Salary Hike: ಫೆಬ್ರವರಿ 1 ರಂದು : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವರ್ಷದ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಈ ವರ್ಷದ ತಮ್ಮ ವಹಿ-ಖಾತಾದಲ್ಲಿ ಸಂತಸದ ಉಡುಗೊರೆಯನ್ನು ನೀಡಲಿದ್ದಾರೆ ಎಂಬುದ ಸಾರ್ವಜನಿಕರ ನಿರೀಕ್ಷೆಯಾಗಿದೆ. ಆದರೆ ಮೋದಿ ಸರ್ಕಾರ ಬಜೆಟ್ ನಂತರ ಕೇಂದ್ರ ನೌಕರರಿಗೆ ದೊಡ್ಡ ಉಡುಗೊರೆಯನ್ನು ನೀಡುವ ಸಾಧ್ಯತೆ ಇದೆ. ಸರ್ಕಾರಿ ನೌಕರರ ವೇತನದ ಫಿಟ್‌ಮೆಂಟ್ ಫ್ಯಾಕ್ಟರ್ ಬದಲಾವಣೆಯಾಗುವ ನಿರೀಕ್ಷೆಯನ್ನು ಹೊಂದಲಾಗಿದೆ. ವಾಸ್ತವದಲ್ಲಿ ಫಿಟ್‌ಮೆಂಟ್ ಫ್ಯಾಕ್ಟರ್ ಒಂದು ಸಾಮಾನ್ಯ ಮೌಲ್ಯವಾಗಿದೆ, ಇದು ಉದ್ಯೋಗಿಗಳ ಮೂಲ ವೇತನದಿಂದ ಗುಣಿಸಲ್ಪಡುತ್ತದೆ. ಅವರ ವೇತನದ ಲೆಕ್ಕಾಚಾರ ಹೀಗಿದೆ. ಈ ಹೆಚ್ಚಳದಿಂದ ನೌಕರರ ಕನಿಷ್ಠ ವೇತನ 18 ಸಾವಿರದಿಂದ 26 ಸಾವಿರಕ್ಕೆ ಏರಿಕೆಯಾಗಲಿದೆ.


COMMERCIAL BREAK
SCROLL TO CONTINUE READING

ಪ್ರಸ್ತುತ, ಸಾಮಾನ್ಯ ಫಿಟ್‌ಮೆಂಟ್ ಫ್ಯಾಕ್ಟರ್ ಶೇಕಡಾ 2.57 ಆಗಿದೆ. ಅಂದರೆ, ಇದರಿಂದ ನೌಕರನು ಮೂಲ ವೇತನ ರೂಪದಲ್ಲಿ 15,500 ರೂಗಳನ್ನು ಪಡೆಯುತ್ತಿದ್ದರೆ, ಅವನ ವೇತನವು ರೂ 15,500*2.57 ಅಥವಾ ರೂ 39,835 ಆಗಿರುತ್ತದೆ. ಆರನೇ CPC ಫಿಟ್‌ಮೆಂಟ್ ಅನುಪಾತವನ್ನು 1.86 ಪ್ರತಿಶತದಲ್ಲಿಯೇ ಇರುವಂತೆ ಪ್ರತಿಪಾದಿಸಿದೆ.


ಫಿಟ್‌ಮೆಂಟ್ ಅಂಶವನ್ನು ಸರ್ಕಾರ ಶೇ 3.68ಕ್ಕೆ ಹೆಚ್ಚಿಸಬೇಕು ಎಂಬುದು ಸರ್ಕಾರಿ ನೌಕರರ ಬೇಡಿಕೆಯಾಗಿದೆ ಎಂಬುದನ್ನು ಹಲವು ವರದಿಗಳಲ್ಲಿ ಹೇಳಲಾಗಿದ . ಇದರಿಂದ ನೌಕರರ ವೇತನ 18,000 ರೂ.ನಿಂದ 26,000 ರೂ.ಗೆ ಏರಿಕೆಯಾಗಲಿದೆ. ಫಿಟ್‌ಮೆಂಟ್ ಅಂಶ ಹೆಚ್ಚಿಸುವಂತೆ ನೌಕರರ ಸಂಘಗಳು ಹಲವು ವರ್ಷಗಳಿಂದ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಲೇ ಬಂದಿವೆ. ಡಿಎ ಹೆಚ್ಚಳದ ನಂತರವೂ ಮೂಲ ವೇತನದಲ್ಲಿ ಹೆಚ್ಚಳವಾಗಬೇಕು ಏಕೆಂದರೆ ಈ ಆಧಾರದ ಮೇಲೆ ಸಂಬಳ ಹೆಚ್ಚಾಗುತ್ತದೆ ಎಂಬುದು ಅವರ ವಾದವಾಗಿದೆ.


ಇದನ್ನೂ ಓದಿ- Good News: ಖಾದ್ಯ ತೈಲ ಬೆಲೆಯಲ್ಲಿ ಭಾರಿ ಇಳಿಕೆ! ಕಾರಣ ಇಲ್ಲಿದೆ


ಸರ್ಕಾರ ಈ ನಿಯಮಗಳನ್ನು ಬದಲಾಯಿಸಿದೆ
ಇತ್ತೀಚೆಗೆ, ಹಣಕಾಸು ಸಚಿವಾಲಯವು HRA ಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದೆ ಅಂದರೆ ಕೇಂದ್ರ ನೌಕರರ ಮನೆ ಬಾಡಿಗೆ ಭತ್ಯೆ ನಿಯಮಗಳು ಎಂದರ್ಥ. ಕೆಲ ಸಂದರ್ಭಗಳಲ್ಲಿ ಸರ್ಕಾರಿ ನೌಕರರಿಗೆ ಎಚ್ ಆರ್ ಎ ಸಿಗುವುದಿಲ್ಲ ಎಂದು ಹೊಸ ನಿಯಮಗಳಲ್ಲಿ ಹೇಳಲಾಗಿದೆ. ಮೊದಲ ನಿಯಮದಲ್ಲಿ, ಉದ್ಯೋಗಿ ಇನ್ನೊಬ್ಬ ಉದ್ಯೋಗಿಗೆ ನೀಡಿದ ಸರ್ಕಾರಿ ವಸತಿ ಸೌಕರ್ಯವನ್ನು ಹಂಚಿಕೊಂಡರೆ, ಆತನಿಗೆ ಎಚ್‌ಆರ್‌ಎ ಸಿಗುವುದಿಲ್ಲ ಎಂದು ಹೇಳಲಾಗಿದೆ.


ಇದನ್ನೂ ಓದಿ-PM Kisan ನಿಯಮದಲ್ಲಿ ಬದಲಾವಣೆ! ಯಾವ ರೈತರಿಗೆ 13ನೇ ಕಂತು ಸಿಗಲ್ಲ ಹೇಳಿದ ಕೃಷಿ ಸಚಿವ


ನೌಕರನ ಕುಟುಂಬ ಸದಸ್ಯರಿಗೆ ಅಂದರೆ ಪೋಷಕರು, ಮಗ-ಮಗಳಿಗೆ ಯಾರಾದರೂ ಮನೆ ಮಂಜೂರು ಮಾಡಿದ್ದರೂ ಸಹ ಈ ಸೌಲಭ್ಯವನ್ನು ಪಡೆಯಲಾಗುವುದಿಲ್ಲ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ಎಲ್‌ಐಸಿ, ರಾಷ್ಟ್ರೀಕೃತ ಬ್ಯಾಂಕ್, ಸಾರ್ವಜನಿಕ ವಲಯದ ಉದ್ಯಮ, ಅರೆ ಸರ್ಕಾರಿ ಸಂಸ್ಥೆಗಳು ಶಾಮೀಲಾಗಿವೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.