PNB Satkar Scheme - ಕರೋನಾ ಅವಧಿಯಲ್ಲಿ, ಹಲವು ಜನರು ತಮ್ಮ ನೌಕರಿಗಳನ್ನು ಕಳೆದುಕೊಂಡಿದ್ದಾರೆ. ಹಲವರ ವ್ಯಾಪಾರಗಳು ಕೂಡ ಸ್ಥಗಿತಗೊಂಡಿವೆ.   ವಿಮಾನಯಾನ ಕ್ಷೇತ್ರದಿಂದ ಹಿಡಿದು ಆತಿಥ್ಯ ವಲಯದವರೆಗೆ, ಹುದ್ದೆಯ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಉಂಟಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್  (PNB Satkar Scheme) ಕರೋನಾ ಸಾಂಕ್ರಾಮಿಕ ರೋಗದಿಂದ ಆತಿಥ್ಯ ವಲಯವನ್ನು ಉನ್ನತಗೊಳಿಸಲು ಉತ್ತಮವಾದ ಯೋಜನೆಯನ್ನು ಪರಿಚಯಿಸಿದೆ. PNB (Punjab National Bank) ಆತಿಥ್ಯ ಯೋಜನೆಯಲ್ಲಿ, ಆತಿಥ್ಯ ವಲಯಕ್ಕೆ ಸಂಬಂಧಿಸಿದ ಜನರು ತಮ್ಮ ವ್ಯಾಪಾರವನ್ನು ಅಪ್ಗ್ರೇಡ್, ರಿನೋವೆಟ್ ಹಾಗೂ ಎಕ್ಸ್ಪಾಂಡ್ ಮಾಡಲು ಸುಲಭವಾಗಿ ಸಾಲಗಳನ್ನು ಪಡೆಯಬಹುದು.


COMMERCIAL BREAK
SCROLL TO CONTINUE READING

ಯಾರು ಈ ಲಾಭವನ್ನು ಪಡೆಯಬಹುದು?
PNB ಬ್ಯಾಂಕ್ PNB Satkar Scheme ಅಡಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಲಾಡ್ಜ್‌ಗಳು, ಅತಿಥಿಗೃಹಗಳು, ಮೋಟೆಲ್‌ಗಳು, ಧಾಬಾಗಳು, ಪಿಜ್ಜಾ ಕೇಂದ್ರಗಳು, ಮೆಸ್, ಕ್ಯಾಂಟೀನ್‌ಗಳು, ಅಡುಗೆ ಸೇವೆಗಳು, ಸೇವಾ ಅಪಾರ್ಟ್‌ಮೆಂಟ್‌ಗಳು, ಔತಣಕೂಟಗಳು, ಕಾಫಿ ಅಂಗಡಿ ಇತ್ಯಾದಿಗಳಿಗೆ ಭೂಮಿ ಖರೀದಿಸಲು, ವ್ಯಾಪಾರ ಅಪ್ಗ್ರೇಡ್ ಮಾಡಲು ಅಥವಾ ಎಕ್ಸ್ಪಾಂಡ್ ಮಾಡಲು ಸಾಲದ ಅವಶಯ್ಕತೆಯನ್ನು ಪೂರೈಸಲಿದೆ.


ಸಾಲ ಪಡೆಯಲು ಅರ್ಹತೆ ಏನು?
PNB ಯ Satkar Scheme ನ ಲಾಭವನ್ನು  ವ್ಯಕ್ತಿ, ಪ್ರೋಪ್ರಾಯ್ಟರ್ ಶಿಪ್, ಪಾರ್ಟ್ನರ್ ಶಿಪ್, LLP ಪ್ರೈವೇಟ್ - ಪಬ್ಲಿಕ್ ಲಿಮಿಟೆಡ್ ಇತ್ಯಾದಿಗಳು ಪಡೆಯಬಹುದು. ಇದಲ್ಲದೆ MSME ಸೇವಾ ವಲಯಕ್ಕೆ ಸಂಬಂಧಿಸಿದ ಮತ್ತು ಆರಂಭಿಕ ಹೂಡಿಕೆ 5 ಕೋಟಿ ರೂ.ಗೂ ಅಧಿಕವಾಗಿರದ ಯುನಿಟ್ ಗಳು ಕೂಡ ಇದರ ಲಾಭ ಪಡೆಯಬಹುದು.


ಇದನ್ನೂ ಓದಿ-#DeshKaZee: ZEEL-SONY Merger ಗೆ ಸಂಬಂಧಿಸಿದಂತೆ 'Invesco ಯಾರ ಕೈ ಗೊಂಬೆ?' ಎಂದು ಪ್ರಶ್ನಿಸಿದ Dr. Subhash Chandra


ಎಷ್ಟು ಸಾಲ ಸಿಗಲಿದೆ?
PNB Satkar Scheme ಅಡಿ 10 ಕೋಟಿ ರೂ.ಗಳವರೆಗೆ ಸಾಲ ಪಡೆಯಬಹುದು. ಇದಲ್ಲದೇ, ನೀವು 50 ಲಕ್ಷ ರೂ.ವರೆಗಿನ ಓವರ್‌ಡ್ರಾಫ್ಟ್ ಅನ್ನು ಸಹ ತೆಗೆದುಕೊಳ್ಳಬಹುದು. PNB ಯ ಈ ಸತ್ಕಾರ್ ಯೋಜನೆಯಲ್ಲಿ, ಆತಿಥ್ಯ ವಲಯವು 10 ವರ್ಷಗಳವರೆಗೆ ಸಾಲವನ್ನು ಪಡೆಯಲಿದೆ. ಇದರಲ್ಲಿ ಗ್ರಾಹಕರು 24 ತಿಂಗಳ ಗರಿಷ್ಠ ಮಿತಿಯ ಮೊನೊಟೋರಿಯಂ ಪಡೆಯಲಿದ್ದಾರೆ. 


ಇದನ್ನೂ ಓದಿ-PM Awas Yojana 2021: ಪಿಎಂ ಅವಾಜ್ ಯೋಜನೆಯಲ್ಲಿ ಸಿಗಲಿದೆ ಬಹುದೊಡ್ಡ ಸೌಲಭ್ಯ , ತಕ್ಷಣ ಪಡೆಯಿರಿ ಲಾಭ


ಎಷ್ಟು ಸೆಕ್ಯೂರಿಟಿ ಇಡಬೇಕು?
PNB ಯ ಈ ಯೋಜನೆಯಲ್ಲಿ, ಗ್ರಾಹಕರು ಮುಂಗಡದಲ್ಲಿ ಕನಿಷ್ಠ ಶೇ.40 ರಷ್ಟು  Collaterals Coverage ಹೊಂದಿರಬೇಕು. ಇದರ ಹೊರತಾಗಿ, ನಿಮ್ಮ ಪ್ರಾಥಮಿಕ ಭದ್ರತೆ ಭೂಮಿ ಮತ್ತು ಕಟ್ಟಡದಲ್ಲಿದ್ದರೆ, ಬಾಕಿ ಇರುವ ಸಾಲದ ಶೇ. 135 ಕ್ಕಿಂತ ಹೆಚ್ಚಿನ ಉಳಿಕೆ ಮೌಲ್ಯವನ್ನು  Collateral Security ಎಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ-LPG Price Hike: ಹಬ್ಬದ ಮೊದಲು ಹಣದುಬ್ಬರದ ಹೊಡೆತ! ಮತ್ತೆ LPG ಸಿಲಿಂಡರ್ ಬೆಲೆ ಏರಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.