Best Selling Scooter: Hero-TVS ಅಲ್ಲ, ಈ ಕಂಪನಿಯ ಸ್ಕೂಟರ್ ಗೆ ಗ್ರಾಹಕರ ಬೇಡಿಕೆ ಹೆಚ್ಚಾಗಿದೆ
Best Selling Scooter - ನಮ್ಮ ದೇಶದಲ್ಲಿ ಒಂದೆಡೆ ಯುವಕರಲ್ಲಿ ಬೈಕ್ ಕ್ರೇಜ್ ಇದ್ದರೆ, ಇನ್ನೊಂದೆಡೆ ಸ್ಕೂಟರ್ ಖರೀದಿಸುವವರ ಸಂಖ್ಯೆಯೂ ಕೂಡ ಕಮ್ಮಿ ಏನಿಲ್ಲ. ಯಾವ ಕಂಪನಿಯ ಸ್ಕೂಟರ್ ಅನ್ನು ಜನ ಜಾಸ್ತಿ ಖರೀದಿಸುತ್ತಾರೆ? ಈ ಪ್ರಶ್ನೆಗೆ ನಾವು ನಿಮಗೆ ಉತ್ತರವನ್ನು ಹೇಳಲಿದ್ದೇವೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ ಸ್ಕೂಟರ್ ಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
Best Selling Scooter - ದ್ವಿಚಕ್ರ ವಾಹನಗಳ ಕುರಿತು ಹೇಳುವುದಾದರೆ, ಬೈಕ್ ಗಳು ಹೆಚ್ಚಾಗಿ ಮಾರಾಟಗೊಳ್ಳುತ್ತವೆ. ಆದರೆ, ನಮ್ಮ ದೇಶದಲ್ಲಿ ಸ್ಕೂಟರ್ ಪ್ರೇಮಿಗಳ ಸಂಖ್ಯೆಯೂ ಕೂಡ ಕಡಿಮೆಯೇನಿಲ್ಲ. ಆದರೆ, ಯಾವ ಕಂಪನಿಯ ಸ್ಕೂಟರ್ ಅನ್ನು ಜನ ಹೆಚ್ಚಾಗಿ ಖರೀದಿಸುತ್ತಾರೆ? ಇದರ ಉತ್ತರವನ್ನು ನಾವು ನಿಮಗೆ ಹೇಳಲಿದ್ದೇವೆ. ವಾಸ್ತವದಲ್ಲಿ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ ಸ್ಕೂಟರ್ ಮಾರಾಟಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಅವುಗಳ ಪ್ರಕಾರ, ಎಪ್ರಿಲ್-ಜುಲೈ 2022 ನಡುವೆ ಒಟ್ಟು 16,87,062 ಸ್ಕೂಟರ್ ಗಳು ಮಾರಾಟಗೊಂಡಿವೆ. 9 ರಲ್ಲಿ 4 ಕಂಪನಿಗಳಾಗಿರುವ ಸುಜುಕಿ, ಹಿರೋ ಮೋಟೋಕಾರ್ಪ್ಸ್, ಪಿಯಾಜಿಯೋ ಹಾಗೂ ಇಂಡಿಯಾ ಯಮಾಹಾ ಕಂಪನಿಗಳ ಮಾರಾಟದಲ್ಲಿ ಕುಸಿತ ಅನುಭವಿಸಿವೆ.
SIAM ಅಂಕಿ-ಅಂಶಗಳ ಪ್ರಕಾರ ಹೊಂಡಾ ಮೋಟರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಒಟ್ಟು 8,12,086 ಯುನಿಟ್ಸ್ ಮಾರಾಟದ ಮೂಲಕ ಶೇ.78ರಷ್ಟು ಪ್ರಗತಿಯನ್ನು ದಾಖಲಿಸಿದೆ. ಇದರಿಂದ ಕಂಪನಿಯ ಮಾರುಕಟ್ಟೆಯ ಪಾಲುದಾರಿಕೆ ಶೇ. 48.13ಕ್ಕೆ ಏರಿಕೆಯಾಗಿದೆ. ಮಾರುಕಟ್ಟೆಯ ಪಾಲುದಾರಿಕೆಯ ವಿಷಯದಲ್ಲಿ ಟಿವಿಎಸ್ ಕೂಡ ಉದ್ದ ಜಿಗಿತ ದಾಖಲಿಸಿದ್ದು. ಏಪ್ರಿಲ್ -ಜುಲೈ 2021 ರಲ್ಲಿ ಅದು ಶೇ. 20.04ರಿಂದ ಶೇ.24.14ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ-LIC ಯ ಈ ಯೋಜನೆಯಲ್ಲಿ ಕೇವಲ ₹44 ಠೇವಣಿ ಮಾಡಿ ₹27.60 ಲಕ್ಷ ಲಾಭ!
ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಮಾರಾಟವು ಹೆಚ್ಚು ಪ್ರಭಾವಶಾಲಿಯಾಗಿಲ್ಲ. ಕಂಪನಿಯು ತನ್ನ ಆಕ್ಸೆಸ್, ಅವೆನಿಸ್ ಮತ್ತು ಬರ್ಗ್‌ಮ್ಯಾನ್ ಸ್ಟ್ರೀಟ್ ಸ್ಕೂಟರ್‌ಗಳ ಮೂಲಕ ಒಟ್ಟು 2,21,931 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದರೊಂದಿಗೆ ಸುಜುಕಿ ಮೋಟಾರ್‌ಸೈಕಲ್‌ಗಳ ಮಾರುಕಟ್ಟೆ ಪಾಲು ಶೇಕಡಾ 17.41 ರಿಂದ ಶೇಕಡಾ 13.15 ಕ್ಕೆ ಇಳಿದಿದೆ.
ಇದನ್ನೂ ಓದಿ-PM Kisan: ಪಿಎಂ ಕಿಸಾನ್ 12ನೇ ಕಂತಿಗೂ ಮುನ್ನ ಸರ್ಕಾರದಿಂದ ಸಿಹಿಸುದ್ದಿ, 8 ಸಾವಿರ ಲಾಭ!
ದೇಶದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್
ಹೋಂಡಾ ಆಕ್ಟಿವಾ ಬಹಳ ಹಿಂದಿನಿಂದಲೂ ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸ್ಕೂಟರ್ ಆಗಿದೆ. ಹೋಂಡಾ ಜುಲೈ 2022 ತಿಂಗಳಿನಲ್ಲಿ ಒಟ್ಟು 2,31,807 ಹೊಂಡಾ ಆಕ್ಟಿವಾ ಯುನಿಟ್‌ಗಳನ್ನು ಮಾರಾಟ ಮಾಡಿದೆ. ಅಂದರೆ, ಪ್ರತಿದಿನ ಸುಮಾರು 7,726 ಯುನಿಟ್‌ಗಳನ್ನು ಅದು ಮಾರಾಟ ಮಾಡಿದೆ. ಇದು ಜುಲೈ 2021 ರಲ್ಲಿ ಮಾರಾಟವಾದ 1,62,956 ಯುನಿಟ್‌ಗಳಿಗಿಂತ ಶೇ.31.21 ರಷ್ಟು ಹೆಚ್ಚಾಗಿದೆ. ಹೋಂಡಾ ಆಕ್ಟಿವಾ ಮಾರಾಟವು ಹೋಂಡಾ ಶೈನ್ ಮತ್ತು ಬಜಾಜ್ ಪಲ್ಸರ್‌ಗಿಂತ ಹೆಚ್ಚಾಗಿದೆ ಎಂದರೆ ನೀವೂ ಕೂಡ ನಿಬ್ಬೇರಗಾಗುವಿರಿ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.