ಆದಾಯ ತೆರಿಗೆ ಉಳಿಸಲು PPF ಮತ್ತು FDಯಲ್ಲಿ ಯಾವುದು ಉತ್ತಮ ಆಯ್ಕೆ ?
PPF V/S FD :ಹೂಡಿಕೆ ಮಾಡುವ ಮುನ್ನ ಯಾವ ಯೋಜನೆ ಉತ್ತಮ ಎನ್ನುವುದರ ಬಗ್ಗೆ ಯೋಚಿಸಿ ಹೂಡಿಕೆ ಮಾಡಬೇಕಾಗುತ್ತದೆ. PPF ಮತ್ತು FDಯನ್ನು ಹೋಲಿಸಿದರೆ ಇದರಲ್ಲಿ ಯಾವುದು ಬೆಸ್ಟ್ ಆಯ್ಕೆ ಎನ್ನುವುದನ್ನು ಇಲ್ಲಿ ನೋಡೋಣ.
PPF V/S FD : PPF ಮತ್ತು FD ಎರಡೂ ಆದಾಯ ತೆರಿಗೆ ಉಳಿಸಲು ಉತ್ತಮ ಆಯ್ಕೆಗಳಾಗಿವೆ.ಇದರಲ್ಲಿ ತೆರಿಗೆ ಪ್ರಯೋಜನಗಳ ಜೊತೆಗೆ ಹೂಡಿಕೆಯ ಮೇಲೆ ಉತ್ತಮ ಆದಾಯ ಕೂಡಾ ಸಿಗುತ್ತದೆ. PPFನಲ್ಲಿ ಲಭ್ಯವಿರುವ ಬಡ್ಡಿ ದರವನ್ನು ಹಣಕಾಸು ಸಚಿವಾಲಯ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲಿಸುತ್ತದೆ. ಇದರಲ್ಲಿ ಕಾಲಕಾಲಕ್ಕೆ ಬದಲಾವಣೆಗಳು ಕೂಡಾ ಆಗುತ್ತಿರುತ್ತದೆ. ಆದರೆ ಎಫ್‌ಡಿ ಮೇಲಿನ ಬಡ್ಡಿಯನ್ನು ನಿಗದಿತ ದರದಲ್ಲಿಯೇ ಇರಿಸಲಾಗುತ್ತದೆ.
ಯಾವುದೇ ಬೆಸ್ಟ್ ? :
PPF ಗೆ ಹೋಲಿಸಿದರೆ FD ಕೆಲವು ಅನಾನುಕೂಲಗಳನ್ನು ಹೊಂದಿದೆ. PPF ಆದಾಯ ತೆರಿಗೆಯಿಂದ ಪರಿಹಾರವನ್ನು ನೀಡುತ್ತದೆ.FD ಯಲ್ಲಿ ಪಡೆದ ಬಡ್ಡಿಯು ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆಗೆ ಒಳಪಟ್ಟಿರುತ್ತದೆ. FD ರಿಟರ್ನ್ಸ್ ಯಾವಾಗಲೂ ಹಣದುಬ್ಬರವನ್ನು ಸೋಲಿಸಲು ಸಾಧ್ಯವಿಲ್ಲ.ಇದರರ್ಥ ನಿಮ್ಮ ಉಳಿತಾಯದ ನೈಜ ಮೌಲ್ಯವು ಕಾಲಾನಂತರದಲ್ಲಿ ಕುಸಿಯುವ ಅಪಾಯದಲ್ಲಿರುತ್ತದೆ.FD ಮೇಲೆ ಸರ್ಕಾರ ಯಾವುದೇ ಗ್ಯಾರಂಟಿ ನೀಡುವುದಿಲ್ಲ. ಆದರೆ ಪಿಪಿಎಫ್ ಅನ್ನು ಸರ್ಕಾರವು ಖಾತರಿಪಡಿಸುತ್ತದೆ.
ಇದನ್ನೂ ಓದಿ : Arecanut Price in Karnataka: ಯಲ್ಲಾಪುರದಲ್ಲಿ 55 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ
PPF ಪ್ರಯೋಜನ :
ಅನೇಕ ತೆರಿಗೆದಾರರು ತಮ್ಮ ನಿವೃತ್ತಿ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಿರ ಆದಾಯ, ತೆರಿಗೆ ಉಳಿತಾಯ ಹೂಡಿಕೆಗಳಿಗಾಗಿ PPF ಅನ್ನು ಆಯ್ಕೆ ಮಾಡುತ್ತಾರೆ. ತೆರಿಗೆ ಉಳಿತಾಯ ಮತ್ತು ಸುರಕ್ಷಿತ ಹೂಡಿಕೆ ಆಯ್ಕೆಗಳ ಜೊತೆಗೆ ದೀರ್ಘಾವಧಿಯ ಉಳಿತಾಯವನ್ನು ಹುಡುಕುತ್ತಿರುವ ಜನರಿಗೆ ಸಾರ್ವಜನಿಕ ಪಿಪಿಎಫ್ ಉತ್ತಮ ಆಯ್ಕೆಯಾಗಿದೆ. ಆದರೆ PPF ನಲ್ಲಿದೀರ್ಘಾವಧಿಗೆ ಹೂಡಿಕೆ ಮಾಡಬೇಕಾಗುತ್ತದೆ, FD ಯಲ್ಲಿ ಹಾಗಲ್ಲ.
ತೆರಿಗೆ ಮುಕ್ತ :
PPF ನಲ್ಲಿ ಹೂಡಿಕೆ ಮಾಡುವುದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿರುತ್ತದೆ. ಅಂದರೆ ಅದರಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ತೆರಿಗೆ ಬಾಧ್ಯತೆ ಕಡಿಮೆಯಾಗುತ್ತದೆ. PPFನ ಮುಕ್ತಾಯದ ಬಡ್ಡಿ ನೀವು ಪಡೆಯುವ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.ತೆರಿಗೆ ಉಳಿತಾಯದ ದೃಷ್ಟಿಯಿಂದ ವೇತನ ಪಡೆಯುವ ವರ್ಗಕ್ಕೆ ಇದೊಂದು ಆಕರ್ಷಕ ಯೋಜನೆಯಾಗಿದೆ.
ಹೂಡಿಕೆ ಮೇಲೆ ಬಡ್ಡಿ :
ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ PPF ಮೇಲಿನ ಪ್ರಸ್ತುತ ಬಡ್ಡಿ ದರವು 7.1 ಶೇಕಡಾ ಆಗಿದೆ. ಆದರೆ ತೆರಿಗೆ ಉಳಿತಾಯ ಎಫ್‌ಡಿ ಮೇಲೆ ಎಸ್‌ಬಿಐ ಶೇ.6.50 ಬಡ್ಡಿ ನೀಡುತ್ತಿದೆ.
ಇದನ್ನೂ ಓದಿ :ಆದಾಯ ತೆರಿಗೆ ನಿಯಮದ ಪ್ರಕಾರ ಮನೆಯಲ್ಲಿ ಎಷ್ಟು ಮೊತ್ತವನ್ನು ಇಟ್ಟುಕೊಳ್ಳಬಹುದು !
ಬಡ್ಡಿ ದರದಲ್ಲಿ ವ್ಯತ್ಯಾಸವಾಗುವುದೇ ? :
ದೀರ್ಘಾವಧಿಯವರೆಗೆ ಕಡಿಮೆ ಬಡ್ಡಿದರದಲ್ಲಿ ಎಫ್‌ಡಿಯಲ್ಲಿ ಹೂಡಿಕೆ ಮಾಡಿದರೆ, ಬಡ್ಡಿದರ ಹೆಚ್ಚಾದಾಗ ನಷ್ಟ ಅನುಭವಿಸಬೇಕಾಗುತ್ತದೆ. ಈ ಕಾರಣಕ್ಕಾಗಿ, PPF ಐದು ವರ್ಷಗಳ ತೆರಿಗೆ ಉಳಿತಾಯ FDಗಿಂತ ಉತ್ತಮ ಆದಾಯವನ್ನು ನೀಡುತ್ತದೆ.ಹೂಡಿಕೆಯ ಅವಧಿಯಲ್ಲಿ FD ಬಡ್ಡಿದರಗಳು ಸ್ಥಿರವಾಗಿರುತ್ತವೆ.ಅದೇ ಸಮಯದಲ್ಲಿ,PPFನ ಬಡ್ಡಿ ದರವು ಬದಲಾಗುತ್ತಿರುತ್ತದೆ. ಇದು ಪ್ರತಿ ತ್ರೈಮಾಸಿಕದಲ್ಲಿ ಬದಲಾಗಬಹುದು.
ಪಿಪಿಎಫ್‌ನಲ್ಲಿ ಕಂಪೌನ್ದಿಂಗ್ ನ ಲಾಭವೂ ಇದೆ. ಈ ಖಾತೆಯು 15 ವರ್ಷಗಳಲ್ಲಿ ಪಕ್ವವಾಗುತ್ತದೆ. ಇದಾದ ನಂತರ, ನೀವು ಹಣವನ್ನು ಹಿಂಪಡೆಯುವ ಮೂಲಕ ಖಾತೆಯನ್ನು ಮುಚ್ಚಬಹುದು ಅಥವಾ ಹೂಡಿಕೆಯನ್ನು ಮುಂದುವರಿಸಲು ಐದು ವರ್ಷಗಳ ಅವಧಿಗೆ ವಿಸ್ತರಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.