Post Office ಖಾತೆದಾರರಿಗೆ ಬಿಗ್ ರಿಲೀಫ್! ಮಿನಿಮಂ ಬ್ಯಾಲೆನ್ಸ್ ಬಗ್ಗೆ ಮಹತ್ವದ ನಿರ್ಧಾರ
ನೀವು ಪೋಸ್ಟ್ ಆಫೀಸ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ ಮತ್ತು ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳಲು ನೀವು ಮರೆತಿದ್ದರೆ ಈ ಸುದ್ದಿ ನಿಮಗೆ ಪರಿಹಾರ ನೀಡಲಿದೆ.
ನವದೆಹಲಿ: ನೀವು ಪೋಸ್ಟ್ ಆಫೀಸ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ ಮತ್ತು ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳಲು ನೀವು ಮರೆತಿದ್ದರೆ ಈ ಸುದ್ದಿ ನಿಮಗೆ ಪರಿಹಾರ ನೀಡಲಿದೆ. ವಾಸ್ತವವಾಗಿ ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬಾಕಿ ಅಂದರೆ ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ವಿಧಿಸಲಾಗುವ ದಂಡವನ್ನು ಸರ್ಕಾರ ಅರ್ಧದಷ್ಟು ಕಡಿಮೆ ಮಾಡಿದೆ.
ಮಿನಿಮಂ ಬ್ಯಾಲೆನ್ಸ್ ಮೇಲೆ ಅರ್ಧದಷ್ಟು ದಂಡ:
ಹಣಕಾಸು ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಪೋಸ್ಟ್ ಆಫೀಸ್ ಉಳಿತಾಯ (Post Office) ಖಾತೆ ಯೋಜನೆ 2019 ರ ನಿಯಮಗಳಲ್ಲಿನ ಬದಲಾವಣೆಯಡಿಯಲ್ಲಿ ಇದನ್ನು ಮಾಡಲಾಗಿದೆ. ಇದರನ್ವಯ ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿ ಕನಿಷ್ಠ ಬಾಕಿ ಉಳಿಸಿಕೊಳ್ಳದ ಕಾರಣಕ್ಕಾಗಿ ಈಗ 50 ರೂ. (ಜಿಎಸ್‌ಟಿಯೊಂದಿಗೆ) ದಂಡ ವಿಧಿಸಲಾಗುವುದು. ಈ ಮೊದಲು ಈ ದಂಡದ ಮೊತ್ತ 100 ರೂ. ಆಗಿತ್ತು.
ಇದನ್ನೂ ಓದಿ - ಈ 9 Post Office ಯೋಜನೆಗಳಲ್ಲಿ ಹೂಡಿಕೆ ಮಾಡಿ, ಉತ್ತಮ ಆದಾಯ ನಿಮ್ಮದಾಗಿಸಿ
ಎಷ್ಟು ಕನಿಷ್ಠ ಬ್ಯಾಲೆನ್ಸ್ ಅಗತ್ಯ:
ನಿಯಮಗಳ ಪ್ರಕಾರ, ಖಾತೆದಾರನು ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳಲ್ಲಿ (Post Office Saving Account) ಕನಿಷ್ಠ 500 ರೂಪಾಯಿಗಳ ಮಿನಿಮಂ ಬ್ಯಾಲೆನ್ಸ್ ಉಳಿಸಿಕೊಳ್ಳಬೇಕಾಗುತ್ತದೆ. ವಿತ್ತೀಯ ವರ್ಷದ ಕೊನೆಯಲ್ಲಿ ಖಾತೆಯಲ್ಲಿ ಕನಿಷ್ಠ ಬಾಕಿ 500 ರೂಪಾಯಿಗಿಂತ ಕಡಿಮೆಯಿದ್ದರೆ ಅಂತಹ ಖಾತೆದಾರರಿಗೆ ದಂಡ ವಿಧಿಸಲಾಗುತ್ತದೆ. ಇಲ್ಲಿಯವರೆಗೆ ಈ ದಂಡ 100 ರೂ. ಆಗಿತ್ತು, ಇದನ್ನು 50 ರೂ.ಗೆ ಇಳಿಸಲಾಗಿದೆ.
ಈ ರೀತಿ ಖಾತೆಯನ್ನು ಮುಚ್ಚಲಾಗುವುದು:
ನಿಮ್ಮ ಖಾತೆಯಿಂದ ನಿರ್ವಹಣಾ ಶುಲ್ಕವನ್ನು ಕಡಿತಗೊಳಿಸುವ ಮೂಲಕ ನಿಮ್ಮ ಖಾತೆಯಲ್ಲಿನ ಬ್ಯಾಲೆನ್ಸ್ ಶೂನ್ಯವಾಗಿದ್ದರೆ, ನಂತರ ಪೋಸ್ಟ್ ಆಫೀಸ್ (Post Office) ಖಾತೆಯನ್ನು ಸ್ವಯಂಚಾಲಿತವಾಗಿ ಮುಚ್ಚಲಾಗುತ್ತದೆ. ಇದಲ್ಲದೆ, ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಇಡದಿದ್ದರೆ, ಬಡ್ಡಿಯನ್ನು ಸಹ ಪಾವತಿಸಲಾಗುವುದಿಲ್ಲ. ಸತತ ಮೂರು ಹಣಕಾಸು ವರ್ಷಗಳಲ್ಲಿ ಯಾವುದೇ ವಹಿವಾಟು ನಡೆಯದಿದ್ದರೆ, ಅಂದರೆ ಖಾತೆಯಲ್ಲಿ ಹಣವನ್ನು ಠೇವಣಿ ಮಾಡದಿರುವುದು ಅಥವಾ ಹಿಂತೆಗೆದುಕೊಳ್ಳದಿರುವ ಸಂದರ್ಭಗಳಲ್ಲಿಯೂ ಖಾತೆಯನ್ನು ಮುಚ್ಚಲಾಗುವುದು.
ಇದನ್ನೂ ಓದಿ - Post Office: ಪೋಸ್ಟ್ ಆಫೀಸ್‌ನ ಹಲವು ವೈಶಿಷ್ಟ್ಯಗಳು ಈ ಅಪ್ಲಿಕೇಶನ್‌ನಲ್ಲಿ ಲಭ್ಯ
ಇದಕ್ಕಾಗಿಯೇ ನಿಮಗೆ ಅಂಚೆ ಕಚೇರಿಯಲ್ಲಿ ದಂಡ ವಿಧಿಸಲಾಗುತ್ತದೆ:
ಉಳಿತಾಯ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ದಂಡ ವಿಧಿಸುವುದರ ಜೊತೆಗೆ ವಿವಿಧ ರೀತಿಯ ಶುಲ್ಕಗಳನ್ನು ಸಹ ವಿಧಿಸಲಾಗುತ್ತದೆ. ಉಳಿತಾಯ ಖಾತೆಯಲ್ಲಿ (Savings Account) ತಿಂಗಳಲ್ಲಿ ನಾಲ್ಕು ಬಾರಿ ಹಣವನ್ನು ಹಿಂಪಡೆಯುವುದು ಉಚಿತ. ಇದರ ನಂತರ, ಪ್ರತಿ ವಾಪಸಾತಿಗೆ 0.50 ಪ್ರತಿಶತ ಅಥವಾ 25 ರೂಪಾಯಿವರೆಗೆ ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕವನ್ನು ವಿತ್ ಡ್ರಾ ಸಂದರ್ಭದಲ್ಲಿ ಮಾತ್ರ ವಿಧಿಸಲಾಗುತ್ತದೆ, ಠೇವಣಿ ಇರಿಸಲು ಯಾವುದೇ ಶುಲ್ಕವಿಲ್ಲ. ಮೂಲ ಉಳಿತಾಯ ಖಾತೆಯ ಹೊರತಾಗಿ, ನಿಮ್ಮಲ್ಲಿ ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆ ಇದ್ದರೆ, ಹೆಚ್ಚುವರಿ ಶುಲ್ಕವಿಲ್ಲದೆ ನೀವು ಪ್ರತಿ ತಿಂಗಳು 25 ಸಾವಿರ ರೂ. ವಿತ್ ಡ್ರಾ ಮಾಡಬಹುದು. ಅದರ ನಂತರ, ಪ್ರತಿ ಬಾರಿ ಹಿಂಪಡೆಯಲಾದ ಒಟ್ಟು ಮೊತ್ತದ ಶೇಕಡಾ 0.50 ಅಥವಾ ಕನಿಷ್ಠ 25 ರೂಪಾಯಿಗಳನ್ನು ನಿಮಗೆ ಶುಲ್ಕವಾಗಿ ವಿಧಿಸಲಾಗುತ್ತದೆ.
ಹಣವನ್ನು ಠೇವಣಿ ಇರಿಸಲು ಸಹ ಶುಲ್ಕ:
ನೀವು ತಿಂಗಳಲ್ಲಿ 10,000 ರೂ.ವರೆಗೆ ನಗದು ಠೇವಣಿ ಮಾಡಿದರೆ ಯಾವುದೇ ಶುಲ್ಕವಿಲ್ಲ. ನಗದು ಠೇವಣಿ ಮಿತಿಯ ನಂತರ, ಪ್ರತಿ ವಹಿವಾಟಿನ ಮೇಲೆ 20 ರೂ. ಮಿನಿ ಸ್ಟೇಟ್‌ಮೆಂಟ್ ಪಡೆಯಲು, ನೀವು ಕನಿಷ್ಠ 1 ರೂ. ಮತ್ತು ಗರಿಷ್ಠ 20 ರೂ. ಪಾವತಿಸಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.