SBI: ಕೋಟ್ಯಾಂತರ ಎಸ್‌ಬಿಐ ಗ್ರಾಹಕರಿಗೆ ಬಿಗ್ ಶಾಕ್, ಇಂದಿನಿಂದ ಈ ಕೆಲಸಕ್ಕೆ ಶುಲ್ಕ ಹೆಚ್ಚಳ
SBI Interest Rate Hike: ಭಾರತದ ಸರ್ಕಾರಿ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇದು ಕೋಟ್ಯಾಂತರ ಎಸ್‌ಬಿಐ ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿದೆ.
SBI Interest Rate Hike: ದೇಶದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನೀವು ಯಾವುದೇ ಸಾಲ ಸೌಲಭ್ಯವನ್ನು ಪಡೆದಿದ್ದರೆ ಅಥವಾ ಮುಂದಿನ ದಿನಗಳಲ್ಲಿ ಸಾಲ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ಇಂದಿನಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇದು ಎಸ್‌ಬಿಐ ಕೋಟ್ಯಾಂತರ ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿದೆ. ಎಂಸಿಎಲ್‌ಆರ್ ಹೆಚ್ಚಳದಿಂದಾಗಿ ಎಸ್‌ಬಿಐ ಹೋಂ ಲೋನ್ ಪಡೆದಿರುವ ಗ್ರಾಹಕರು ಇಂದಿನಿಂದ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ:
ಇತ್ತೀಚಿಗೆ ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಬಡ್ಡಿದರವನ್ನು ಹೆಚ್ಚಿಸುವ ನಿರ್ಧಾರಕ್ಕೆ ಬರಲಾಗಿದ್ದು, ಎಂಸಿಎಲ್‌ಆರ್ ಹೆಚ್ಚಳದ ಬಗ್ಗೆ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಗಮನಾರ್ಹವಾಗಿ ಮೇ ತಿಂಗಳಿನಿಂದ ಆರ್‌ಬಿಐ ರೆಪೊ ದರವನ್ನು ಶೇ.2.25ರಷ್ಟು ಹೆಚ್ಚಿಸಿದೆ.
ಇದನ್ನೂ ಓದಿ- Indian Railways : ರೈಲು ಪ್ರಯಾಣಿಕರಿಗೆ ಬಿಗ್ ಶಾಕ್ : ಟಿಕೆಟ್ ದರ ಏರಿಕೆ? ಹಿರಿಯ ನಾಗರಿಕರಿಗೆ ವಿನಾಯಿತಿ!
ಎಸ್‌ಬಿಐ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಎಂಸಿಎಲ್‌ಆರ್ ಹೆಚ್ಚಳದ ವಿವರ ಇಂತಿದೆ:-
* ಒಂದರಿಂದ ಮೂರು ತಿಂಗಳ ಎಂಸಿಎಲ್‌ಆರ್ ಅನ್ನು 7.75% ರಿಂದ 8% ಕ್ಕೆ ಹೆಚ್ಚಿಸಲಾಗಿದೆ.
* ಆರು ತಿಂಗಳಿಂದ ಒಂದು ವರ್ಷದವರೆಗೆ ಎಂಸಿಎಲ್‌ಆರ್ ಅನ್ನು ಶೇ.8.05ರಿಂದ ಶೇ.8.30ಕ್ಕೆ ಹೆಚ್ಚಿಸಲಾಗಿದೆ.
* ಎರಡು ವರ್ಷದ ಎಂಸಿಎಲ್‌ಆರ್ ಶೇ.8.25ರಿಂದ ಶೇ.8.50ಕ್ಕೆ ಏರಿಕೆಯಾಗಿದೆ.
* ಅದೇ ಸಮಯದಲ್ಲಿ, ಮೂರು ವರ್ಷಗಳ ಎಂಸಿಎಲ್ಆರ್ 8.35% ರಿಂದ 8.60% ಕ್ಕೆ ಹೆಚ್ಚಳಗೊಂಡಿದೆ.
ಇದನ್ನೂ ಓದಿ- Gas Cylinder Booking: ಹೊಸ ವರ್ಷಕ್ಕೂ ಮೊದಲೇ ಗುಡ್ ನ್ಯೂಸ್, 1000 ರೂ. ಕಡಿಮೆ ಬೆಲೆಯಲ್ಲಿ ಬುಕ್ ಮಾಡಿ ಗ್ಯಾಸ್ ಸಿಲಿಂಡರ್
ಎಫ್‌ಡಿ ದರಗಳನ್ನೂ ಹೆಚ್ಚಿಸಿರುವ ಎಸ್‌ಬಿಐ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಬಡ್ಡಿದರವನ್ನು ಮಾತ್ರ ಹೆಚ್ಚಿಸಿಲ್ಲ. ಬದಲಿಗೆ ಠೇವಣಿಗಳ ಬಡ್ಡಿ ದರವನ್ನು ಕೂಡ ಹೆಚ್ಚಿಸಿದೆ. ಹೊಸ ಎಸ್‌ಬಿಐ ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿ ದರಗಳು 13 ಡಿಸೆಂಬರ್ 2022 ರಿಂದ ಜಾರಿಗೆ ಬಂದಿವೆ.
ಇತ್ತೀಚಿನ ಪರಿಷ್ಕರಣೆಯ ನಂತರ, ಎಸ್‌ಬಿಐ ಎಫ್‌ಡಿ ದರಗಳು ಕೆಳಕಂಡಂತಿವೆ:-
>> 7 ದಿನಗಳಿಂದ 45 ದಿನಗಳು - 3%
>> 46 ದಿನಗಳಿಂದ 179 ದಿನಗಳು - 4.5%
>> 180 ದಿನಗಳಿಂದ 210 ದಿನಗಳು - 5.25%
>> 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ - 5.50 ರಿಂದ 5.75
>> 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ - 6.10 ರಿಂದ 6.75
>> 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ - 6.25 ರಿಂದ 6.75
>> 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ - 6.25 ರಿಂದ 6.10
>> 5 ವರ್ಷಗಳು ಮತ್ತು 10 ವರ್ಷಗಳವರೆಗೆ - 6.10 ರಿಂದ 6.25
ಇದಲ್ಲದೆ ಎಸ್‌ಬಿಐ ಹಿರಿಯ ನಾಗರಿಕರಿಗೆ ಎಲ್ಲಾ ಅವಧಿಗಳಲ್ಲಿ ಹೆಚ್ಚುವರಿ 50 ಬಿಪಿಎಸ್ ಬಡ್ಡಿ ದರವನ್ನು ನೀಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.