LIC ಪಾಲಸಿ ಹೊಂದಿರುವವರಿಗೆ ಬಿಗ್ ಶಾಕ್... ಇನ್ಮುಂದೆ ಪಾಲಸಿಗಳ ಮೇಲೆ ಸಿಗಲ್ಲ ಈ ಲಾಭ!
LIC Policy Update: ದೇಶದ ಅತಿದೊಡ್ಡ ಜೀವ ವಿಮಾ ಕಂಪನಿಯಾಗಿರುವ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಯಿಂದ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಈ ಹಿಂದೆ ಕೇಂದ್ರ ಸರ್ಕಾರವು ಎಲ್ಐಸಿ ಮೇಲೆ ಭಾರಿ ತೆರಿಗೆಯ ಲಾಭವನ್ನು ನೀಡುತ್ತಿತ್ತು, ಆದರೆ ಈ ಬಾರಿ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ.
LIC Update: ದೇಶದ ಅತಿದೊಡ್ಡ ಜೀವ ವಿಮಾ ಕಂಪನಿ ಭಾರತೀಯ ಜೀವ ವಿಮಾ ನಿಗಮದಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಈ ಹಿಂದೆ ಕೇಂದ್ರ ಸರ್ಕಾರವು ಎಲ್‌ಐಸಿ ಪಾಲಸಿಗಳ ಮೇಲೆ ಭಾರಿ ತೆರಿಗೆಯ ಲಾಭವನ್ನು ನೀಡುತ್ತಿತ್ತು, ಆದರೆ ಈ ಬಾರಿ ನಿಯಮಗಳಲ್ಲಿ ದೊಡ್ಡ ಬದಲಾವಣೆಯನ್ನು ಮಾಡಲಾಗಿದೆ, ಇದರಿಂದ ಜನರು ಎಲ್ಐಸಿ ಪಾಲಿಸಿ ತೆಗೆದುಕೊಂಡರೂ ತೆರಿಗೆ ಪಾವತಿಸಬೇಕಾಗಲಿದೆ. ಆದಾಯ ತೆರಿಗೆ ನಿಯಮಗಳ ಪ್ರಕಾರ, ಎಲ್ಐಸಿಯ ಪಾಲಿಸಿಯನ್ನು ಖರೀದಿಸುವುದು ತೆರಿಗೆ ವಿನಾಯಿತಿಯ ಲಾಭವನ್ನು ನೀಡುತ್ತದೆ. ತೆರಿಗೆ ವಿನಾಯಿತಿಯಿಂದಾಗಿ ವಿಮಾ ಕಂಪನಿಗಳು ಬಹಳ ಬಲವಾದ ಸ್ಥಾನದಲ್ಲಿವೆ. ಗ್ರಾಹಕರು ಹೆಚ್ಚಾಗಿ ಎಲ್‌ಐಸಿಯ ಪಾಲಿಸಿಯನ್ನು ತೆರಿಗೆ ಉಳಿಸಲು ಮಾತ್ರ ತೆಗೆದುಕೊಳ್ಳುತ್ತಾರೆ.
ಚೇರ್ಮನ್ ಹಂಚಿಕೊಂಡ ಮಾಹಿತಿ ಏನು?
ಈ ಕುರಿತು ಮಾಹಿತಿ ನೀಡಿದ ಎಲ್ಐಸಿ ಚೇರ್ಮನ್, ಕಂಪನಿಯ ಒಟ್ಟು ವಾರ್ಷಿಕ ಪ್ರೀಮಿಯಂನ ಅರ್ಧದಷ್ಟು ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಬರುತ್ತದೆ ಎಂದು ಹೇಳಿದ್ದಾರೆ. ಹಣಕಾಸು ವರ್ಷದ ಕೊನೆಯಲ್ಲಿ, ಜನರು ವಿಮಾ ಪಾಲಿಸಿಗಳನ್ನು ಖರೀದಿಸಲು ಹೆಚ್ಚಿನ ಆಸಕ್ತಿಯನ್ನು ತೋರುತ್ತಾರೆ. ಜನರು ಯೋಚಿಸದೆ ತಮ್ಮ ತೆರಿಗೆಯನ್ನು ಉಳಿಸಲು ವಿಮಾ ಪಾಲಿಸಿಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ-ದೇಶದ ಕೋಟ್ಯಾಂತರ ರೈತರಿಗೊಂದು ಸತಸದ ಸುದ್ದಿ, ನಿತ್ಯ 50 ರೂ.ಹೂಡಿಕೆ ಮಾಡಿ 35 ಲಕ್ಷ ಲಾಭ ಪಡೆಯುವ ಸುವರ್ಣಾವಕಾಶ!
ಬಜೆಟ್‌ನಲ್ಲಿ ಮಹತ್ವದ ನಿರ್ಧಾರ ಪ್ರಕಟಣೆ
ಈ ಕುರಿತು 2023 ರ ತನ್ನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಇನ್ನು ಮುಂದೆ 5 ಲಕ್ಷ ರೂ.ಗಿಂತ ಹೆಚ್ಚಿನ ಪ್ರೀಮಿಯಂನ ಪಾಲಿಸಿಗಳ ಮ್ಯಾಚುರಿಟಿ ಮೇಲೆ ತೆರಿಗೆಯನ್ನು ಪಾವತಿಸಬೇಕಾಗಲಿದೆ ಎಂದು ಹೇಳಿದೆ. ಇದರೊಂದಿಗೆ, ಸರ್ಕಾರವು ದೇಶಾದ್ಯಂತ ಹೊಸ ತೆರಿಗೆ ಪದ್ಧತಿಯನ್ನು ಉತ್ತೇಜಿಸುತ್ತಿದೆ, ಇದರಲ್ಲಿ ತೆರಿಗೆಯ ಮೇಲೆ ಯಾವುದೇ ವಿನಾಯಿತಿ ಇಲ್ಲ. ಅಂದರೆ, ಈಗ ತೆರಿಗೆ ಉಳಿಸಲು ಎಲ್‌ಐಸಿ ಪಾಲಿಸಿಯನ್ನು ತೆಗೆದುಕೊಳ್ಳುವವರು ಭವಿಷ್ಯದಲ್ಲಿ ಅದನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬಹುದು.
ಇದನ್ನೂ ಓದಿ-DA Arrears Update: ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೀಘ್ರವೇ ಸಿಗಲಿದೆ ಈ ಸಂತಸದ ಸುದ್ದಿ!
ಎಲ್‌ಐಸಿ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ
ಮುಂಬರುವ ದಿನಗಳಲ್ಲಿ ಸರ್ಕಾರದ ಈ ನಿರ್ಧಾರದ ಪರಿಣಾಮ ವಿಮಾ ಕಂಪನಿಗಳ ಮೇಲೂ ಆಗಲಿದೆ. ಇದರ ನೇರ ಪರಿಣಾಮ ಎಲ್ ಐಸಿಯ ಬೆಳವಣಿಗೆಯ ಮೇಲೆ ಕಾಣಿಸಿಕೊಳ್ಳಲಿದೆ.
ಇದನ್ನೂ ಓದಿ-PF ಚಂದಾದಾರರಿಗೊಂದು ಸಂತಸದ ಸುದ್ದಿ, ಸಿಗಲಿದೆ ಈ ಲಾಭ, ಇಲ್ಲಿದೆ ಡೀಟೇಲ್ಸ್!
ಮಹತ್ವದ ಮಾಹಿತಿ ನೀಡಿದ ಕಂಪನಿಯ ಚೇರ್ಮನ್
ಈ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಂಡ ಎಲ್ಐಸಿ ಅಧ್ಯಕ್ಷರು ಪ್ರಸ್ತುತ ಪ್ರೀಮಿಯಂ ರೂ 5 ಲಕ್ಷಕ್ಕಿಂತ ಹೆಚ್ಚು ಇರುವ ಅಂತಹ ಪಾಲಸಿಗಳು ಶೇ. 1 ಕ್ಕಿಂತ ಕಡಿಮೆ ಇರುವುದರಿಂದ ಇದು ಕಡಿಮೆ ಪ್ರಮಾಣದಲ್ಲಿ ಪ್ರಭಾವ ಬೀರುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ, ಮತ್ತೊಂದೆಡೆ, ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಎಲ್ಐಸಿ ಪಾಲಿಸಿಯನ್ನು ಹೊಂದಿದ್ದರೆ ಮತ್ತು ಅವರ ಒಟ್ಟು ಪ್ರೀಮಿಯಂ 5 ಲಕ್ಷಕ್ಕಿಂತ ಹೆಚ್ಚಿದ್ದರೆ, ಗ್ರಾಹಕರು ಅವುಗಳ ಮೇಲೆ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.