ನವದೆಹಲಿ: ನೌಕರರ ಭವಿಷ್ಯ ನಿಧಿ (ಇಪಿಎಫ್) ಹಿತದೃಷ್ಟಿಯಿಂದ ತೆರಿಗೆ ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಳ್ಳಬಹುದು ಎಂಬ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುಳಿವು ನೀಡಿದ್ದಾರೆ. 1 ಫೆಬ್ರವರಿ 2021 ರಂದು ಮಂಡಿಸಿದ ಬಜೆಟ್‌ನಲ್ಲಿ, ಪಿಎಫ್‌ನಲ್ಲಿ ವಾರ್ಷಿಕವಾಗಿ 2.5 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹೂಡಿಕೆಗೆ ನೀಡಲಾಗುವ ಬಡ್ಡಿಗೆ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಹಣಕಾಸು ಸಚಿವರು ಘೋಷಿಸಿದ್ದರು.


COMMERCIAL BREAK
SCROLL TO CONTINUE READING

'ಇಪಿಎಫ್ ಬಡ್ಡಿ ಮೇಲಿನ ತೆರಿಗೆಯನ್ನು ಪರಿಶೀಲಿಸಬಹುದು' :
ಇದೀಗ ಇಪಿಎಫ್‌ನಲ್ಲಿ ವಾರ್ಷಿಕವಾಗಿ 2.5 ಲಕ್ಷ ರೂ.ಗಳ ತೆರಿಗೆ ಮುಕ್ತ ಠೇವಣಿ ನಿರ್ಧಾರವನ್ನು ಪರಿಗಣಿಸಲು ಸಿದ್ಧ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ತೆರಿಗೆಯನ್ನು ಕಡಿಮೆ ಮಾಡಲು ಹೆಚ್ಚಿನ ಆದಾಯದ ಇಪಿಎಫ್ (EPF) ಅನ್ನು ಬಳಸದಿರಲು ಸರ್ಕಾರವು ಫೆಬ್ರವರಿ 1 ರಂದು ಬಜೆಟ್‌ನಲ್ಲಿ ಬಡ್ಡಿಗೆ ತೆರಿಗೆ ವಿಧಿಸುವ ನಿಬಂಧನೆಯನ್ನು ಮಾಡಿತ್ತು. ಇಂಗ್ಲಿಷ್ ಪತ್ರಿಕೆ ಹಿಂದೂ ಬಿಸಿನೆಸ್‌ಲೈನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಈ ನಿರ್ಧಾರವನ್ನು ಪರಿಶೀಲಿಸಲು ತಾನು ಸಿದ್ಧ ಎಂದು ಹೇಳಿದ ಅವರು, ಇಪಿಎಫ್‌ನಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ತೆರಿಗೆಯನ್ನು ಉಳಿಸುವ ಜನರನ್ನು ತಡೆಯುವುದು ಅವರ ಉದ್ದೇಶವಲ್ಲ ಎಂದು ಹೇಳಿದರು.


ಇದನ್ನೂ ಓದಿ - WhatsApp helpline service: PF ಖಾತೆಗೆ ಸಂಬಂಧಿಸಿದ ಈ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿ


'ಸರಾಸರಿಗಿಂತ ಹೆಚ್ಚು ಹಣವನ್ನು ಹಾಕುತ್ತಿರುವವರನ್ನು ನೋಡಿ' :
ಇಪಿಎಫ್‌ನಲ್ಲಿ ಹೂಡಿಕೆ ಮಾಡುವ ಮೂಲಕ ತಿಂಗಳಿಗೆ 15 ಸಾವಿರ ರೂ.ಗಿಂತ ಹೆಚ್ಚಿನ ಆದಾಯವನ್ನು ಗಳಿಸುವವರನ್ನು ನಾವು ನಿರಾಶೆಗೊಳಿಸುವುದಿಲ್ಲ ಎಂದು ಹಣಕಾಸು ಸಚಿವರು ಸ್ಪಷ್ಟಪಡಿಸಿದರು. 2.5 ಲಕ್ಷ ರೂ.ಗಳ ಮಿತಿಯನ್ನು ಯಾವಾಗ ಬೇಕಾದರೂ ಚರ್ಚಿಸಬಹುದು, ನಾನು ಅದನ್ನು ಪರಿಶೀಲಿಸಬಹುದು. ಆದರೆ ಇದು ತತ್ವಗಳ ವಿಷಯವಾಗಿದೆ. ಇಪಿಎಫ್‌ನಲ್ಲಿ ಸರಾಸರಿ ಮಾಸಿಕ ಗಳಿಕೆಗಿಂತ ಹೆಚ್ಚಿನದನ್ನು ಹಾಕುತ್ತಿರುವವರನ್ನು ಮಾತ್ರ ನಾವು ಪರಿಗಣಿಸುತ್ತಿದ್ದೇವೆ ಎಂದು ಹೇಳಿದರು.


'ಇಪಿಎಫ್-ಎನ್‌ಪಿಎಸ್ ವಿಲೀನಗೊಳ್ಳುವುದಿಲ್ಲ'
ಇದಲ್ಲದೆ, ಇಪಿಎಫ್ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅನ್ನು ವಿಲೀನಗೊಳಿಸುವ ಉದ್ದೇಶವಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಅವುಗಳು ಇಂದಿಗೂ ಹಾಗೆಯೇ ಮುಂದುವರಿಯುತ್ತವೆ. ಮಧ್ಯಮ ವರ್ಗದ ಇಪಿಎಫ್‌ನಿಂದ ನಿಗದಿತ ಆದಾಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತದೆ ಎಂದವರು ತಿಳಿಸಿದ್ದಾರೆ.


ಇದನ್ನೂ ಓದಿ - ಪಿಎಫ್ ಖಾತೆದಾರರೇ EPFOದ ಹೊಸ ಮಾರ್ಗಸೂಚಿಗಳನ್ನು ತಪ್ಪದೇ ತಿಳಿಯಿರಿ


ಪೆಟ್ರೋಲ್ ಮತ್ತು ಡೀಸೆಲ್ ಅಗ್ಗವಾಗಲಿದೆ ...
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಬಗ್ಗೆಯೂ ಪ್ರಸ್ತಾಪಿಸಿದ ಹಣಕಾಸು ಸಚಿವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕುಳಿತು ಈ ಸಮಸ್ಯೆಯನ್ನು ಹೇಗೆ ಉತ್ತಮವಾಗಿ ನಿಭಾಯಿಸಬಹುದು ಎಂಬುದನ್ನು ಚರ್ಚಿಸಬೇಕು. ಇದನ್ನು ಜಿಎಸ್‌ಟಿಯ ವ್ಯಾಪ್ತಿಗೆ ತರುವುದು ಒಂದು ಆಯ್ಕೆಯಾಗಿರಬಹುದು, ಇದರಿಂದಾಗಿ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏಕರೂಪವಾಗಿರುತ್ತವೆ. ಜಿಎಸ್‌ಟಿ ಕೌನ್ಸಿಲ್ ಇದನ್ನು ಪರಿಗಣಿಸಬೇಕು ಎಂದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.