲ್-ಸಿಲಿಂಡರ್, SOHC, ಏರ್-ಕೂಲ್ಡ್ ಎಂಜಿನ್ ಅನ್ನು ಪಡೆಯುತ್ತಾರೆ, ಇದು 8.07 PS ಪವರ್ ಮತ್ತು 8.4 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮೈಲೇಜ್ ಬಗ್ಗೆ ಹೇಳುವುದಾರೆ, ಇದು 70-80 kmpl ಮತ್ತು ಟ್ರಾನ್ಸ್ಮಿಷನ್ ಬಗ್ಗೆ ಹೇಳುವುದಾದರೆ, ಇದು 4-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ನೊಂದಿಗೆ ಬರುತ್ತದೆ. ಮೋಟಾರ್ಸೈಕಲ್ನಲ್ಲಿ ಗ್ರಾಹಕರು ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ಗಳನ್ನು ಪಡೆಯುತ್ತಾರೆ, 10 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ. ಇದರ ಬೆಲೆಯ ಬಗ್ಗೆ ಹೇಳುವುದಾರೆ, ಇದು ₹59,881 - ₹71,223 (ಎಕ್ಸ್ ಶೋ ರೂಂ, ದೆಹಲಿ)ನಲ್ಲಿ ಲಭ್ಯವಿದೆ.
ಇದನ್ನೂ ಓದಿ: Jio, Airtel ಗೆ ಸೆಡ್ಡು ಹೊಡೆಯಲು ಮುಂದಾದ ಬಿಎಸ್ಎನ್ಎಲ್...!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.