ಬೆಂಗಳೂರು : ದೇಶದ ಅತಿದೊಡ್ಡ ವಿಮಾ ಕಂಪನಿ ಹೊಸ ವರ್ಷದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಿದೆ. ಭಾರತೀಯ ಜೀವ ವಿಮಾ ನಿಗಮವು ಈ ಬದಲಾವಣೆಗೆ ಸಂಬಂಧಿಸಿದಂತೆ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ಇದೀಗ ಅದರ ಕಾಂಪೋಸಿಟ್ ಲೈಸೆನ್ಸ್ ಕ್ಲಾಸ್ ಅನ್ನು ಪರಿಗಣಿ ಸಲಾಗುತ್ತಿದೆ.  ಮೂಲಗಳ ಪ್ರಕಾರ, ಎಲ್ಐಸಿಯ ಈ ಬದಲಾವಣೆಯು  ಪಾಲಿಸಿದಾರರಿಗೆ ದೊಡ್ಡ ಲಾಭವನ್ನು ನೀಡುತ್ತದೆ. ಈ ವರ್ಷ ವಿಮೆಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಲು ಎಲ್ಐಸಿ ತಯಾರಿ ನಡೆಸುತ್ತಿದೆ.  


COMMERCIAL BREAK
SCROLL TO CONTINUE READING

ಒಂದಕ್ಕಿಂತ ಹೆಚ್ಚು ವಿಭಾಗಕ್ಕೆ ಅರ್ಜಿ : 
ಪಾಲಿಸಿದಾರರು ಯಾವುದೇ ವರ್ಗದ ವಿಮಾ ವ್ಯವಹಾರದ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ವಿಭಾಗಗಳಿಗೆ ನೋಂದಾಯಿಸಿಕೊಳ್ಳಬಹುದು ಎಂದು ಪ್ರಸ್ತಾವಿತ ಬಿಲ್‌ನ ನಿಬಂಧನೆ ಹೇಳುತ್ತದೆ. 


ಇದನ್ನೂ ಓದಿ : PF Balance : ನಿಮ್ಮ PF ಖಾತೆಯಲ್ಲಿ ಎಷ್ಟು ಹಣವಿದೆ? ಈ ರೀತಿ ತಕ್ಷಣವೇ ಬ್ಯಾಲೆನ್ಸ್ ಪರಿಶೀಲಿಸಿ


ಕಾಂಪೋಸಿಟ್ ಲೈಸೆನ್ಸ್ ನ ಪ್ರಯೋಜನಗಳೇನು  ? : 
ಯಾವುದೇ ಕಂಪನಿಯು ಕಾಂಪೋಸಿಟ್ ಲೈಸೆನ್ಸ್ ಹೊಂದಿದ್ದರೆ, ಒಂದೇ ಕಂಪನಿಯ ಮೂಲಕ ಸಾಮಾನ್ಯ ಮತ್ತು ಆರೋಗ್ಯ ವಿಮಾ ಸೇವೆಗಳನ್ನು ನೀಡಬಹುದು. ಇದಕ್ಕಾಗಿ ಅವರು ಪ್ರತ್ಯೇಕ ವಿಮೆ ಮಾಡಬೇಕಾಗಿಲ್ಲ.


ಇಲ್ಲಿ ನಿರ್ಬಂಧವೂ ಅನ್ವಯ  :
ಏಜೆನ್ಸಿ ಪ್ರಕಾರ, ಎಲ್ಐಸಿ ವಿಮಾ ತಿದ್ದುಪಡಿ ಮಸೂದೆ ಅಂಗೀಕಾರದ ಸಂದರ್ಭದಲ್ಲಿ,ಕಾಂಪೋಸಿಟ್ ಲೈಸೆನ್ಸ್ ಗೆ  ಸಂಬಂಧಿಸಿದ ವಿಮೆ ಮತ್ತು ಇತರ ಎಲ್ಲಾ ಸಮಸ್ಯೆಗಳನ್ನು ಜೀವ ವಿಮಾ ನಿಗಮ ಕಾಯಿದೆ, 1956 ಅನ್ನು ಗಮನದಲ್ಲಿಟ್ಟುಕೊಂಡು ಪರಿಗಣಿಸಲಾಗುತ್ತದೆ.  ಮತ್ತೊಮ್ಮೆ ವಿಮೆ ಮಾಡಿಸುವ ವಿಮಾ ಕಂಪನಿಗಳು ವಿಮಾ ವ್ಯವಹಾರದ ಯಾವುದೇ ವರ್ಗಕ್ಕೆ ನೋಂದಾಯಿಸಿಕೊಳ್ಳುವುದನ್ನು ಇಲ್ಲಿ ನಿರ್ಬಂಧಿಸಲಾಗಿದೆ.


ಇದನ್ನೂ ಓದಿ :  PMKFPO Yojana: ಕೋಟ್ಯಾಂತರ ರೈತ ಬಾಂಧವರಿಗೆ ಬಹುದೊಡ್ಡ ಉಡುಗೊರೆ ನೀಡಿದ PM ಮೋದಿ! ಖಾತೆ ಸೇರಲಿವೆ 15 ಲಕ್ಷ ರೂ.


ವಿಮಾ ಕಾಯಿದೆ 1938 ಮತ್ತು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯಿದೆ, 1999 ಕ್ಕೆ ತಿದ್ದುಪಡಿ ಮಾಡಲು ಈ ವರ್ಷದ ಬಜೆಟ್‌ನಲ್ಲಿ ಈ ಮಸೂದೆಯನ್ನು  ಮಂಡನೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ, ಹಣಕಾಸು ಸಚಿವಾಲಯವು ವಿಮಾ ಕಾನೂನಿನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವತ್ತ ಗಮನ ಹರಿಸಿದೆ. 


ಪಾಲಿಸಿದಾರರಿಗೆ ಸಿಗುವುದು ಉತ್ತಮ ಆದಾಯ : 
ಹಣಕಾಸು ಸಚಿವಾಲಯವು ಪಾಲಿಸಿದಾರರನ್ನು ಉತ್ತೇಜಿಸಲು ಮತ್ತು ಅವರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ವಿಮಾ ಕಾನೂನಿನಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳನ್ನು ಮಾಡುವ ಬಗ್ಗೆ ಯೋಚನೆ ಮಾಡುತ್ತಿದೆ. ಇದರೊಂದಿಗೆ, ಪಾಲಿಸಿದಾರರಿಗೆ ಉತ್ತಮ ಆದಾಯವನ್ನು ಪಡೆಯುವುದರ ಜೊತೆಗೆ, ಮಾರುಕಟ್ಟೆಯಲ್ಲಿ ಹೊಸ ಉದ್ಯೋಗಾವಕಾಶಗಳು ಕೂಡಾ ಸೃಷ್ಟಿಯಾಗುತ್ತವೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.