Big PPF update!: ಈಗ ಪೋಸ್ಟ್ ಆಫೀಸ್ ಭೇಟಿ, ಚೆಕ್ ಪ್ರಕ್ರಿಯೆ ಇಲ್ಲದೆ ಹಣ ಹಿಂಪಡೆದುಕೊಳ್ಳಬಹುದು..
ಹಿರಿಯ ನಾಗರಿಕರು ಈಗ ಯಾವುದೇ ಶಾಖೆಯಿಂದ ತಮ್ಮ ಪರವಾಗಿ ಹಣವನ್ನು ಪೆಡದುಕೊಳ್ಳಲು ಅಧಿಕೃತ ವ್ಯಕ್ತಿ(Authorized Person)ಯನ್ನು ಕಳುಹಿಸಬಹುದು.
ನವದೆಹಲಿ: ಭಾರತೀಯ ಅಂಚೆ ಇಲಾಖೆಯು ದೇಶದ ಹೂಡಿಕೆದಾರರಿಗೆ ಸಾಕಷ್ಟು ಹೂಡಿಕೆ ಯೋಜನೆಗಳನ್ನು ನೀಡುತ್ತಿದೆ. ಈ ಪೈಕಿ ಸಾರ್ವಜನಿಕ ಭವಿಷ್ಯ ನಿಧಿ (Public Provident Fund) ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಸೇರಿ ಅನೇಕ ಯೋಜನೆಗಳಿವೆ. ಈ ಎರಡೂ ವಿಶೇಷವಾಗಿ ಹಿರಿಯ ನಾಗರಿಕರಿಗಾಗಿ ರೂಪಿಸಿರುವ ಅತ್ಯಂತ ಜನಪ್ರಿಯ ಯೋಜನೆಗಳಾಗಿವೆ.
ಇದೀಗ ಹಿರಿಯ ನಾಗರಿಕರಿಗೆ(Senior citizens)ಪರಿಹಾರ ನೀಡುವ ಉದ್ದೇಶದಿಂದ ಇಂಡಿಯಾ ಪೋಸ್ಟ್ 60 ಕ್ಕಿಂತ ಹೆಚ್ಚಿನ ವಯಸ್ಸಿನ ಹೂಡಿಕೆದಾರರಿಗೆ ಸುಲಭ ಮತ್ತು ಸರಳ ಅಯ್ಕೆಯನ್ನು ಒದಗಿಸುತ್ತಿದೆ. ಅವರು ಯಾವುದೇ ಶಾಖೆಗೆ ಭೇಟಿ ನೀಡದೆ ತಮ್ಮ ಹೂಡಿಕೆ ಖಾತೆಯಿಂದ ಭಾಗಶಃ ಹಣವನ್ನು ಹಿಂಪಡೆಯಲು ಅವಕಾಶ ನೀಡಿದೆ.
ಇದನ್ನೂ ಓದಿ: LIC Scheme:LICಯ ಈ ಸೂಪರ್ ಹಿಟ್ ಯೋಜನೆಯಲ್ಲಿ ಸಿಗುತ್ತಿದೆ 1ಕೋಟಿ ರೂ.ಗಳ ಲಾಭ, ಇಲ್ಲಿದೆ ಡಿಟೇಲ್ಸ್
ಹಿರಿಯ ನಾಗರಿಕರು ಈಗ ಯಾವುದೇ ಶಾಖೆಯಿಂದ ತಮ್ಮ ಪರವಾಗಿ ಹಣವನ್ನು ಪೆಡದುಕೊಳ್ಳಲು ಅಧಿಕೃತ ವ್ಯಕ್ತಿ(Authorized Person)ಯನ್ನು ಕಳುಹಿಸಬಹುದು. ಹಣ ವಾಪಸಾತಿ, ಸಾಲ ಅಥವಾ Account Close ಅಥವಾ ಅಕೌಂಟ್‌ಗಳ ಅಕಾಲಿಕ ಮುಚ್ಚುವಿಕೆ(Premature Account Closure) ಅಂಚೆ ಕಚೇರಿಗಳಿಗೆ ಹಾಜರಾಗಲು ಸಾಧ್ಯವಾಗದ ವೃದ್ಧಾಪ್ಯ ಪಿಂಚಣಿದಾರರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಇಂಡಿಯಾ ಪೋಸ್ಟ್ ಈ ಸೌಲಭ್ಯವನ್ನು ಆರಂಭಿಸಿದೆ. ಹಣದ ಪಾವತಿಯನ್ನು ಚೆಕ್‌ನಲ್ಲಿ ಅಥವಾ ಹೂಡಿಕೆದಾರರ ಸುರಕ್ಷತೆಗಾಗಿ ಅಂಚೆ ಕಚೇರಿಯ ಉಳಿತಾಯ ಖಾತೆ/ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಇದನ್ನೂ ಓದಿ: SBI Alert:ಈ ಕೆಲಸ ಮಾಡದೇ ಹೋದಲ್ಲಿ ನಿಂತೇ ಹೋಗಬಹುದು ಬ್ಯಾಂಕಿಂಗ್ ಸೇವೆ
PPF ನಿಧಿ ಹಿಂಪಡೆಯಲು ಹಿರಿಯ ನಾಗರಿಕರು ಏನು ಮಾಡಬೇಕು..?
ಹಿರಿಯ ನಾಗರಿಕರು(Senior citizens) ಅಂಚೆ ಕಚೇರಿಯ ಶಾಖೆಯಿಂದ PPF ಅಥವಾ SCSS ನಿಧಿಯನ್ನು ಪಡೆದುಕೊಳ್ಳಲು ತಮಗಿಷ್ಟವಾದ ಒಬ್ಬ ವ್ಯಕ್ತಿಯನ್ನು ಅಧಿಕೃತಗೊಳಿಸಲು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಬೇಕು:
1. ಸರಿಯಾಗಿ ತುಂಬಿದ ನಮೂನೆ SB-12 ಗೆ ಸಹಿ ಮಾಡಿ. ಅಕ್ಷರಸ್ಥ ಹಿರಿಯ ನಾಗರಿಕರು ಮಾತ್ರ ಈ ಸೌಲಭ್ಯವನ್ನು ಬಳಸಲು ಸಾಧ್ಯವಾಗುತ್ತದೆ. ಬದುಕುಳಿದವರ ಸಂದರ್ಭದಲ್ಲಿ ಅವನು ಅಥವಾ ಅವಳು ಸಿಬ್ಬಂದಿಯನ್ನು ಅಧಿಕೃತಗೊಳಿಸಲು ನಮೂನೆಯಲ್ಲಿ ಸಹಿ ಮಾಡಬಹುದು.
2. ಖಾತೆದಾರರು SB-7 ನಮೂನೆ ಅಥವಾ SB-7 B ಫಾರ್ಮ್‌ಗೆ ಸಹಿ ಮಾಡಬೇಕಾಗುತ್ತದೆ.
3. ವ್ಯಕ್ತಿಯು ಐಡಿಯ ಸ್ವಯಂ ದೃಢೀಕೃತ ಪ್ರತಿಯನ್ನು ಮತ್ತು ಖಾತೆದಾರರ ಹಾಗೂ ದೃಢೀಕೃತ ವ್ಯಕ್ತಿಯ ವಿಳಾಸದ ಪುರಾವೆಗಳನ್ನು ಸಹ ಹೊಂದಿರಬೇಕು.
4. ಹಣವನ್ನು ಹಿಂಪಡೆಯಲು ವ್ಯಕ್ತಿಯು ಪಾಸ್ ಬುಕ್ ಅನ್ನು ಸಹ ಸಲ್ಲಿಸಬೇಕು.
5. ವಹಿವಾಟುಗಳನ್ನು ಪ್ರಕ್ರಿಯೆಗೊಳಿಸುವ ಮೊದಲು ಪೋಸ್ಟ್ ಆಫೀಸಿನ ಅಧಿಕಾರಿಗಳು ಖಾತೆದಾರರ ಸಹಿಯನ್ನು ಪಡೆದುಕೊಳ್ಳುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.