New rules from June 1: ಮೇ ತಿಂಗಳು ಮುಗಿಯಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ನಂತರ ಜೂನ್ ಹೊಸ ತಿಂಗಳು ಪ್ರಾರಂಭವಾಗುತ್ತದೆ. ಜೂನ್ ತಿಂಗಳಲ್ಲಿ ಹಲವು ಬದಲಾವಣೆಗಳು ಆಗಲಿವೆ. ದೇಶದ ರಾಜಕೀಯದಲ್ಲೂ ಈ ತಿಂಗಳು ದೊಡ್ಡ ಬದಲಾವಣೆಯಾಗಲಿದ್ದು, ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದು ಹೊಸ ಸರ್ಕಾರ ರಚನೆಯಾಗಲಿದೆ.  


COMMERCIAL BREAK
SCROLL TO CONTINUE READING

ಮತ್ತೊಂದೆಡೆ ಜೂನ್‌ ಮೊದಲ ದಿನಾಂಕದಿಂದ ದೇಶದ ಜನಸಾಮಾನ್ಯರ ಜೇಬಿಗೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳಾಗಲಿವೆ. ಗೃಹೋಪಯೋಗಿ ಮತ್ತು ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಜೂನ್‌ 1ರ ಬೆಳಗ್ಗೆ ನಿಗದಿಪಡಿಸಲಾಗುತ್ತದೆ. ಅದೇ ದಿನವೇ ಆಧಾರ್‌ಗೆ ಸಂಬಂಧಿಸಿದ ನಿಯಮಗಳಲ್ಲೂ ಬದಲಾವಣೆಯಾಗಲಿದೆ. ಇದಲ್ಲದೇ ಸಂಚಾರಿ ನಿಯಮದಲ್ಲೂ ಹಲವು ಬದಲಾವಣೆಯಾಗಲಿದೆ. ಇವುಗಳನ್ನು ಅನುಸರಿಸದಿದ್ದಲ್ಲಿ ಜನಸಾಮಾನ್ಯರ ಜೇಬಿನ ಮೇಲೆ ದೊಡ್ಡ ಹೊರೆ ಬೀಳಲಿದೆ. ಜೂನ್ 1ರಿಂದ ಏನೆಲ್ಲಾ ಬದಲಾವಣೆಗಳು ಆಗಲಿವೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: ಸ್ವರ್ಗವೇ ಧರೆಗಿಳಿದಂತಿದೆ ! 3.4 ಎಕರೆಯಲ್ಲಿ ಚಾಚಿಕೊಂಡಿರುವ ಗೌತಮ್ ಅದಾನಿ ಬಂಗಲೆಯ ಫೋಟೋಗಳು ಇಲ್ಲಿವೆ


ಗ್ಯಾಸ್ ಸಿಲಿಂಡರ್ ದರದಲ್ಲಿ ಬದಲಾವಣೆ: ಪ್ರತಿ ತಿಂಗಳ 1ನೇ ತಾರೀಖಿನಂದು ಗೃಹಬಳಕೆ ಮತ್ತು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗಲಿದೆ. ದೇಶೀಯ ಮತ್ತು ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ದೇಶದ ತೈಲಮಾರುಕಟ್ಟೆ ಕಂಪನಿಗಳು ನಿರ್ಧರಿಸಲಿವೆ. ಜೂನ್ 1ರಂದು ಎರಡೂ ರೀತಿಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಬದಲಾವಣೆಯಾಗಬಹುದು. ದೇಶೀಯ ಗ್ಯಾಸ್ ಸಿಲಿಂಡರ್ ಬೆಲೆಯ ಅಂಕಿ-ಅಂಶಗಳ ಪ್ರಕಾರ, ದೇಶೀಯ ಗ್ಯಾಸ್ ಸಿಲಿಂಡರ್ ಬೆಲೆ ಮಾರ್ಚ್ 9ರಂದು ಕೊನೆಯದಾಗಿ ಇಳಿಕೆ ಕಂಡಿತ್ತು. ಕಳೆದೊಂದು ತಿಂಗಳಿನಿಂದ ವಾಣಿಜ್ಯ ಅನಿಲ ಸಿಲಿಂಡರ್‌ಗಳು ಅಗ್ಗವಾಗಿವೆ. ಇದೀಗ ಹೊಸ ತಿಂಗಳಿನಿಂದ ಸಿಲಿಂಡರ್‌ ಬೆಲೆ ಏರಿಕೆಯಾಗುತ್ತದೋ ಅಥವಾ ಇಳಿಕೆಯಾಗುತ್ತದೋ ಅನ್ನೋದನ್ನು ಕಾದು ನೋಡಬೇಕಿದೆ. 


ಆನ್‌ಲೈನ್ ಆಧಾರ್ ಅಪ್‌ಡೇಟ್‌: UIDAI ಉಚಿತ ಆನ್‌ಲೈನ್‌ ಆಧಾರ್ ಅಪ್‌ಡೇಟ್‌ ಮಾಡುವ ದಿನಾಂಕವನ್ನು ಜೂನ್ 14ರವರೆಗೆ ವಿಸ್ತರಿಸಿದೆ. ಯಾರೇ ಆಗಲಿ ಆನ್‌ಲೈನ್‌ನಲ್ಲಿ ಆಧಾರ್‌ ಅಪ್‌ಡೇಟ್‌ ಮಾಡಿದರೆ ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಆಧಾರ್‌ ಕೇಂದ್ರಕ್ಕೆ ಹೋಗಿ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡಿದ್ರೆ ಪ್ರತಿ ಅಪ್‌ಡೇಟ್‌ಗೆ 50 ರೂ. ಪಾವತಿಸಬೇಕು. 


25 ಸಾವಿರ ದಂಡ!: ಜೂನ್‌ 1ರ ಹೊಸ ತಿಂಗಳಿನಿಂದ ಅಪ್ರಾಪ್ತರು ವಾಹನ ಚಲಾಯಿಸುವುದು ಕಂಡುಬಂದರೆ ಭಾರೀ ಮೊತ್ತದ ದಂಡ ವಿಧಿಸಲಾಗುವುದು. ದೇಶದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವ ವಯಸ್ಸು 18 ವರ್ಷಗಳಿಗಿಂತ ಹೆಚ್ಚಿನದಾಗಿದೆ. ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದರೆ 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಇದಲ್ಲದೆ ಅವರು 25 ವರ್ಷ ವಯಸ್ಸಿನವರೆಗೆ ಯಾವುದೇ ಪರವಾನಗಿ ಪಡೆಯುವಂತಿಲ್ಲ. 


ಸಂಚಾರ ನಿಯಮಗಳಲ್ಲಿ ಬದಲಾವಣೆ: ಜೂನ್ 1ರಿಂದ ಸಂಚಾರ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಹೊಸ ಚಾಲನಾ ಪರವಾನಗಿ ನಿಯಮಗಳು ಮುಂದಿನ ತಿಂಗಳಿನಿಂದ ಜಾರಿಗೆ ಬರಲಿವೆ. ಈ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಮೊತ್ತದ ದಂಡವನ್ನು ಪಾವತಿಸಬೇಕಾಗುತ್ತದೆ. ಹೊಸ ನಿಯಮದ ಪ್ರಕಾರ ಅತಿವೇಗದ ಚಾಲನೆಗೆ 1,000-2,000 ರೂ. ದಂಡ ತೆರಬೇಕಾಗುತ್ತದೆ. ಅದೇ ರೀತಿ ಲೈಸೆನ್ಸ್‌ ಇಲ್ಲದೆ ವಾಹನ ಚಲಾಯಿಸಿದರೆ 500 ರೂ., ಹೆಲ್ಮೆಟ್, ಸೀಟ್‌ಬೆಲ್ಟ್ ಇಲ್ಲದೇ ವಾಹನ ಚಲಾಯಿಸಿದರೆ 100 ರೂ. ದಂಡ ಕಟ್ಟಬೇಕಾಗುತ್ತದೆ.


ಇದನ್ನೂ ಓದಿ: Best Cars in India: ಹೆಚ್ಚಿನ ಮೈಲೇಜ್ ನೀಡುವ 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರುಗಳು


ಖಾಸಗಿ ಸಂಸ್ಥೆಗಳಲ್ಲೂ ಲೈಸೆನ್ಸ್: ದೇಶದ ಜನರು ಇದೀಗ ಖಾಸಗಿ ಸಂಸ್ಥೆಗಳಲ್ಲಿಯೂ ಡ್ರೈವಿಂಗ್‌ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಬಹುದು. ಈ ಹೊಸ ನಿಯಮವು ಜೂನ್ 1ರಿಂದ ಜಾರಿಗೆ ಬರಲಿದೆ. ಇಲ್ಲಿ ಸಾರ್ವಜನಿಕರು ತಮ್ಮ ಚಾಲನಾ ಪರೀಕ್ಷೆಯನ್ನು ನಡೆಸಬಹುದು. ಅವರಿಗೆ ಲೈಸೆನ್ಸ್‌ ನೀಡಲಾಗುತ್ತದೆ. ಮೊದಲು ಈ ಪರೀಕ್ಷೆಗಳನ್ನು RTO ನಡೆಸುವ ಸರ್ಕಾರಿ ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುತ್ತಿತ್ತು. ಈ ನಿಯಮವು ಜೂನ್ 1ರಿಂದ ಅನ್ವಯಿಸುತ್ತದೆ, ಆದರೆ ಈ ಪರೀಕ್ಷೆಗಳನ್ನು RTO ಮಾನ್ಯತೆ ಪಡೆದ ಖಾಸಗಿ ಸಂಸ್ಥೆಗಳಲ್ಲಿ ಮಾತ್ರ ನಡೆಸಲಾಗುತ್ತದೆ. ಈ ನಿಬಂಧನೆಯು ಜೂನ್ 1ರಿಂದ ಮಾತ್ರ ಅನ್ವಯಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.