ನವದೆಹಲಿ : PM Kisan Scheme: ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಈಗ ರೈತರು 11 ನೇ ಕಂತಿನ ಹಣದ ನಿರೀಕ್ಷೆಯಲ್ಲಿದ್ದಾರೆ (PM Kisan Samman Nidhi Yojana). ಇದುವರೆಗೆ ಈ ಯೋಜನೆಯ 10 ಕಂತುಗಳು ರೈತರ ಖಾತೆಗೆ ಬಂದಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ  ಕೇಂದ್ರ ಸರ್ಕಾರವು ದೊಡ್ಡ ಬದಲಾವಣೆಯನ್ನು ಮಾಡಿದೆ. ಅದರ ಪ್ರಕಾರ ರೈತರು 11 ನೇ ಕಂತಿಣ ಹಣ ಪಡೆಯಬೇಕಾದರೆ, ಇ-ಕೆವೈಸಿಯನ್ನು (e-KYC) ಪೂರ್ಣಗೊಳಿಸಬೇಕಾಗುತ್ತದೆ. ಅಂದರೆ, 11ನೇ ಕಂತಿನ  ಹಣಕ್ಕಾಗಿ ರೈತರು ಹಲವು ಹೊಸ ನಿಯಮಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ನೀವು ಇ-ಕೆವೈಸಿ (e-KYC) ಪೂರ್ಣಗೊಳಿಸಿದಾಗ ಮಾತ್ರ, ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಮುಂದಿನ ಕಂತು ಅಂದರೆ 11ನೇ ಕಂತಿನ ಹಣವನ್ನು ಪಡೆಯುತ್ತಾರೆ (11th Installment Money) . ಇ-ಕೆವೈಸಿ ಮಾಡದೇ ಹೋದರೆ, ಮುಂದಿನ ಕಂತಿನ ಹಣ ಸಿಲುಕಿ ಹಾಕಿಕೊಳ್ಳಬಹುದು.   ಶೀಘ್ರದಲ್ಲೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ನೇ ಕಂತು ಬಿಡುಗಡೆಯಾಗಲಿದೆ (PM Kisan Samman Nidhi Yojana). 


ಇದನ್ನೂ ಓದಿ : LPG Cylinder Prices Hike: ಮಾರ್ಚ್ ಮೊದಲ ದಿನವೇ ಗ್ರಾಹಕರಿಗೆ ಸಿಲಿಂಡರ್ ಬೆಲೆ ಏರಿಕೆ ಬಿಸಿ!


 ಪ್ರಕ್ರಿಯೆ ಹೀಗಿರುತ್ತದೆ : 
1. ಆಧಾರ್ ಆಧಾರಿತ OTP ದೃಢೀಕರಣಕ್ಕಾಗಿ ಕಿಸಾನ್ ಕಾರ್ನರ್‌ನಲ್ಲಿ 'EKYC' ಆಯ್ಕೆಯನ್ನು ಕ್ಲಿಕ್ ಮಾಡಿ
2. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹತ್ತಿರದ CSC ಕೇಂದ್ರಗಳನ್ನು ಸಂಪರ್ಕಿಸಿ.
3.  ಮೊಬೈಲ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಸಹಾಯದಿಂದ  ಮನೆಯಲ್ಲಿಯೇ ಕುಳಿತು ಈ ಕಾರ್ಯವನ್ನು ಪೂರ್ಣಗೊಳಿಸಬಹುದು.
4. ಇದಕ್ಕಾಗಿ, ನೀವು ಮೊದಲು https://pmkisan.gov.in/ ಪೋರ್ಟಲ್‌ಗೆ ಹೋಗಿ.
5. ಬಲಭಾಗದಲ್ಲಿ ಮೇಲೆ e-KYC ಬರೆದಿರುವುದು ಕಾಣಿಸುತ್ತದೆ. ಇದರ ಮೇಲೆ ಕ್ಲಿಕ್ ಮಾಡಿ. 


ಇದರ ಹೊರತಾಗಿ, ನಿಮ್ಮ ಕಂತಿನ ಸ್ಟೇಟಸ್ ಅನ್ನು ಸುಲಭವಾಗಿ ಪರಿಶೀಲಿಸಬಹುದು. 


ಇದನ್ನೂ ಓದಿ : Amul Milk Price Hike: ಪ್ರತಿ ಲೀಟರ್ ಬೆಲೆಯಲ್ಲಿ 2 ರೂಪಾಯಿ ಹೆಚ್ಚಿಸಿದ AMUL, ನಾಳೆಯಿಂದಲೇ ಹೊಸ ದರ ಅನ್ವಯ


ಈ ರೀತಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ :
1. ಇದಕ್ಕಾಗಿ, ಮೊದಲು ನೀವು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಹೋಗಿ .
2. ಈಗ ಅದರ ಮುಖಪುಟದಲ್ಲಿ ನೀವು Farmers Corner ಆಯ್ಕೆ ಕಾಣಿಸುತ್ತದೆ .
3. Farmers Corner ವಿಭಾಗದಲ್ಲಿ, ಫಲಾನುಭವಿಗಳ ಪಟ್ಟಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 
4. ಈಗ ಡ್ರಾಪ್ ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.
5. ಇದರ ನಂತರ ನೀವು 'Get Report' ಮೇಲೆ ಕ್ಲಿಕ್ ಮಾಡಿ. 
6. ಇದರ ನಂತರ ಫಲಾನುಭವಿಗಳ ಸಂಪೂರ್ಣ ಪಟ್ಟಿ ಕಾಣಿಸಿಕೊಳ್ಳುತ್ತದೆ, ಅದರಲ್ಲಿ  ನಿಮ್ಮ ಹೆಸರನ್ನು ಪರಿಶೀಲಿಸಬಹುದು.


ನಿಮ್ಮ ಕಂತು ಸ್ಟೇಟಸ್ ಅನ್ನು ಪರಿಶೀಲಿಸಿ  :
1. ನಿಮ್ಮ ಕಂತಿನ  ಸ್ಟೇಟಸ್ ಅನ್ನು ನೋಡಲು, ಮೊದಲು PM ಕಿಸಾನ್ ವೆಬ್‌ಸೈಟ್‌ಗೆ ಹೋಗಿ.
2. ಈಗ ಬಲಭಾಗದಲ್ಲಿರುವ Farmers Corner ಮೇಲೆ ಕ್ಲಿಕ್ ಮಾಡಿ.
3. ಇದರ ನಂತರ Beneficiary Status ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ಈಗ ನಿಮ್ಮೊಂದಿಗೆ ಹೊಸ ಪುಟ ತೆರೆದುಕೊಳ್ಳುತ್ತದೆ.
5. ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಇದರ ನಂತರ ಕಂತಿನ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. 


ಇದನ್ನೂ ಓದಿ : IRCTC ಭರ್ಜರಿ ಆಫರ್: ಪ್ರತಿದಿನ ಕೇವಲ 1 ಸಾವಿರ ರೂ.ನಲ್ಲಿ ತೀರ್ಥಕ್ಷೇತ್ರಗಳಿಗೆ ಪ್ರಯಾಣಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.