ನವದೆಹಲಿ : ಸರ್ಕಾರದ ಉಚಿತ ಪಡಿತರ ಯೋಜನೆಯ ಲಾಭವನ್ನು ಪಡೆಯುತ್ತಿದ್ದವರಿಗೆ   ಇದು ಶಾಕಿಂಗ್ ಸುದ್ದಿ. ಇನ್ನು ಮುಂದೆ ಪಡಿತರ ಚೀಟಿದಾರರು ಆಹಾರ ಧಾನ್ಯಗಳ ವೆಚ್ಚವನ್ನು ಪಾವತಿಸಬೇಕಾಗುತ್ತದೆ. ಯುಪಿ ಸರ್ಕಾರ ಹೊರಡಿಸಿದ ಇತ್ತೀಚಿನ ಸೂಚನೆಗಳ ಪ್ರಕಾರ, ಸೆಪ್ಟೆಂಬರ್‌ನಿಂದ ಪಡಿತರ ಚೀಟಿದಾರರಿಗೆ ಉಚಿತ ಪಡಿತರ ವಿತರಣೆಯನ್ನು ನಿಲ್ಲಿಸಲಾಗುವುದು.  ಆದರೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ, ಉಚಿತ ಅಕ್ಕಿ ಸೆಪ್ಟೆಂಬರ್ ವರೆಗೆ ಲಭ್ಯವಿರುತ್ತದೆ.


COMMERCIAL BREAK
SCROLL TO CONTINUE READING

2020 ರಲ್ಲಿ ಕರೋನಾ ಮೊದಲ ಅಲೆಯ ಸಮಯದಲ್ಲಿ ಪಡಿತರ ಚೀಟಿ ಹೊಂದಿರುವವರಿಗೆ ಪ್ರಧಾನ ಮಂತ್ರಿ ಗರೀಬ್ ಅನ್ನ ಕಲ್ಯಾಣ ಯೋಜನೆ ಅಡಿಯಲ್ಲಿ ಪ್ರತಿ ಯೂನಿಟ್‌ಗೆ 5 ಕೆಜಿ ಗೋಧಿ ಅಥವಾ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡಲಾಗಿತ್ತು. ಇದಾದ ನಂತರ ಉತ್ತರ ಪ್ರದೇಶದ ಯೋಗಿ ಸರ್ಕಾರ ಕೂಡಾ ನಿಯಮಿತವಾಗಿ ವಿತರಿಸುವ ಪಡಿತರವನ್ನು ಉಚಿತವಾಗಿ  ನೀಡಲು ಆರಂಭಿಸಿತು. 


ಇದನ್ನೂ ಓದಿ Gold Price Today : ಎಷ್ಟು ಏರಿಕೆಯಾಯಿತು ಚಿನ್ನದ ಬೆಲೆ ? ಏನು ಹೇಳುತ್ತದೆ ಇಂದಿನ ಮಾರುಕಟ್ಟೆ ?


ಪಡಿತರ ವಿತರಣೆಯು ಎರಡು ತಿಂಗಳ ವಿಳಂಬ : 
ಜೂನ್ ರವರೆಗೆ ಉಚಿತ ಪಡಿತರ ವಿತರಣೆಗೆ ಯುಪಿಯ ಯೋಗಿ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಇದರ ಪ್ರಕಾರ ಜುಲೈನಿಂದ ಪಡಿತರ ಚೀಟಿದಾರರು ನಿಯಮಿತವಾಗಿ ಪಡಿತರ ವಿತರಣೆಗೆ ಹಣ ಪಾವತಿಸಬೇಕಾಗುತ್ತದೆ. ಇದರ ಅಡಿಯಲ್ಲಿ, ಗೋಧಿಗೆ ಕೆಜಿಗೆ 2 ರೂ. ಮತ್ತು ಅಕ್ಕಿಗೆ 3 ರೂ. ದರವನ್ನು ಪಾವತಿಸಬೇಕಾಗುತ್ತದೆ. ಆದರೆ ಪ್ರಸ್ತುತ ಪಡಿತರ ವಿತರಣೆ ಎರಡು ತಿಂಗಳು ತಡವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜೂನ್ ನಿಂದ ಆಗಸ್ಟ್ ವರೆಗೆ ಉಚಿತ ಪಡಿತರ ದೊರೆಯುತ್ತಿದೆ.


ಸೆಪ್ಟೆಂಬರ್ ವರೆಗೆ ಕೇಂದ್ರದಿಂದ ಉಚಿತ ಪಡಿತರ ಲಭ್ಯ :
ಪಡಿತರ ಚೀಟಿದಾರರು ಸೆಪ್ಟೆಂಬರ್ ನಿಂದ ಪಡಿತರ ಬದಲು ಹಣ ಪಾವತಿಸಬೇಕಾಗುತ್ತದೆ.  ಪ್ರಸ್ತುತ, ಪ್ರಧಾನ ಮಂತ್ರಿ ಗರೀಬ್ ಅನ್ನ ಕಲ್ಯಾಣ ಯೋಜನೆಯಡಿ ಪ್ರತಿ ಘಟಕಕ್ಕೆ 5 ಕೆಜಿ ಅಕ್ಕಿ ವಿತರಣೆ ಮುಂದುವರಿಯುತ್ತದೆ.  ಸೆಪ್ಟೆಂಬರ್ ವರೆಗೆ ಉಚಿತ ಪಡಿತರವನ್ನು ವಿತರಿಸಲು ಈ ಯೋಜನೆಯನ್ನು ಮೂರು ತಿಂಗಳು ವಿಸ್ತರಿಸುವುದಾಗಿ ಈ ಹಿಂದೆ ಕೇಂದ್ರ ಸರ್ಕಾರ ಹೇಳಿತ್ತು. ವು ಮಾತನಾಡಿತ್ತು. ಇದರ ಪ್ರಕಾರ ಅಕ್ಟೋಬರ್‌ನಿಂದ ಪಡಿತರ ಚೀಟಿದಾರರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ.


ಇದನ್ನೂ ಓದಿ : Loan : ಸರ್ಕಾರ ನೀಡುತ್ತಿದೆ ಗ್ಯಾರಂಟಿ ಇಲ್ಲದೆ ಸಾಲ : ಈ ದಾಖಲೆಗಳು ಮಾತ್ರ ಅವಶ್ಯ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.