BHIM cashback offers : BHIM ಪಾವತಿಗಳ ಅಪ್ಲಿಕೇಶನ್ ಪ್ರಸ್ತುತ 750 ರೂ.ವರೆಗೆ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಈ ಆಫರ್ ಕೆಲವೇ ವಾರಗಳವರೆಗೆ ಮಾತ್ರ ಲಭ್ಯವಿದೆ. ಈ  ಆಫರ್  Google Pay ಆರಂಭದಲ್ಲಿ ಮಾಡಿದಂತೆಯೇ ಹೊಸ ಬಳಕೆದಾರರನ್ನು ಆಕರ್ಷಿಸುವ ಪ್ರಯತ್ನವಾಗಿದೆ.ಎರಡು ವಿಭಿನ್ನ ಆಫರ್ ಗಳನ್ನು ಸಂಯೋಜಿಸುವ ಮೂಲಕ ಈ  750 ರೂಪಾಯಿಗಳ Cashback ಅನ್ನು ಪಡೆಯಬಹುದು. ಇದಕ್ಕಾಗಿ ಷರತ್ತುಗಳನ್ನು ಪೂರೈಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

BHIM ಕ್ಯಾಶ್‌ಬ್ಯಾಕ್ ಕೊಡುಗೆಗಳು :
ಆಹಾರ ಪ್ರಿಯರಿಗೆ ಮತ್ತು ಪ್ರಯಾಣ ಪ್ರಿಯರಿಗೆ ಭೀಮ್ ಆ್ಯಪ್ 150 ರೂಪಾಯಿಗಳ ಕ್ಯಾಶ್‌ಬ್ಯಾಕ್ ನೀಡುತ್ತಿದೆ.  BHIM ಆ್ಯಪ್ ಮೂಲಕ (ರೈಲು ಬುಕಿಂಗ್, ಕ್ಯಾಬ್‌ಗಳು ಅಥವಾ ರೆಸ್ಟೋರೆಂಟ್ ಬಿಲ್‌ಗಳ) ಮೇಲೆ 100 ರೂಪಾಯಿಗಿಂತ ಹೆಚ್ಚಿನ ಆಹಾರ ಅಥವಾ ಪ್ರಯಾಣ ವೆಚ್ಚವನ್ನು ಪಾವತಿಸಿದರೆ, 30 ರೂಪಾಯಿಯ ನೇರ ಕ್ಯಾಶ್‌ಬ್ಯಾಕ್ ಸಿಗುತ್ತದೆ. ಈ ಕೊಡುಗೆ ಅನೇಕ ಸ್ಥಳಗಳಲ್ಲಿ ಮಾನ್ಯವಾಗಿದೆ. ಇದರಲ್ಲಿ ಒಟ್ಟಾರೆಯಾಗಿ 150 ರೂಪಾಯಿ ವರೆಗೆ ಮಾತ್ರ  ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದಕ್ಕಾಗಿ ಕನಿಷ್ಠ 5 ಬಾರಿ  100 ರೂಪಾಯಿಗಿಂತ ಹೆಚ್ಚಿನ ಬಿಲ್ ಪಾವತಿಸಬೇಕಾಗುತ್ತದೆ. 


ಇದನ್ನೂಓದಿ : Gold Rate:ಭಾರತದಲ್ಲಿ 10 ಗ್ರಾಂ ಚಿನ್ನದ ದರ ಏರಿಕೆ: ನಿಮ್ಮ ನಗರದಲ್ಲಿನ ಬೆಲೆಯನ್ನು ಪರಿಶೀಲಿಸಿ!


ಕ್ರೆಡಿಟ್ ಕಾರ್ಡ್‌ನಲ್ಲಿಯೂ ಆಫರ್ :
BHIM ಆ್ಯಪ್‌ನಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಆಗಿದ್ದರೆ, ಮತ್ತೊಂದು 600 ರೂಪಾಯಿಯ ಕ್ಯಾಶ್‌ಬ್ಯಾಕ್ ಆಫರ್ ಇರುತ್ತದೆ. ಈ ಕೊಡುಗೆಯನ್ನು ಪಡೆಯಲು, ಅಂಗಡಿಗಳಲ್ಲಿ UPI ಪೇಮೆಂಟ್ ಮಾಡಬೇಕಾಗುತ್ತದೆ. ಇದರಲ್ಲಿ ಮೊದಲ ಮೂರು ಬಾರಿ 100 ರೂ.ಗಿಂತ ಹೆಚ್ಚಿನ ಪಾವತಿಗೆ  100 ರೂಪಾಯಿ ಕ್ಯಾಶ್‌ಬ್ಯಾಕ್ ನೀಡಲಾಗುವುದು. ನಂತರ ಪ್ರತಿ ತಿಂಗಳು 200 ಕ್ಕಿಂತ ಹೆಚ್ಚಿನ 10 ಬಾರಿ ಪಾವತಿಗೆ  30 ರೂಪಾಯಿ ಕ್ಯಾಶ್‌ಬ್ಯಾಕ್ ನೀಡಲಾಗುವುದು. ಆದರೆ ಗಮನಿಸಿ, ಇಲ್ಲಿ ಕೇವಲ 600 ರೂಪಾಯಿವರೆಗೆ ಮಾತ್ರ ಕ್ಯಾಶ್‌ಬ್ಯಾಕ್  ಸಿಗುತ್ತದೆ.


ಪೆಟ್ರೋಲ್ ಡಿಸೇಲ್ ಹಾಕಿಸಿದರೂ ಕ್ಯಾಶ್‌ಬ್ಯಾಕ್ :
ವಾಹನಕ್ಕೆ ಪೆಟ್ರೋಲ್, ಡೀಸೆಲ್ ಅಥವಾ ಸಿಎನ್‌ಜಿ ತುಂಬಿದರೆ 1% ಕ್ಯಾಶ್‌ಬ್ಯಾಕ್ ನ ಲಾಭ ಕೂಡಾ ಲಭ್ಯವಿದೆ. ಅಷ್ಟೇ ಅಲ್ಲ, 100ಕ್ಕಿಂತ ಹೆಚ್ಚಿನ ಬಿಲ್ ಮಾಡಿದರೆ ವಿದ್ಯುತ್, ನೀರು ಮತ್ತು ಅನಿಲದಂತಹ ಬಿಲ್‌ಗಳ ಮೇಲೂ ಈ ರಿಯಾಯಿತಿ ಲಭ್ಯವಿರುತ್ತದೆ. ಈ ಕ್ಯಾಶ್‌ಬ್ಯಾಕ್ ನಿಮ್ಮ BHIM ಅಪ್ಲಿಕೇಶನ್‌ಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗೆ ನೇರವಾಗಿ ಹೋಗುತ್ತದೆ.


ಇದನ್ನೂಓದಿ : DA Arrears Payment Update: 18 ತಿಂಗಳ ಬಾಕಿ ಡಿಎ ಬಗ್ಗೆ ಗುಡ್ ನ್ಯೂಸ್ ! ಚುನಾವಣೆಗೂ ಮುನ್ನ ಸರ್ಕಾರಿ ನೌಕರರಿಗೆ ಬಂಪರ್


ಈ ವಿಷಯವನ್ನು ನೆನಪಿನಲ್ಲಿಡಿ : 
ಈ ಎಲ್ಲಾ ಕ್ಯಾಶ್‌ಬ್ಯಾಕ್ ಕೊಡುಗೆಗಳು  ಮಾರ್ಚ್ 31 2024 ರವರೆಗೆ ಮಾನ್ಯವಾಗಿರುತ್ತವೆ. ಇದರರ್ಥ BHIM ಅಪ್ಲಿಕೇಶನ್ ಬಳಸಿ ಉಲ್ಲೇಖಿಸಲಾದ ಎಲ್ಲಾ ಆಫರ್‌ಗಳನ್ನು ಪಡೆಯಲು  7 ವಾರಗಳಿಗಿಂತ ಹೆಚ್ಚು ಸಮಯಾವಕಾಶ ನಿಮ್ಮ ಬಳಿ ಇರುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.